ಜಿಲ್ಲಾ ಸುದ್ದಿತಾಜಾ ಸುದ್ದಿ

ಜು. ೧೬: ಕೆ. ಭಾಸ್ಕರ್ ಭಟ್ಟ ಅವರ ಜನ್ಮ ಶತಮಾನೋತ್ಸವ ..

Share Below Link

ಸಾಗರ : ತಾಲ್ಲೂಕಿನ ಭೀಮನ ಕೋಣೆ ಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂದಿರದಲ್ಲಿ ಜು. ೧೬ ರಂದು ಬೆಳಿಗ್ಗೆ ೧೦ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ, ಕವಿ ಕಿಶೋರ, ಸಾಹಿತ್ಯ ಭೂಷಣ ವಿದ್ವಾನ್ ಕೆ. ಭಾಸ್ಕರ್ ಭಟ್ಟ ಅವರ ಜನ್ಮ ಶತ ಮಾನೋತ್ಸವ ಹಾಗೂ ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜನ್ಮ ಶತಮಾನೋತ್ಸವ ಸಮಿತಿ ಪ್ರಧಾನ ಸಂಚಾಲಕ ಬಿ.ಎಚ್.ರಾಘವೇಂದ್ರ ತಿಳಿಸಿದರು.


ಮಂಗಳವಾರ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು, ವಿದ್ವಾನ್ ಕೆ. ಭಾಸ್ಕರ ಭಟ್ಟ ಅವರು ಅದ್ವಿತೀಯ ಸಂಸ್ಕತ ವಿದ್ವಾಂಸ ರಾಗಿದ್ದು, ಮೈಸೂರಿನ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ರಾಜ್ಯದಾದ್ಯಂತ ಸಂಸ್ಕತ ಪಾಠಶಾಲೆ ತೆರೆಯುವಲ್ಲಿ ಪ್ರಮು ಖಪಾತ್ರ ವಹಿಸಿದವರು. ೧೯೪೨ ರಲ್ಲಿ ನಡೆದ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಪಾಲ್ಗೊಂಡು ೩೬ ದಿನಗಳು ಸೆರೆವಾಸ ಸಹ ಅನುಭವಿಸಿದವರು. ದೇಶ, ಸ್ವಾತಂತ್ರ್ಯ, ಸಂಸ್ಕತ ಸೇರಿದಂತೆ ಹಲವು ವಿಷಯಗಳಲ್ಲಿ ಆಸಕ್ತಿ ಹೊಂದಿದ್ದ ಭಾಸ್ಕರ ಭಟ್ಟ ಅವರ ಕುರಿತು ಸ್ಮರಿಸಿಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮವನ್ನು ಭೀಮೆ ಶ್ವರ ಜೋಷಿ ಉದ್ಘಾಟಿಸಲಿದ್ದು, ಖ್ಯಾತ ಮನೋವೈದ್ಯ ಡಾ. ಕೆ.ಆರ್.ಶ್ರೀಧರ್ ಅಧ್ಯಕ್ಷತೆ ವಹಿ ಸಲಿzರೆ. ಭಾಸ್ಕರ ಭಟ್ಟ ವಿರಚಿತ ದೇವೀವಿಲಾಸಕಾವ್ಯಮ್ ಕೃತಿಯ ನ್ನು ಪ್ರೊ. ಶ್ರೀನಿವಾಸ ವರಖೇಡಿ, ಕಾವ್ಯಭಾಸ್ಕರ ಕೃತಿಯನ್ನು ಪ್ರೊ. ಪ.ನಾ.ಶಾಸ್ತ್ರಿ, ಚಿಂತನಭಾಸ್ಕರ ಕೃತಿಯನ್ನು ವಿದ್ಯಾವಾಚಸ್ಪತಿ ಉಮಾಕಾಂತಭಟ್ಟ ಲೋಕಾರ್ಪಣೆ ಮಾಡುವರು. ಭಾಸ್ಕರ ಭಟ್ಟ ಅವರ ಕುರಿತು ಹೊರ ತಂದಿರುವ ಚಿತ್ರ ಪ್ರದರ್ಶನಿಯನ್ನು ಹಿರಿಯ ನ್ಯಾಯವಾದಿ ಕೆ.ವಿ.ಶ್ರೀಧರ್ ಉದ್ಘಾಟಿಸಲಿzರೆ ಎಂದರು.
ಮಧ್ಯಾಹ್ನ ೧೨-೧೫ಕ್ಕೆ ನಡೆ ಯುವ ಭಾಸ್ಕರ ಭಟ್ಟ ಅವರ ಬದು ಕು-ಬರಹ ಮೊದಲ ಗೋಷ್ಟಿಯ ಅಧ್ಯಕ್ಷತೆಯನ್ನು ಪ್ರೊ. ತಿರುಮಲ ಮಾವಿನಕುಳಿ ವಹಿಸಲಿದ್ದು, ಪ್ರೊ. ಪ್ರಭಾಕರ್ ಟಿ.ಎನ್., ವಿದ್ವಾನ್ ಉಮಾಕಾಂತ ಭಟ್ಟ ಉಪನ್ಯಾಸ ನೀಡಲಿzರೆ. ಮಧ್ಯಾಹ್ನ ೨-೩೦ಕ್ಕೆ ನಡೆಯುವ ಕಾವ್ಯವಾಚನ- ವ್ಯಾಖ್ಯಾನ ಎರಡನೇ ಗೋಷ್ಟಿಯ ಅಧ್ಯಕ್ಷತೆಯನ್ನು ಗುರುಪ್ರಸಾದ್ ಆರ್. ಐಸಿರಿ ವಹಿಸಲಿದ್ದು, ವಿದ್ವಾನ್ ಶಂಭುಭಟ್ ವಾಚನ, ಡಾ. ರಾಘವೇಂದ್ರ ರಾವ್ ಉಡು ಪಿ ವ್ಯಾಖ್ಯಾನ ಮಾಡಲಿzರೆ. ಮಧ್ಯಾಹ್ನ ೩ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೆ.ಬಿ.ಗಣೇಶಪ್ರಸಾದ್, ಕೆ.ಜಯ ಕುಮಾರ್ ಕಲ್ಮನೆ ಪಾಲ್ಗೊಳ್ಳಲಿ zರೆ ಎಂದು ತಿಳಿಸಿದರು.
ನಂತರ ತ್ರಿವೇಣಿ ಮತ್ತು ಸಂಗ ಡಿಗರು ಭಾಸ್ಕರ ಭಟ್ಟ ಅವರ ಕಾವ್ಯ ಶ್ಲೋಕಗಳ ಗಾಯನ ನಡೆಸಿಕೊಡ ಲಿzರೆ. ನಂಗರ ಆದಿಶಂಕರ್ ಬದುಕು ಸಾಹಿತ್ಯ ಆಧರಿಸಿದ ನೃತ್ಯರೂಪಕವನ್ನು ಶಿವಮೊಗ್ಗದ ಡಾ. ಕೆ.ಎಸ್.ಪವಿತ್ರ ಮತ್ತು ತಂಡದವರು ನಡೆಸಿಕೊಡಲಿzರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿ ದರು.
ಗೋಷ್ಟಿಯಲ್ಲಿ ಜಯಕು ಮಾರ್ ಕಲ್ಮನೆ, ಎಂ.ಎಸ್. ನಾಗರಾಜ್, ನಾರಾಯಣಸ್ವಾಮಿ, ಗುರುಪಾದ ಕೆರೆಮನೆ, ಸತೀಶ್, ಚಿದಂಬರ ಹಾಜರಿದ್ದರು.