೧೫೧ ಬಾಲಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಕಾಮಗಾರಿಗೆ ಶಿಲಾನ್ಯಾಸ
ಶಿವಮೊಗ್ಗ : ನಗರದ ಗುಡ್ಡೆ ಕಲ್ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆವರಣಲ್ಲಿ ವಿಶೇಷ ಪೂಜೆ, ಕುಂಭಾಬಿಷೇಕ, ದೇವಾಲ ಯಗಳ ಅಸ್ತ ಬಂಧನ ಜೊತೆಗೆ ವಿಶೇಷವಾಗಿ ವಿಶ್ವದ ಅತಿ ಎತ್ತರದ ಶ್ರೀ ಬಾಲಸುಬ್ರಮಣ್ಯದೇವರ ವಿಗ್ರಹವನ್ನು ನಿರ್ಮಿಸಲು ಶಿಲಾ ನ್ಯಾಸ ಸಮಾರಂಭ ಸಡಗರ ಹಾಗೂ ಶ್ರz ಭಕ್ತಿಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವ ಹಿಸಿ ಟ್ರಸ್ಟ್‌ನ ಕಾರ್ಯವನ್ನು ಪ್ರಶಂ ಸಿಸುವ ಜೊತೆಗೆ ಶಿಲಾನ್ಯಾಸ ನೆರ ವೇರಿಸಿದ ಸಂಸದ ಬಿವೈಆರ್ ಅವರು ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ zಗ ನೀಡಿದ್ದ ಈ ಜಗ ಸದ್ಭಳಕೆ ಯಾಗುತ್ತಿದೆ.ಇದು ಪ್ರವಾಸೋ ದ್ಯಮದ ತಾಣವಾಗಲಿದೆ ಎಂದು ಪ್ರಶಂಸಿದರು.
ಪ್ರಸಕ್ತ ಕರ್ನಾಟಕ ರಾಜ್ಯದಲ್ಲಿ ಬರಗಾಲದ ಸೂಚನೆ ಕಾಣುತ್ತಿದೆ. ಸರ್ಕಾರದ ಮೇಲೆ ಹೆಚ್ಚಾಗಿ ಅವ ಲಂಬಿತರಾಗದೇ ಭಕ್ತರು ಶಕ್ತಿಗಾ ನುಸಾರ ಧನಸಹಾಯ ಮಾಡುವ ಮೂಲಕ ವಿಶ್ವದ ಅತಿ ಎತ್ತರದ ವಿಗ್ರಹ ನಿರ್ಮಾಣಕ್ಕೆ ನೆರವು ನೀಡುವಂತೆ ಕೋರಿದರು.
ವಿಶೇಷವೆಂದರೆ ಇದೇ ಜಗದಲ್ಲಿ ಸುಮಾರು ೪೨ ಕೋಟಿ ವೆಚ್ಚದರೈಲ್ವೆ ಮೇಲ್ಸೆತುವೆ ನಿರ್ಮಾ ಣವಾಗುತ್ತಿದೆ.ಇಲ್ಲಿಇಂತಹ ವಿಗ್ರಹ ಬಂದರೆ ಪ್ರವಾಸೋದ್ಯಮಕ್ಕೆ ಹಾಗೂ ಶಿವಮೊಗ್ಗಕ್ಕೆ ಮತ್ತೊಂದು ಬಗೆಯ ಕಳೆ ಬರಲಿದೆಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ದೇಶವೇ ಶಿವಮೊಗ್ಗ ನಗರದತ್ತ ತಿರುಗಿ ನೋಡುವತ್ತಾ ಇಂತಹ ಕಾರ್ಯ ಉತ್ತಮವಾಗಿದೆ.ಇದಕ್ಕೆ ಹಣದ ಬಗ್ಗೆ ಯೋಚಿಸಬೇಡಿ, ರಾಗಿಗುಡ್ಡದಲ್ಲಿ ೫ ಕೋಟಿ ಬಿಡುಗಡೆಯಾಗಿದ್ದು, ಅದನ್ನು ಬಳಸಿಕೊಳ್ಳಲು ಸ್ಥಳೀಯ ಶಾಸಕರು ಹಾಗೂ ಸಚಿವರ ನೆರವು ಪಡೆಯಿರಿ ಎಂದರು.
ಶಿವಮೊಗ್ಗ ನಗರದಲ್ಲಿ ಸುಮಾ ರು ೨೦ ಸಾವಿರ ತಮಿಳು ಸಮಾ ಜದ ಜನರಿzರೆ ಅವರು ಹೊಸ ಯೋಜನೆ ಮಾಡುವಯೋಚನೆ ಇಂದು ಬಂದಿರುವುದು ಸೂಕ್ತ ವಾಗಿದೆ. ಸಕಾಲದಲ್ಲಿ ಕಾರ್ಯ ವನ್ನು ಮುಗಿಸಿ ಎಂದು ಹೇಳಿದರು.
ಸ್ಥಳೀಯ ಶಾಸಕ ಎಸ್. ಚನ್ನಬಸಪ್ಪ ಅವರು ಮಾತನಾ ಡುತ್ತಾ, ತಮಿಳು ಸಮಾಜದ ಹಾಗೂ ಟ್ರಸ್ಟ್‌ನ ಈ ಕಾರ್‍ಯಕ್ರಮದ ಯಶಸ್ವಿಗೆ ನೆರವು ನೀಡಲು ತಾವು ಸದಾ ಸಿದ್ದ ಎಂದು ಹೇಳಿದರು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾ ರ್ಜುನ ಮುರುಘಾರಾಜೇಂದ್ರ ಸ್ವಾಮಿಕಾರ್ಯಕ್ರಮದ ಸಾನಿಧ್ಯ ವಹಿಸಿ ಶಿಲಾನ್ಯಾಸ ಹಾಗೂ ಕುಂಭಾ ಬಿಷೇಕ ನೆರವೇರಿಸಿ ಆಶೀರ್ವಚನ ನೀಡಿದರು.
ಶ್ರೀ ಬಾಲಸುಬ್ರಮಣ್ಯ ಟ್ರಸ್ಟ್‌ನ ಅಧ್ಯಕ್ಷ ಡಿ. ರಾಜ ಶೇಖರ್ ಅಧ್ಯಕ್ಷತೆ ವಹಿಸಿದ್ದ ಸಮಾ ರಂಭದಲ್ಲಿ ಪಾಲಿಕೆ ಮೇಯರ್ ಶಿವಕುಮಾರ್, ಸದಸ್ಯೆಯ ಮುನಾ ರಂಗೇಗೌಡ, ಟ್ರಸ್ಟ್‌ನ ಉಪಾಧ್ಯಕ್ಷ ಎಂ.ಪಿ.ಸಂಪತ್‌ಕುಮಾರ್, ಕಾರ್‍ಯದರ್ಶಿ ಪಿ.ರಘು ಕುಮಾರ್, ಸಹಕಾರ್ಯದರ್ಶಿ ಲೋಕೇಶ್, ಖಜಂಚಿ ರವಿಕುಮಾರ್, ನಿರ್ದೇ ಶಕರಾದಎಂ.ರಾಜು, ಪಿ. ಸುಬ್ರ ಮಣಿ, ಎಂ.ಸುಬ್ರಮಣಿ, ಸಿ.ರವಿ, ವಿಗ್ರಹ ಸಮಿತಿಯ ವಿಜಿಯನ್, ಅರ್ಜುನ್, ಆತ್ಮರಂಗಧೋಳ್, ಕೆ.ಸುಬ್ರಮಣಿ, ಮಾಜಿ ಸದಸ್ಯ ಮೋಹನ್‌ರೆಡ್ಡಿ, ಎಂ.ಪಿ.ಗಣೇಶ್ ಹಾಗೂ ಇತರರಿದ್ದರು.