ಕವನತಾಜಾ ಸುದ್ದಿ

ಪ್ರಾತಃ ಸ್ಮರಣೀಯ ಪುರದ ಶ್ರೀ ….

Share Below Link

ಪುರದಲುದಿಸಿದ ಹೊನ್ನರಳಿಯ ಈಶ
eನ ವೈರಾಗ್ಯ ತಪಗಳ ಸಿದ್ದಿಪುರುಷ
ರಾಚಮ್ಮ ಗುರುನಂಜಯ್ಯರ ಸುಪುತ್ರ
ನಿಮ್ಮಿಂದ ಪುರವಾಯಿತು ಪುಣ್ಯಕ್ಷೇತ್ರ
ಭಕ್ತರೆದೆಯಲ್ಲಿ ವಾಣಿಯ ಗುಣಗಾನ
ಶಿವಾಚಾರ್ಯ ರತ್ನ, ದಿವ್ಯಚೇತನ
ಭವರೋಗದ ವೈದ್ಯ, ದೇವಮಾನವ
ಚಿತ್ಕಳೆ ಸೂಸುವ ಯೋಗಿಪುಂಗವ
ಹೊನ್ನಾಳಿ ಚನ್ನೇಶ್ವರನ ಆತ್ಮಸ್ವರೂಪಿ
ಸೋಗಿ ಪುರವರ್ಗಮಠದ ಶಿವರೂಪಿ
ಆಕಾಶದೆತ್ತರ ಬೆಳೆದ ಬೃಹಚ್ಛಿಲಾಮಠ
ಹರನೆಲೆಸಿದ ಬೀಡು ಈ ಹಿರೇಕಲ್ಮಠ
ಭಕ್ತರ ಕಾಮಧೇನು ಈ ಕಲ್ಪವೃಕ್ಷ
ನಂಬಿದವರಿಗೆ ಇವರ ಕೃಪಾಕಟಾಕ್ಷ
ಮನುಕುಲಕ್ಕೆ ನೀವೇ ಚಿರಸ್ಮರಣೀಯ
ಚಂದ್ರಶೇಖರ ಶ್ರೀ ಪ್ರಾತಃಸ್ಮರಣೀಯ
-ಹೆಚ್.ಎಂ.ಗುರುಬಸವರಾಜಯ್ಯ
ಉಪನ್ಯಾಸಕರು