ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿನಾರ್ಡ್ ಡಿಕೋಸ್ತಾ
ಕುಂದಾಪುರ: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯಿಂದ ೨೦೨೩ನೇ ಮೇ ತಿಂಗಳಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ವಿನಾರ್ಡ್ ಜೆ. ಡಿಕೋಸ್ತಾ ಉತೀರ್ಣಾರಾಗಿ ಲೆಕ್ಕ ಪರಿಶೋಧಕಾರಾಗಿ ಹೊರಹೊಮ್ಮಿzರೆ.
ಈ ಪ್ರತಿಭಾನ್ವಿತ ಕುಂದಾಪುರದ ಸಾಹಿತಿ, ಪತ್ರಕರ್ತ ಬರ್ನಾಡ್ ಡಿಕೋಸ್ತಾ ಮತ್ತು ವಿನಯಾ ಡಿಕೋಸ್ತಾರವರ ಪುತ್ರನಾಗಿದ್ದು, ಇವರು ಇಂಟರ್ ಮಿಡಿಯಟ್ ಕ್ಯಾರಿಯರ್ಸ್ ಕೋಚಿಂಗ್ ಮತ್ತು ಸ್ಪೇಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು, ಆರ್ಟಿಕಲ್ಶಿಪ್ನ್ನು ಬೆಂಗಳೂರಿನ ಮುರುಳಿ ಅಂಡ್ ಸುಮಿತ್ ಚಾರ್ಟೆಡ್ ಅಕೌಂಟೆಡ್ ಸಂಸ್ಥೆಯಲ್ಲಿ ಮಾಡಿದ್ದು. ಅಂತಿಮ ಪರೀಕ್ಷೆಯಲ್ಲಿ ಒಟ್ಟು ೪೩೨ ಅಂಕ ಪಡೆದು ಸಾಧನೆ ಮಾಡಿzರೆ.
ಇವನು ಕುಂದಾಪುರ ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆ ಮತ್ತು ಸಂತ ಮೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಭಂಡಾರ್ಕರ್ಸ್ ಪದವಿ ಕಾಲೇಜಿನಲ್ಲಿ ಬಿ.ಕಾಮ್ ಪದವಿ ಪಡೆದಿರುತ್ತಾರೆ.
ಅಭಿನಂದನೆ: ಪ್ರತಿಭಾನ್ವಿತ ವಿನಾರ್ಡ್ ಜೆ. ಡಿಕೋಸ್ತಾ ಅವರಿಗೆ ಹೊಸನಾವಿಕ ಬಳಗ ಅಭಿನಂದಿಸಿದೆ.