ಮಕ್ಕಳಲ್ಲಿ ಚಾನಾವಣಾ ಕಲ್ಪನೆ – ಮಹತ್ವ ತಿಳಿಸಲು ನಂದವಾಡಗಿ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ
ನಂದವಾಡಿ: ವಿದ್ಯಾರ್ಥಿಗಳಿಗೆ ಚುನಾವಣೆ ಕಲ್ಪನೆ ಹಾಗೂ ಅದರ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಇಲ್ಲಿನ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೩-೨೪ನೇ ಸಾಲಿನ ಶಾಲಾ ಸಂಸತ್ ರಚಿಸಲಾಯಿತು.
ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಕ್ರಮಬದ್ಧವಾಗಿ ನಿಯಮ ಅನುಸರಿಸುವ ಮೂಲಕ ಮತದಾರ ಪಟ್ಟಿ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ಮತ ಎಣಿಕೆಯಿಂದ ಹಿಡಿದು ಫಲಿತಾಂಶವರೆಗೆ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಚುನಾವಣೆ ನಡೆಸಲಾಯಿತು.
ಶಾಲಾ ಸಂಸತ್ತು ಚುನಾವಣೆ ಯಲ್ಲಿ ಒಟ್ಟು ೨೦ ವಿದ್ಯಾರ್ಥಿನಿಯರು ಸ್ಪರ್ಧಾಳು ಗಳಾಗಿ ಕಣದಲ್ಲಿದ್ದರು. ಅಂತಿಮವಾಗಿ ಕುಮಾರಿ ಸವಿತಾ ವಗ್ಗರ ಅತಿ ಹೆಚ್ಚು ಮತಗಳನ್ನು ಪಡೆದರು. ಶಾಂತಾ ವಸ್ತ್ರದಮಠ, ಮೈಮುನಾ ಹುನಕುಂಟಿ, ಸ್ನೇಹಾ ವಗ್ಗರ, ಸುನಿತಾ ಫಲದಿನ್ನಿ, ಸಾನಿಯಾ ಹುನಕುಂಟಿ, ಶ್ರೀದೇವಿ ಈಟಿ ಅನ್ನಪೂರ್ಣ ಗೌಡರ ಆಯ್ಕೆಯಾದ ವಿದ್ಯಾರ್ಥಿನಿಯರು.
ಮುಖ್ಯ ಚುನಾವಣಾಧಿಕಾರಿ ಯಾಗಿ ಶಾಲಾ ಮುಖ್ಯ ಶಿಕ್ಷಕ ಪ್ರಭಯ್ಯ ಲೂತಿಮಠ ಅವರು ವಿದ್ಯಾರ್ಥಿನಿಯರಿಗೆ ಚುನಾವಣೆ ಮಹತ್ವವನ್ನು ವಿವರಿಸಿದರು. ಪ್ರೊಸೆಡಿಂಗ್ ಅಧಿಕಾರಿಗಳಾಗಿ ಶ್ರೀಮತಿ ಜ್ಯೋತಿ, ವಿ. ಬಿ. ಕುಂಬಾರ, ಅಸಿಸ್ಟೆಂಟ್ ಪ್ರೋಸಡಿಂಗ್ ಅಧಿಕಾರಿಗಳಾಗಿ ಶ್ರೀಮತಿ ಜಿ ಆರ್ ನದಾಫ್, ಎಸ್ ವಿ ಬಳುಲದ, ಪೋಲಿಂಗ್ ಅಧಿಕಾರಿಗಳಾಗಿ ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸಿದರು.