ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕಾಮನ್ ಸಿವಿಲ್ ಕೋಡ್ ಯಾವುದೇ ಧರ್ಮದ ವಿರುದ್ಧವಲ್ಲ:ಬಿವೈಆರ್

Share Below Link

ಶಿವಮೊಗ್ಗ: ಮೋದಿ ಸರ್ಕಾರ ೯ ವರ್ಷದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಮನೆಮನೆಗೆ ತಲುಪಿಸಿ ಸುಳ್ಳನ್ನು ನೂರು ಬಾರಿ ಹೇಳಿ ಅದ್ನನೇ ಸತ್ಯವೆಂದು ನಂಬಿ ಸುವ ಕಾಂಗ್ರೆಸ್ ಹುನ್ನಾರವನ್ನು ಜನರಿಗೆ ತಿಳಿಸಿ ಎಂದು ಸಂಸದ ಬಿ. ವೈ.ರಾಘವೇಂದ್ರ ಕಾರ್ಯಕರ್ತ ರಿಗೆ ಕರೆ ನೀಡಿzರೆ.
ನಗರದ ಶುಭಮಂಗಳ ಸಮುದಾಯಭವನದಲ್ಲಿ ಇಂದು ಶಿವಮೊಗ್ಗ ಗ್ರಾಮಾಂತರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಮೋ ರ್ಚಾಗಳ ಸಂಯುಕ್ತ ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತ ನಾಡಿದ ಅವರು ಕೃಷಿ ಸಮ್ಮಾನ್ ಯೋಜನೆ ಮೂಲಕ ಪ್ರತಿ ವರ್ಷ ೩ ಲಕ್ಷ ಕೋಟಿ ರೈತರ ಖಾತೆಗೆ ಜಮಾ ಮಾಡಲಾಗಿದೆ. ಕಳೆದ ೯ ವರ್ಷಗಳಲ್ಲಿ ರೈತರಿಗೆ ೧೫ಲಕ್ಷ ಕೋಟಿ ಬೆಂಬಲ ಬೆಲೆ ನೀಡಿ ಅವ ರಿಗೆ ಆರ್ಥಿಕವಾಗಿ ಮೇಲೆತ್ತುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ರೇತರಿಗೆ ರಸಗೊಬ್ಬರ ಸಬ್ಸಿಡಿ ನೀಡಲಾಗಿದೆ. ರಾಜ್ಯದಲ್ಲಿ ಬಿಎಸ್‌ವೈ ಸಿಎಂ ಆಗಿzಗ ರೈತರ ೧೦ಹೆಚ್‌ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗಿತ್ತು. ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ಪಂಗಡ ನಿಗಮಗಳನ್ನು ಮಾಡಿ, ಸಹಕಾರ ನೀಡಲಾಗಿತ್ತು. ಅಲ್ಪ ಸಂಖ್ಯಾತರಿಗೆ ಕೂಡ ಬಿಜೆಪಿ ಸರ್ಕಾರದಲ್ಲಿ ಹೆಚ್ಚಿನ ಅನುಕೂಲ ನೀಡಲಾಗಿತ್ತು.ಆದರೆ ಕಾಂಗ್ರೆಸ್ ಕೇವಲ ಆ ಸಮುದಾ ಯವನ್ನು ಮಿಸ್‌ಲೀಡ್ ಮಾಡುತ್ತಾ ಪೊಳ್ಳು ಭರವಸೆ ನೀಡಿ ಇಷ್ಟು ವರ್ಷ ತುಷ್ಟೀಕರಣ ಮಾಡುತ್ತಾ ಬಂದಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಅದನ್ನುಆ ಸಮು ದಾಯ ಅರ್ಥ ಮಾಡಿಕೊಳ್ಳ ಬೇಕು.ಅವರನ್ನುಕೂಡ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ ಎಂದರು.
ಕಾಮನ್ ಸಿವಿಲ್ ಕೋಡ್ ಯಾವುದೇ ಧರ್ಮದ ವಿರುದ್ಧ ವಲ್ಲ. ಒಂದೇ ದೇಶ, ಒಂದೇ ಕಾನೂನು ಬೇಕುಎಂಬುದು ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಕನಸಾಗಿತ್ತು. ಇಂದು ಅವರ ಜನ್ಮದಿನಾಚರಣೆ. ಮೋದಿ ಸರ್ಕಾರ ೩೭೦ ವಿಧಿಯನ್ನು ರದ್ದುಗೊಳಿಸಿ ಅವರ ಆಶಯವನ್ನು ಅನುಷ್ಠಾನಗೊಳಿಸಿzರೆ. ಸಂಪರ್ಕ್ ಸೆ ಸಮರ್ಥನ್ ಮತ್ತು ವಿಕಾಸ ತೀರ್ಥ ಯಾತ್ರೆ ಮೂಲಕ ಕಾರ್ಯಕರ್ತರು ಬಿಜೆಪಿ ಸರ್ಕಾ ರದ ಸಾಧನೆಯನ್ನು ತಿಳಿಸಬೇಕಾ ಗಿದೆ. ಕನಿಷ್ಠ ೨ ಗಂಟೆ ಸಮಯ ವನ್ನು ಪಕ್ಷಕ್ಕಾಗಿ ನೀಡಿ ಎಂದರು.


ಶಿವಮೊಗ್ಗ ಲೋಕಸಭಾ ಕ್ಷೇತ್ರವೊಂದರ ನನ್ನ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನವನ್ನು ಎ ಸಮುದಾಯಗಳ ಸಾವಿರಕ್ಕೂ ಹೆಚ್ಚು ಭವನ ನಿರ್ಮಾಣಕ್ಕೆ ನೀಡ ಲಾಗಿದೆ. ಸ್ವಾಭಿಮಾನದ ಬದುಕಿಗೆ ಅನೇಕ ಯೋಜನೆಗಳನ್ನು ಮೋದಿ ಸರ್ಕಾರ ನೀಡಿದೆ. ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯ ಮೋದಿಜೀಯವರ ಕನಸಾಗಿದ್ದು, ದೇಶಾದ್ಯಂತ ಎ ವರ್ಗಕ್ಕೂ ನ್ಯಾಯ ಒದಗಿಸಲಾಗಿದೆ ಎಂದರು.
ಕಾಂಗ್ರೆಸ್ ಪೊಳ್ಳು ಭರವಸೆ ಮತ್ತು ಅಪಪ್ರಚಾರದಿಂದ ಪಕ್ಷಕ್ಕೆ ತಾತ್ಕಾಲಿಕ ಹಿನ್ನಡೆಯಾಗಿರಬಹು ದು. ಮೋದಿ ಸರ್ಕಾರದ ಸಾಧನೆ ನಮ್ಮ ಮುಂದಿದೆ. ದೇಶ ಕಟ್ಟುವ ಕೆಲಸ ಮಾಡೋಣ ಎಂದರು.
ರಾಜ್ಯ ಬಿಜೆಪಿ ಸಾಮಾಜಿಕ ಜಲತಾಣದ ಸಂಚಾಲಕ ವಿಕಾಸ್ ಪುತ್ತೂರು ಮಾತನಾಡಿ, ಸ್ವಾತಂ ತ್ರ್ಯದ ನಂತರ ನಮ್ಮ ದೇಶದ ಸಂಸ್ಕೃತಿ, ಪರಂಪರೆಮತ್ತು ಏಕತೆ ಗಾಗಿ ಮೊದಲು ಬಲಿದಾನ ಮಾಡಿ ದವರು ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿ. ಏಕ್ ದೇಶ್ ಮೆ ದೋ ವಿಧಾನ್, ನಹಿ ಚಲೇಗಾ ಎಂದು ಆಂದೋಲನ ಮಾಡಿದ ಡಾ. ಶ್ಯಾಮ್‌ಪ್ರಸಾದ್ ಅವರ ಉದ್ದೇಶ ವನ್ನು ಮೋದಿಜೀ ಸರ್ಕಾರ ಈಡೇರಿಸಿದೆ ಎಂದರು.
ಈ ದೇಶದಲ್ಲಿ ೨ ಧ್ವಜ, ೨ ಪ್ರಧಾನಿ ಎಂಬ ದುಸ್ಥಿತಿ ಇತ್ತು. ಕಾಶ್ಮೀರವನ್ನು ಮುಕ್ತಗೊಳಿಸಿ ದೇಶಕ್ಕೆ ಏಕತೆಯ ಕೊಡುಗೆ ನೀಡಿzರೆ. ನಮ್ಮ ಸಂಸ್ಕೃತಿ ಮತ್ತು ಮುಂದಿನ ಪೀಳಿಗೆಗೆ ಸೇತುವ ಕಟ್ಟುವ ಕೆಲಸ ಮಾಡಿ ವಿಶ್ವದ ೧೯೦ಕ್ಕೂ ಹೆಚ್ಚು ದೇಶಗಳು ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಯೋಗ ದಿನಾಚರಣೆ ಮಾಡಿ ಮೋದಿಜೀಗೆ ಬೆಂಬಲ ಸೂಚಿಸಿzರೆ. ೫೦೦ ವರ್ಷದ ಹೋರಾಟ ಮಾಡಿದರೂ ನಿರ್ಮಾಣವಾಗದ ರಾಮಮಂ ದಿರವನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡುತ್ತಿದೆ. ದೇಶದ ಜನತೆ ಭಾರತದ ಸಂಸ್ಕತಿ ಮತ್ತು ಪರಂಪರೆ ಉಳಿವಿಗಾಗಿ ಬಿಜೆಪಿಯ ನ್ನು ಬೆಂಬಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಧ್ಯಕ್ಷ ಟಿ.ಡಿ. ಮೇಘರಾಜ್, ಹೊಳೆ ಹೊನ್ನೂರು ಮಂಡಲ ಅಧ್ಯಕ್ಷ ಮಂಜುನಾಥ್, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಅಶೋP ಮೂರ್ತಿ, ಜಿ ಬಿಜೆಪಿ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ, ಜಿ ಯುವ ಮೋರ್ಚಾ ಅಧ್ಯಕ್ಷಎಂ.ಬಿ. ಹರಿಕೃಷ, ಪ್ರಮುಖರಾದ ದಿನೇಶ್ ಬುಳ್ಳಾಪುರ, ವೀರಭದ್ರ ಪೂಜರಿ, ನಾಗರಾಜ್ ತಮ್ಮಡಿಹಳ್ಳಿ, ಸೌಮ್ಯ ಭೋಜನಾಯ್ಕ್ ಹಾಗೂ ವಿವಿಧ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.