ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ….
ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆ ಡಿಡಿಪಿಐ ಕಚೇರಿ ಆವರಣ ದಲ್ಲಿರುವ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸುವಂತೆ ಹಾಗೂ ಅಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾ ಟಕ ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್ ವಾದ) ಜಿ ಸಮಿತಿ ವತಿಯಿಂದ ಇಂದು ಸ್ಥಳದ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಸರ್ಕಾರದ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು ಶೋಷಿತ ವರ್ಗದ ಹಸಿವು ನೀಗಿ ಸಲು ಈ ಮಹತ್ವಾಕಾಂಕ್ಷಿ ಯೋಜನೆ ಜರಿಗೆ ತಂದಿದ್ದರು. ಆದರೆ, ದುಡಿಯುವ ವರ್ಗದ ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವ ಇಂದಿರಾ ಕ್ಯಾಂಟೀನ್ನಲ್ಲಿ ನಿರ್ವ ಹಣೆ ಜವಾಬ್ದಾರಿ ಹೊತ್ತ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆ ದಾರರು ಸರ್ಕಾ ರಕ್ಕೆ ಮಾಡುತ್ತಿರುವ ವಂಚನೆಯ ನ್ನು ಡಿಎಸ್ಎಸ್ ತೀವ್ರವಾಗಿ ಖಂಡಿಸುತ್ತದೆ ಎಂದರು.
ಈ ಕ್ಯಾಂಟೀನ್ ಇರುವು ಜಗ ದಲ್ಲಿ ಸ್ವಚ್ಛತೆ ಎಂಬುದು ಮರೀಚಿ ಕೆಯಾಗಿದೆ. ಕುಡಿಯುವ ನೀರಿನ ತೊಟ್ಟಿಯಲ್ಲಿ ಕಸ ಕಡ್ಡಿ ಬಿದ್ದು, ಕಪ್ಪೆ, ಹುಳಗಳು ಸತ್ತು ಬಿದ್ದಿದ್ದು, ಇದೇ ನೀರನ್ನು ವಿದ್ಯಾ ರ್ಥಿಗಳು ಮತ್ತು ಗ್ರಾಹಕರು ಕುಡಿ ಯಬೇಕಾಗಿದೆ. ಕ್ಯಾಂಟೀನ್ ಬಾಗಿ ಲುಗಳು ಮುರಿ ದು ಹೋಗಿವೆ. ಸೆಕ್ಯೂರಿಟಿ ಇಲ್ಲ ದೇ ರಾತ್ರಿ ಹೊತ್ತು ಅನೈತಿಕ ಚಟು ವಟಿಕೆಯ ತಾಣವಾಗಿದೆ. ಶೌಚಾಲ ಯಕ್ಕೆ ಬಾಗಿಲುಗಳಿಲ್ಲ. ಕೊಳಚೆ ಪ್ರದೇಶದಂತಾಗಿದೆ ಎಂದರು.
ಸರ್ಕಾರದ ಆದೇಶದಂತೆ ಬೆಳಗ್ಗೆ ೩೦೦ ಜನಕ್ಕೆ ತಿಂಡಿ, ಮದ್ಯಾ ಹ್ನ ೫೦೦ ಜನಕ್ಕೆ ಊಟ ಎಂದು ಲೆಕ್ಕ ಕೊಡುವ ಗುತ್ತಿಗೆದಾರರು ಬೆಳಗ್ಗೆ ೧೦೦ ಜನಕ್ಕೆ ತಿಂಡಿ ಮತ್ತು ಊಟ ಕೂಡ ಮಧ್ಯಾಹ್ನ ಮತ್ತು ರಾತ್ರಿ ಕೇವಲ ೧೦೦ ಜನಕ್ಕಷ್ಟೇ ಟೋಕನ್ ಕೊಡುತ್ತಿzರೆ. ಕೆಲಸ ಮಾಡು ವವರಿಗೆ ಎರಡು ಮೂರು ತಿಂಗಳಿ ಗೊಮ್ಮೆ ಕೇವಲ ೬೫೦೦ ರೂ. ಸಂಬಳ ನೀಡುತ್ತಿದ್ದು, ಊಟವನ್ನು ಕೂಡ ಮೆನು ಪ್ರಕಾರ ನೀಡುತ್ತಿಲ್ಲ. ಚಪಾತಿ ಪಡೆದರೆ ೧೦ ರೂ. ಹೆಚ್ಚುವರಿಯಾಗಿ ಪಡೆಯುತ್ತಾರೆ. ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂದು ದೂರಿದರು.
ಇಲ್ಲಿ ಕಳ್ಳತನ ಕೂಡ ಆಗಿದ್ದು, ಗಮನಿಸಬೇಕಾದ ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಈ ಯೋಜನೆ ದಾರಿ ತಪ್ಪಿದ್ದು, ಈ ಅವ್ಯವಸ್ಥೆಗೆ ಕಾರಣರಾಗಿರುವ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಗೊಳಿಸಬೇಕು. ಗುತ್ತಿಗೆದಾರರ ಗುತ್ತಿಗೆ ರದ್ದುಪಡಿಸಬೇಕು. ಈ ಪ್ರಕರಣದ ಬಗ್ಗೆ ತನಿಖೆ ನಡೆಸ ಬೇಕು ಎಂದು ಆಗ್ರಹಿಸಿಲಾಗಿದೆ.
ಈ ಸಂದರ್ಭದಲ್ಲಿ ಡಿಎಸ್ ಎಸ್ ಜಿ ಪ್ರಧಾನ ಸಂಚಾಲಕ ಟಿ.ಹೆಚ್. ಹಾಲೇಶಪ್ಪ, ಶೇಷಪ್ಪ, ಪರಮೇಶ್ ಸೂಗೂರು, ಶಿವ ಕುಮಾರ್, ರುದ್ರೇಶ್, ಸಂಜೀಲ್, ನಾಸಿರ್ ಬಾನು ಮೀನಾ ಮತ್ತಿತರರು ಇದ್ದರು.