ಅರ್ಹರಿಗೆ ಸರ್ಕಾರಿ ಸೌಲಭ್ಯ: ಲೋಪವಾಗದಂತೆ ಎಚ್ಚರವಹಿಸಿ: ಶಾಸಕ ಶಾಂತನಗೌಡ
ಹೊನ್ನಾಳಿ: ಅಧಿಕಾರಿಗಳು ರೈತರಿಗೆ ಸಕಾಲದಲ್ಲಿ ಸ್ಪಂದಿಸಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಪಟ್ಟಣದ ಗುರು ಭವ ನದಲ್ಲಿ ಹೊನ್ನಾಳಿ ಮತ್ತು ದಾವಣ ಗೆರೆ ತೋಟಗಾರಿಕೆ ಇಲಾಖೆ ವತಿ ಯಿಂದ ಕೇಂದ್ರ ಪುರಸ್ಕೃತ ಯೋಜನೆ ಗಳ ಫಲಾನುಭವಿಗಳ ಸಭೆಯನ್ನು ದ್ದೇಶಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಸಿಗುವ ಎ ಸೌಲಭ್ಯಗಳನ್ನು ಪಾರದರ್ಶಕವಾಗಿ ಅರ್ಹರಿಗೆ ಸಿಗುವ ವ್ಯವಸ್ಥೆಯಲ್ಲಿ ಯಾವುದೇ ಲೋಪ-ದೋಷಗಳಾ ಗದಂತೆ ಅಧಿಕಾರಿಗಳು ಎಚ್ಚರವಹಿ ಸಬೇಕು ಎಂದು ಕಿವಿ ಮಾತು ಹೇಳಿ ದರು.
ರೈತರು ಲಾಭ-ನಷ್ಟವನ್ನು ಪರಿಗಣಿಸದೇ ಶ್ರಮವಹಿಸಿ ಬೆಳೆ ಬೆಳೆದು ದೇಶದ ೧೪೦ ಕೋಟಿ ಜನ ರಿಗೆ ಆಹಾರ ಒದಗಿಸುತ್ತಿದ್ದು ರೈತ ರನ್ನು ಎ ಸರ್ಕಾರಗಳು ದೇವ ರಂತೆ ಕಾಣಲೇಬೇಕು ಎಂದು ರೈತರ ಶ್ರಮದಾನವನ್ನು ಬಣ್ಣಿಸಿದರು.
ದೆಹಲಿಯಲ್ಲಿ ನಿರಂತರವಾಗಿ ಸತತ ೨ ವರ್ಷಗಳ ಕಾಲ ಸುದೀರ್ಘ ವಾಗಿ ಪ್ರತಿಭಟನೆ ಮಾಡಿದರೂ ಕೇಂದ್ರ ಸರ್ಕಾರ ಸೊಪ್ಪು ಹಾಕದೇ ನಿರ್ಲಕ್ಷ್ಯಧೋರಣೆ ತೋರಿರು ವುದು ಅಕ್ಷಮ್ಯ ಅಪರಾಧವೆಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಒಳಗೊಂದು ಹೊರ ಗೊಂದು ಮಾತನಾಡುವ ಸ್ವಭಾವ ದವನಲ್ಲ. ವಿನಾ ಕಾರಣ ಯಾರ ನ್ನೂ ಅಲೆದಾಡಿಸದೇ ಸಾರ್ವಜನಿ ಕರಿಗೆ ನನ್ನ ಅವಧಿಯಲ್ಲಿ ಕೆಲಸಗ ಳನ್ನು ಮಾಡಿಕೊಡುವ ಮೂಲಕ ಪ್ರಾಮಾಣಿಕವಾಗಿ ಸ್ಪಂದಿಸುತ್ತಿ ದ್ದೇನೆ ಎಂದು ವಿವರಿಸಿದರು.
ಬೀಜ-ಗೊಬ್ಬರದ ಕೊರತೆ ಯಿಲ್ಲ ಅಗತ್ಯಕ್ಕೆ ತಕ್ಕಂತೆ ದಾಸ್ತಾನು ಲಭ್ಯವಿದ್ದು ಮಳೆಯ ಕೊರತೆ ರೈತರನ್ನು ಇನ್ನಿಲ್ಲದಂತೆ ಕಾಡುತ್ತಿದೆ ಎಂದರು.
ರೈತರು ಏಕ ಬೆಳೆಗೆ ಮಾರು ಹೋಗದೆ ಮಿಶ್ರ ಬೆಳೆ ಪದ್ಧತಿ ಯನ್ನು ಅನುಸರಿಸಬೇಕು.ಹೆಚ್ಚಿನ ಮಾಹಿತಿಗೆ ಕೃಷಿ ಮತ್ತು ತೋಟ ಗಾರಿಕಾ ವಿಶ್ವವಿದ್ಯಾಲಯಕ್ಕೆ ತೆರಳಿ ಅಗತ್ಯ ಮಾಹಿತಿಯನ್ನು ಪಡೆದು ಕೃಷಿ ಮಾಡಬೇಕು ಎಂದು ಸಲಹೆ ನೀಡಿದರು.
ಅಡಿಕೆ ಬೆಳೆಗೆ ಇನ್ಸೂರೆನ್ಸ್ ಸೌಲಭ್ಯದ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹತ್ತಿರ ಈಗಾಗಲೇ ಚರ್ಚಿಸಿದ್ದು ಮುಂಬ ರುವ ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿzರೆ ಎಂದು ಮಾಹಿತಿ ನೀಡಿದರು.
ದಾವಣಗೆರೆಯ ತೋಟಗಾ ರಿಕಾ ಇಲಾಖೆಯ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಮಾತನಾಡಿ ತೋಟಗಾರಿಕಾ ಇಲಾಖೆಯ ವತಿ ಯಿಂದ ರೈತರಿಗೆ ಹಲವಾರು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನ ಗೊಳಿಸಿದ್ದು ರೈತರು ಸಮರ್ಪಕ ಮಾಹಿತಿ ಪಡೆದು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕ ಸ್ವಾವಲ ಂಬಿಗಳಾಗುವಂತೆ ಕರೆ ನೀಡಿದರು.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿವಿಧ ತೋಟಗಾರಿಕಾ ಬೆಳೆಗಳಾದ ಅಡಿಕೆ, ಮಾವು,ದಾಳಿಂಬೆ,ವೀಳ್ಯದೆಲೆ ಮತ್ತು ಕಾಳುಮೆಣಸು ಬೆಳೆಗಳು ಹವಾಮಾನ ವೈಪರೀತ್ಯದಿಂದಾಗಿ ಹಾನಿಗೊಳಗಾಗಿ ಇಳುವರಿ ಕುಂಠಿತದಿಂದಾಗಿ ರೈತರು ಆರ್ಥಿಕ ಸಂಕಷ್ಟಗೊಳಗಾದರೆ ವಿಮೆ ಮಾ ಡಿಸಿ ನಷ್ಟದ ಪರಿಹಾರ ಪಡೆಬಹು ದಾಗಿದೆ ಎಂದು ವಿವರಿಸಿದರು.
ಶಿವಮೊಗ್ಗದ ತೋಟಗಾರಿಕೆ ವಿಶ್ವವಿದ್ಯಾಲಯದ ವಿeನಿ ಡಾ. ನಾಗರಾಜ್ ಮಾತನಾಡಿ ರೈತರು ಅತೀ ಹೆಚ್ಚಾಗಿ ಅಡಿಕೆ ಬೆಳೆಯು ವುದರಿಂದ ಕಡಿಮೆಯಾಗುವ ಸಂ ಭವವಿರುವುದರಿಂದ ಉಪಬೆಳೆಗ ಳನ್ನು ಕೋಕೋ, ಕಾಳುಮೆಣಸು,
ಜಯಿಕಾಯಿ, ಪಪ್ಪಾಯ ,ನುಗ್ಗೆ, ಹೂವಿನ ಬೆಳೆಗಳನ್ನು ಬೆಳೆ ಯುವುದರಿಂದ ರೈತರು ಸ್ಥಿರ ಆದಾ ಯವನ್ನು ಪಡೆಯಬಹುದು. ಸಾವಯವ ಗೊಬ್ಬರವನ್ನು ತಪ್ಪದೇ ಬೆಳೆಗಳಿಗೆ ಬಳಸಬೇಕು ಎಂದು ವಿವರಿಸಿದರು.
ದಿಶಾ ಕಮಿಟಿ ಸದಸ್ಯ ನೆಲ ಹೊನ್ನೆ ಮಂಜುನಾಥ್ ಮಾತನಾಡಿ ಕೇಂದ್ರ ಸರ್ಕಾರವು ಎಸ್.ಸಿ.ಮತ್ತು ಎಸ್ಟಿಯವರಿಗೆ ಮತ್ತು ಇತರೆ ವರ್ಗ ದವರಿಗೆ ಹಲವಾರು ಯೋಜನೆ ಗಳನ್ನು ಜರಿಗೆ ತಂದಿದೆ ಎಂದರು. ರೈತರು ಹೆಚ್ಚು ಬೆಳೆ ಬೆಳೆದಾಗ ಬೇಡಿಕೆ ಕಡಿಮೆಯಾಗಿ ದರವೂ ಕಡಿಮೆಯಾಗುತ್ತದೆ ಆದ್ದರಿಂದ ಏಕ ಬೆಳೆಗೆ ಮಾರುಹೋಗದಂತೆ ಸಲಹೆ ನೀಡಿದರು.
ಹಿರಿಯ ಸಹಾಯಕ ತೋಟ ಗಾರಿಕಾ ನಿರ್ದೇಶಕ ಜಿ.ಆರ್.ವೀರ ಭದ್ರಸ್ವಾಮಿ ಮಾತನಾಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಯಡಿ ಎ ತೋಟಗಾರಿಕಾ ಬೆಳೆ ಗಳ ಹನಿನೀರಾವರಿಗೆ ಎಸ್.ಸಿ.- ಎಸ್ಟಿಯವರಿಗೆ ೯೦% ಮತ್ತು ಇತರೆ ವರ್ಗದವರಿಗೆ ೭೫% ರಂತೆ ಸಹಾ ಯಧನ ಸೌಲಭ್ಯ ಲಭ್ಯವಿದ್ದು ಅರ್ಹ ಫಲಾನುಭವಿಗಳು ಸೌಲಭ್ಯ ಗಳ ಸದುಪಯೋಗ ಪಡೆದುಕೊ ಳ್ಳುವಂತೆ ಮಾಹಿತಿ ನೀಡಿದರು.
ಸಿ.ವೈ.ರಮೇಶ್ ಸಹಾಯಕ ತೋಟಗಾರಿಕಾ ನಿರ್ದೇಶಕರು ,ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಶಿವಕುಮಾರ್ ನಾಯ್ಕ್,ರಮೇಶ್,ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಸತೀಶ್, ಅರುಣ್,ಗುರುರಾಜ್ ಮಠಪತಿ,ರೇವಣಸಿದ್ದಪ್ಪ ಮತ್ತಿತ ರರು ಉಪಸ್ಥಿತರಿದ್ದರು.