ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ರಾಮಾಯಣ-ಮಹಾಭಾರತ-ಭಗವದ್ಗೀತೆಯ ಸಾರವನ್ನು ಜೇನು ಹುಳು ಜೇನುತುಪ್ಪ ಸಂಗ್ರಹಿಸಿದ ರೀತಿ ಮಂಕುತಿಮ್ಮನ ಕಗ್ಗದಲ್ಲಿ ನೀಡಿದ ಡಿವಿಜಿ

Share Below Link

ಭದ್ರಾವತಿ: ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ರಾಮಾಯಣ, ಮಹಾಭಾರತ , ಭಗವದ್ಗೀತೆ ಈ ಮೂರರ ಸಾರ, ತತ್ವ, ಸತ್ಯ, ಶಕ್ತಿಗಳನ್ನು ಸಂಗ್ರಹಿಸಿ ಕ್ರೂಢೀಕರಿಸಿ ಜೇನು ಹುಳ ಎ ಹೂಗಳ ಮಕರಂದವನ್ನು ಹೀರಿ ಜೇನುತುಪ್ಪವನ್ನು ಸಂಗ್ರಹಿಸುವಂತೆ ಡಿವಿಜಿಯವರು ನಮಗೆ ಕಗ್ಗದ ಜೇನುತುಪ್ಪವನ್ನು ನೀಡಿzರೆ ಎಂದು ಶಿವಮೊಗ್ಗದ ನಿವೃತ್ತ ಉಪನ್ಯಾಸಕ ಹಾಗು ಪ್ರವಚನಕಾರ ವಿ| ಜಿ.ಎಸ್.ನಟೇಶ್ ತಿಳಿಸಿದರು.
ನಗರದ ಭೂಮಿಕಾ ವತಿಯಿಂದ ಹಳೇ ನಗರದ ಮಹಿಳಾ ಸಮಾಜದಲ್ಲಿ ಏರ್ಪಡಿ ಸಿದ್ದ ಕಗ್ಗದಲ್ಲಿ ರಾಮಾಯಣ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು, ಶ್ರವಣ ತತ್ವ, ಮನೋನಿತತ್ವ, ಬದಽತತ್ವ ಈ ಮೂರನ್ನು ಒಳಗೊಂಡ ರಾಮಾಯಣದ ಪ್ರೀತಿಯನ್ನು ಮಹಾಭಾರತದ ನೀತಿಯನ್ನು ಭಗವದ್ಗೀತೆಯ ವಿಶ್ವ ಜೀವನದ ರಹಸ್ಯವನ್ನು ಒಳಗೊಂಡ ಮಹಾ ಗ್ರಂಧವೆಂದು ಬಣ್ಣಿಸಿದರು.


ಘನ ತತ್ವ ಒಂದಕ್ಕೆ ದಿನ ರಾತ್ರಿ ಮನ ಸೋತು ಎನ್ನುವ ಕಗ್ಗವನ್ನು ಉದಾಹರಿಸಿ ಹನುಮಂತನ ರಾಮ ಭಕ್ತಿ ರಾಮನ ಒಂದೇ ಚಿಂತೆಯಲ್ಲಿ ಅನುಸಂಧಿಯಲ್ಲಿ ಜೀವಭಾರವನ್ನು ಮರೆಯುವಂತೆ ನಾವು ನಮ್ಮ ಸಂಸಾರ ಭರವನ್ನು ಕಡಿಮೆ ಗೊಳಿಸುತ್ತಾ ನಾವೇ ಹನುಮಂತ ರಾಗಬೇಕು ಎಂದು ಡಿವಿಜಿ ಯವರ ಆಶಯವನ್ನು ನೆನಪಿಸಿದರು.
ತನ್ನ ರುಚಿ ರಾಮ ರುಚಿ ತನ್ನ ಸಂತುಷ್ಠಿ ಎನ್ನುವ ಕಗ್ಗದ ಮುಕ್ತವನ್ನು ಹೇಳಿ ಶಬರಿಯ ರಾಮ ಪ್ರೀತಿ ಯನ್ನು ಚೆನ್ನಾಗಿ ವಿವರಿಸುತ್ತಾ ರುಚಿಯಾದ ಹಣ್ಣುಗಳನ್ನು ರಾಮನು ತಿಂದು ಸಂತೃಪ್ತಿಯಾದರೆ ತನ್ನ ಸಂತೃಪ್ತಿ ಪರಿಪೂರ್ಣವಾಗುತ್ತದೆ ಎಂಬ ಶಬರಿಯ ಸಹಜವಾದ ದೈವಾತ್ಮ ಭಾವವನ್ನು ನಾವೇಲ್ಲರೂ ಕೂಡ ಅಳವಡಿಸಿಕೊಳ್ಳಬೇಕು ಎಂದರು.
ಭರತ ರಾಮನ ಪಾದುಕೆ ಯನ್ನು ಸಿಂಹಾಸನದಲ್ಲಿಟ್ಟು ಹೇಗೆ ರಾಜ್ಯಭಾರ ಮಾಡಿದ ಎನ್ನುವುದನ್ನು ಅರಸ ಪದವಿಗೃದೋಡೆ ಅವನಿತ್ತ ಪಾದುಕೆ ಎನ್ನುವ ಕಗ್ಗದ ಸಾಲನ್ನು ಹೇಳಿ ಭರತನು ರಾಜನಾಘದೇ ಹೇಗೆ ಜೀವನ ನಡೆಸಿದನೋ ಹಾಗೆ ಈ ಸಂಸಾರದ ಭಾರವನ್ನು ನಾವು ಹೊತ್ತು ಮಿಕ್ಕದ್ದನ್ನು ಭವಂತನಿಗೆ ಬಿಟ್ಟು ಈ ಜಗತ್ತೀನಲ್ಲಿ ಬಾಳಲು ಕಲಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ| ಕೃಷ್ಣ ಎಸ್ ಭಟ್, ಪತ್ರಿಕೋದ್ಯಮ, ಸಾಹಿತ್ಯ, ಸಾಮಾಜಿಕ ಜೀವನ ಈ ಮೂರರ ಸಂಗಮ ಕನ್ನಡ ಸಾರಸ್ವತ ಲೋಕದ ಅಶ್ವಥ್ ವೃಕ್ಷದಂತೆ ಬಾಳಿದ ಡಿವಿಜಿಯವರ ಬದುಕು ಬರಹ ಇಂದಿಗೂ ನಮಗೆ ಕಗ್ಗದ ಮೂಲಕ ಬೆಳಕಾಗಿ ನಮ್ಮ ಜೀವನಕ್ಕೆ ಮಾರ್ಗ ದರ್ಶಿಕೆಯಾಗಿದೆ ಎಂದರು.
ಪುಷ್ಪಾ ಸುಬ್ರಮಣ್ಯ, ರಾಧಾ ಭಟ್ ಪ್ರಾರ್ಥನೆ ಮಾಡಿದರು. ಅಪರಂಜಿ ಶಿವರಾಜ್ ಸ್ವಾಗತಿಸಿ ದರು. ಆನಂದ್ ಅಥಿತಿಗಳ ಪರಿಚಯ ಮಾಡಿದರು. ರೂಪಾ ರಾವ್ ವಂದನಾರ್ಪಣೆ ಮಾಡಿದರು. ಶಾರದಾ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.