೧೬೯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ
ಶಿವಮೊಗ್ಗ: ಯುವ ಬೆಂಗ ಳೂರು ಟ್ರಸ್ಟ್ ವತಿಯಿಂದ ಇಂದು ಗುತ್ಯಪ್ಪ ಕಾಲೋನಿಯಲ್ಲಿರುವ ಸರ್ಕಾರಿ ಕಿರಯ ಪ್ರಾಥಮಿಕ ಶಾಲೆ ಯಲ್ಲಿ ವಿವಿಧ ಸರ್ಕಾರಿ ಶಾಲೆಗಳ ೧೬೯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ನೋಟ್ ಬುಕ್ ವಿತರಿಸ ಲಾಯಿತು.
ಗುತ್ಯಪ್ಪ ಕಾಲೋನಿ ಶಾಲೆ, ಹೊಳೆಹೊನ್ನೂರು ಸರ್ಕಾರಿ ಶಾಲೆ, ಹೊಸನಗರದ ಮಾದಾಪುರ ಕಿರಿಯ ಪ್ರಾಥಮಿಕ ಶಾಲೆ, ಗಿಳಾಲ ಗುಂಡಿ ಶಾಲೆಯ ಸುಮಾರು ೧೬೯ ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್ ಬುಕ್ ಹಾಗೂ ಕಲಿಕಾ ಪರಿಕರಗ ಳನ್ನು ನಿವೃತ್ತ ಶಿಕ್ಷಕಿ ಲಲಿತಾ ಹಾಗೂ ಸಿಆರ್ಪಿ ಶೈಲಶ್ರೀ ಅವರು ವಿತರಿಸಿ ದರು.
ಈ ಸಂದರ್ಭದಲ್ಲಿ ಮಾತನಾ ಡಿದ ಶಿಕ್ಷಕಿ ಭಾಗೀರಥಿ ಯುವ ಬೆಂಗಳೂರು ಟ್ರಸ್ಟ್ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ಹಾಗೂ ನೋಟ್ಬುಕ್ ನೀಡು ತ್ತಿದೆ. ಇದರಿಂದ ಸರ್ಕಾರಿ ಶಾಲೆಯ ಮಕ್ಕಳಿಗೂ ಸಮಾನ ಅವಕಾಶ ಸಬಲೀಕರಣ ಹಾಗೂ ಸಮು ದಾಯದ ಅಭಿವೃದ್ಧಿ ಸಾಧ್ಯವಾಗು ತ್ತದೆ. ಸರ್ಕಾರಿ ಶಾಲೆಗಳನ್ನು ಬೆಂಬಲಿಸಿದಂತಾಗುತ್ತದೆ. ಟ್ರಸ್ಟಿನ ಎ ಪದಾಧಿಕಾರಿಗಳಿಗೆ ಶಾಲೆಗಳ ಪರವಾಗಿ ಅಭಿನಂದನೆ ಎಂದರು.
ಈ ಸಂದರ್ಭದಲ್ಲಿ ಕ್ರಿಯಾ ಶೀಲ ತಾರೆಯರ ತಂಡದ ಫೌಜಿ ಯಾ ಸರವತ್, ಜ್ಯೋತಿ, ಪವಿತ್ರ. ಮಂಜು, ಸುನಿಲ್, ರಮೇಶ್, ಮುಂತಾದವರು ಇದ್ದರು.