ತುರ್ತು ಪರಿಸ್ಥಿತಿಯ ಕರಾಳ ದಿನದ ಆಚರಣೆ..
ಭದ್ರಾವತಿ: ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತದ ತುರ್ತುಪರಿಸ್ಥಿತಿಯ ಕರಾಳ ದಿನಗಳು ಪ್ರಜಪ್ರಭುತ್ವದ ಕಗ್ಗೊಲೆ ಮಾಡಿ ಇಡೀ ಭಾರತ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರಿ ಧೋರಣೆಗೆ ನಾಂದಿ ಹಾಡಿದ ಹಿನ್ನೆಲೆಯಲ್ಲಿ ಜೂ.೨೫ರಂದು ಕರಾಳ ದಿನಾಚರಣೆಯನ್ನು ಆಚರಿಸಲಾಗು ತ್ತದೆ ಎಂದು ಮಂಡಲದ ಅಧ್ಯಕ್ಷ ಧರ್ಮ ಪ್ರಸಾದ್ ತಿಳಿಸಿದರು.
ಭದ್ರಾವತಿಯ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ತುರ್ತು ಪರಿಸ್ಥಿತಿಯ ಕರಾಳ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮೇಲಿನಂತೆ ನುಡಿದರು.
ಕಾರ್ಯಕ್ರಮದಲ್ಲಿ ಅಂದಿನ ಹೋರಾಟದ ಪತ್ರಿಕಾ ವರದಿಗಳ ತುಣುಕುಗಳ ಭಾವಚಿತ್ರ ಮತ್ತು ಹೋರಾಟದ ಭಾವಚಿತ್ರ ಪ್ರದರ್ಶನ ವಿಶೇಷವಾಗಿತ್ತು. ಹೋರಾಟದಲ್ಲಿ ಭಾಗವಹಿಸಿದ್ದ ಹಿರಿಯ ಕಾರ್ಯಕರ್ತರು ಅಂದು ನಡೆದ ದೌರ್ಜನ್ಯ ಹಾಗೂ ಯಾತನೆಯನ್ನು ನೆನಪು ಮಾಡಿಕೊಂಡು ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಿ ಸಮಿತಿಯ ಸಂಚಾಲಕ ಡಾ. ಧನಂಜಯ್ ಸರ್ಜಿ. ಪ್ರಮುಖರಾದ ಶ್ರೀನಾಥ್ ಬಿಕೆ. ಪ್ರಭಾಕರ್. ಕದಿರೇಶ್. ನಾಗಭೂಷಣ್, ರಾಘವೇಂದ್ರ. ರಂಗಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.