ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯಕ್ಷಗಾನ ಕಲೆಯು ನಮ್ಮ ಸಂಸ್ಕೃತಿ- ಪರಂಪರೆಯ ಕೊಂಡಿಯಾಗಿದೆ…

Share Below Link

ಸಾಗರ: ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನ ನಮ್ಮ ಸಂಸ್ಕೃತಿ, ಪರಂಪರೆಯ ಕೊಂಡಿ. ಇದರ ಮೂಲಕ್ಕೆ ಯಾವುದೇ ಧಕ್ಕೆಯಾಗದಂತೆ ಉಳಿಸಿ ಬೆಳೆಸ ಬೇಕು ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಪಿ.ವಿ.ಹೆಗಡೆ ಹೊಸಗz ಹೇಳಿದರು.
ಇಲ್ಲಿನ ಎಲ್.ಬಿ.ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ತೆಂಕು-ಬಡಗು ಪ್ರಸಿದ್ಧ ಕಲಾವಿದ ರಿಂದ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಎಚ್.ಡಿ. ಕೃಷ್ಣಮೂರ್ತಿ ಮೆಮೋರಿಯಲ್ ಟ್ರಸ್ಟ್ ಹಂಸಗಾರು ವತಿಯಿಂದ ನೀಡುವ ಯಕ್ಷ ಮುಂಗಾರು ಪ್ರಶಸಿ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಶ್ರೇಷ್ಠ ಪರಂಪರೆಯ ರಾಮಾಯಣ, ಮಹಾಭಾರತ ಕಥೆಯನ್ನು ವಿಸ್ತರಿಸುವುದಕ್ಕಾಗಿ, ಹೆಚ್ಚಿನ eನ ಪಡೆದುಕೊಳ್ಳಲು ಇಂಥ ಕಲಾ ಪ್ರದರ್ಶನಗಳು ನಡೆಯಬೇಕು. ಇಂಥ ಪ್ರದರ್ಶನಗಳು ಪ್ರತಿಯೊಬ್ಬರ ಮನೆಯಂಗಳದಲ್ಲೂ ನಡೆಯಬೇಕು ಎಂದರು.
ಟ್ರಸ್ಟ್‌ನ ಚಂದ್ರಹಾಸ ಭಟ್ ಮಾತನಾಡಿ, ಕೃಷ್ಣಮೂರ್ತಿ ಯವರು ಕಲಾ ಪೋಷಕರಾಗಿ ನಮ್ಮ ಕಲೆ, ಸಂಸ್ಕೃತಿಯ ಉಳಿವಿಗೆ ಶ್ರಮಿಸಿದ್ದರು. ಹಾಗಾಗಿ ಅವರ ಹೆಸರಿನಲ್ಲಿ ಟ್ರಸ್ಟ್ ಆರಂಭಿಸಿ ಹವ್ಯಾಸಿ ಕಲಾವಿದರೊಬ್ಬರಿಗೆ ಪ್ರಶಸ್ತಿ ಯನ್ನು ನೀಡುತ್ತಿದ್ದೇವೆ ಎಂದರು.
ಸನ್ಮಾನಿತ ಪಿ.ವಿ. ಹೆಗಡೆ ಯವರು ಹವ್ಯಾಸಿ ಕಲಾವಿದರಾಗಿ ಯಕ್ಷಗಾನ ರಂಗದಲ್ಲಿ ಪಾತ್ರಧಾರಿ ಯಾಗಿಯೂ, ತಾಳಮದ್ದಳೆಯಲ್ಲೂ ಅರ್ಥಧಾರಿಯಾಗಿಯೂ ಹೆಸರು ಮಾಡಿzರೆ. ಆದರೆ ಅವರ ಸಾಧ ಯನ್ನು ಯಾರೂ ಗುರುತಿಸಿ ರಲಿಲ್ಲ. ಎಲೆಮರೆಯ ಕಾಯಿಯಾ ಗಿದ್ದು ಸಾಧನೆ ಮಾಡಿದವರನ್ನು ಗೌರವಿಸಿ ಸನ್ಮಾನಿಸುವುದು ಟ್ರಸ್ಟ್‌ನ ಉದ್ದೇಶ ಗಳಂದು. ಹೆಗಡೆ ಯವರ ಮೊಮ್ಮಕ್ಕಳೂ ಯಕ್ಷರಂಗಕ್ಕೆ ಕಾಲಿಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.
ಪತ್ರಕರ್ತ ಎಚ್.ವಿ. ರಾಮಚಂದ್ರರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹವ್ಯಾಸಿ ಕಲಾವಿದರಾಗಿಯೂ ಹಲವಾರು ಸಾಧಕ ಕಲಾವಿದರಿzರೆ. ಅಂಥವರನ್ನು ಗುರುತಿಸಿ ಗೌರವಿಸ ಬೇಕು. ಯಕ್ಷಗಾನ ಸರ್ವಾಂಗ ಸುಂದರ ಶ್ರೇಷ್ಠ ಕಲೆ. ಅನೇಕ ಪಲ್ಲಟಗಳ ನಡುವೆಯೂ ಅದು ತನ್ನ ಆಕರ್ಷಣೆಯನ್ನು ಉಳಿಸಿ ಕೊಂಡಿದೆ. ಯುವಪೀಳಿಗೆಯೂ ಯಕ್ಷಗಾನದತ್ತ ಹೆಜ್ಜೆ ಹಾಕುತ್ತಿರುವುದು ಆಶಾದಾಯಕ ಬೆಳವಣಿಗೆ. ಇದನ್ನು ಉಳಿಸಿ ಬೆಳೆಸಲು ಎಲ್ಲ ರೀತಿಯ ಪ್ರಯತ್ನ ನಡೆಯಬೇಕು ಎಂದರು.
ಸಂಘಟಕ ಚಂದ್ರಮೋಹನ ಭಟ್, ಭುವನೇಶ್ವರಿ ಪಿ.ವಿ.ಹೆಗಡೆ, ಮಹಾಲಕ್ಷ್ಮೀ ರಾಮಚಂದ್ರರಾವ್, ಎಚ್.ಡಿ. ವಿದ್ಯಾಶಂಕರ, ಮಹಾಬಲೇಶ್ವರ, ಪುಟ್ಟು ಮತ್ತಿತರರು ಹಾಜರಿದ್ದರು.