ಹಿರೇಕಲ್ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ; ವಿದ್ಯಾಪೀಠದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಸನ್ಮಾನ..
ಹೊನ್ನಾಳಿ : ಇಲ್ಲಿನ ಐತಿಹಾಸಿಕ ಪ್ರಸಿದ್ಧ ಹಿರೇಕಲ್ ಮಠದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ರುದ್ರಾಭಿಷೇಕ ಹೋಮ ಶ್ರೀ ಚೆನ್ನಪ್ಪ ಸ್ವಾಮಿಯ ಬೆಳ್ಳಿ ರಥೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮಗಳು ಜರುಗಿದವು.
ಶ್ರೀ ಮಠದ ವಿದ್ಯಾಪೀಠದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗ್ರಾಮಾಂತರ ಶ್ರೀ ಚನ್ನಪ್ಪ ಸ್ವಾಮಿ ವಿದ್ಯಾಪೀಠದ ಪ್ರಾಂಶುಪಾಲ ಬಸವರಾಜು ಉಪ್ಪಿನ, ಹಳದಮ್ಮ ದೇವಿ ಶಾಲೆಯ ಮುಖ್ಯಶಿಕ್ಷಕ ಎಂಪಿಎಂ ಷಣ್ಮುಖಯ್ಯ. ಸಹ ಶಿಕ್ಷಕ ಮಹೇಶ್ವರಪ್ಪ, ಸದಾಶಿವಪ್ಪ ಶಾಕುಂತಲ ಹಾಗೂ ಗಂಗಮ್ಮ ಐಟಿಐ ಕಾಲೇಜಿನ ಪ್ರಾಂಶುಪಾಲರಾಗಿ ಸರ್ಕಾರಿ ಕೆಲಸದ ನಿಮಿತ್ತ ಘಟ್ಟಿಗೂಡು ವಿಶ್ವವಿದ್ಯಾಲಯದಲ್ಲಿ ಸೇವೆಯನ್ನು ಸಲ್ಲಿಸಲು ತೆರಳುತ್ತಿರುವ ಎಚ್ ಎಂ ಗುರುಪ್ರಕಾಶ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಾಗೂ ಸನ್ಮಾನವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ನೂತನ ಶಾಸಕರಾಗಿ ಆಯ್ಕೆಯಾದ ಡಿಜಿ ಶಾಂತನಗೌಡರಿಗೂ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶಾಸಕರು ಡಿ ಜಿ ಶಾಂತನಗೌಡ, ನನಗೆ ಈ ಮಠದ ಮೇಲೆ ತುಂಬಾ ಭಕ್ತಿ ಇದೆ. ಹಿಂದಿನ ಗುರುಗಳು ನಮ್ಮನ್ನು ಕಂಡರೆ ಬಹಳ ಪ್ರೀತಿ ಮಾಡುತ್ತಿದ್ದರು. ಅವರ ಆಶೀರ್ವಾದ ಹಾಗೂ ಮಠದ ಚನ್ನಪ್ಪ ಸ್ವಾಮಿಗಳವರ ಆಶೀರ್ವಾದದಿಂದ ನಾನು ಇಂದು ಜನಸೇವೆ ಮಾಡಲು ಸಾಧ್ಯವಾಗಿದೆ. ನಾನು ಯಾವುದೇ ಭ್ರಷ್ಟಾಚಾರ ಹಾಗೂ ಯಾವುದೇ ತಪ್ಪನ್ನು ಮಾಡದೆ ನಿಷ್ಕಳಂಕವಾಗಿ ತಾಲೂಕಿನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದೇನೆ ಅದರ ಫಲವೇ ನನಗೆ ಗೆಲುವಿಗೆ ಕಾರಣವಾಯಿತು. ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಜನತೆ ನನಗೆ ಆಶೀರ್ವದಿಸಿzರೆ. ಅವರ ಆಶೀರ್ವಾದದೊಂದಿಗೆ ನಾನು ಶಾಸಕನಾಗಿ ಐದು ವರ್ಷ ಸೇವಿ ಸಲ್ಲಿಸಲು ಬಂದಿದ್ದೇನೆ. ಈ ೫ ವರ್ಷ ಅಭಿವೃದ್ಧಿ ಕಾರ್ಯ ಮತ್ತು ಜನರ ಸೇವೆಯನ್ನು ಮಾಡಲು ನನಗೆ ಆಶೀರ್ವದಿಸಿ ಎಂದು ಸಭೆಯಲ್ಲಿ ಕೇಳಿಕೊಂಡರು.
ಚನ್ನಪ್ಪ ಸ್ವಾಮಿ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಬಸವರಾಜ್ ಉಪ್ಪಿನ ಮಾತನಾಡಿ, ನಾವು ನಿವೃತ್ತಿ ಹೊಂದಿಲ್ಲ ಸರ್ಕಾರಿ ನೌಕರನಾಗಿ ನಿವೃತ್ತಿ ಹೊಂದಿದ್ದೇನೆ ಅಷ್ಟೇ. ೩೫ ವರ್ಷ ನಮ್ಮ ಸೇವೆ ಸಲ್ಲಿಸಿದ್ದೇನೆ. ಯಾವುದೇ ಕಪ್ಪು ಚುಕ್ಕಿ ಇಲ್ಲದ ಹಾಗೆ ಸೇವೆ ಸಲ್ಲಿಸಿದ್ದೇನೆ . ಎಲ್ಲರಲ್ಲೂ ಒಳ್ಳೆಯ ವ್ಯಕ್ತಿಯಾಗಿ ಕೆಲಸ ಮಾಡಿದ್ದೇನೆ ಎಂದರು.
ಪೂಜ್ಯ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ನಮ್ಮ ಪ್ರಾಂಶುಪಾಲರು ಹಾಗೂ ಸಹ ಶಿಕ್ಷಕರ ಸೇವೆ ಅತಿ ಅಮೂಲ್ಯ ಅವರು ಸೇವೆ ಸಲ್ಲಿಸಿzರೆ. ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳು ಒಳ್ಳೆ ಒಳ್ಳೆ ಉತ್ತುಂಗದ ಕೆಲಸದಲ್ಲಿದ್ದು ಅವರು ಓದಿದಂತ ವಿದ್ಯಾಪೀಠದ ಬಗ್ಗೆ ಬಹಳಷ್ಟು ಅಭಿಮಾನಗಳನ್ನು ಇಟ್ಟುಕೊಂಡಿzರೆ. ಇಂಥ ಶಿಕ್ಷಕರು ನಮಗೆ ಸಿಕ್ಕಿದ್ದು ನಮ್ಮ ಮಠದ ವಿದ್ಯಾಪೀಠಕ್ಕೆ ಕೀರ್ತಿ ಹೆಚ್ಚಿಸಿದೆ ಎಂದರು.
ಶಾಸಕ ಡಿಜಿ ಶಾಂತನಗೌಡರು ಸಹ ನಮ್ಮ ಮಠದ ಆಪ್ತ ಭಕ್ತರು, ಸಲಹೆಗಾರರು ಸಹ ಕೂಡ. ಅವರು ಮಠದ ಬಗ್ಗೆ ಅಪಾರವಾದ ನಂಬಿಕೆ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡವರು. ಮಠ ಎಂದರೆ ಬಹಳ ಅಭಿಮಾನ ಎಂದರು. ನೆರೆದಿರುವ ಭಕ್ತರಿಗೆ ಶ್ರೀ ಗುರು ಚನ್ನೇಷನ ಕೃಪಾಶೀರ್ವಾದ ಕೊಟ್ಟು ಕಾಪಾಡಲಿ ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಹಿಂದುಳದ ವರ್ಗದ ಕಾಂಗ್ರೆಸ್ ಮುಖಂಡರಾದ ಉಮಾಪತಿ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪುಷ್ಪ ರವೀಶ್, ಚೆನ್ನಪ್ಪ ಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಬೆನ್ನೂರು ಮಠ, ವ್ಯವಸ್ಥಾಪಕ ಚನ್ನಬಸಯ್ಯ ನಿರೂಪಣೆ ಮಾಡಿದರು.