ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡ ವಿಶ್ವಪ್ರಸಿದ್ಧ ಡೋರ್ನಹಳ್ಳಿ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವ
ಡೋರ್ನಹಳ್ಳಿ : ಐತಿಹಾಸಿಕ ಪ್ರಸಿದ್ದ ಡೋರ್ನಹಳ್ಳಿಯ ಸೇಂಟ್ ಅಂತೋನಿ ಬೆಸಿಲಿಕಾದಲ್ಲಿ ಸಂತ ಅಂತೋನಿ ಅವರ ವಾರ್ಷಿಕ ಮಹೋತ್ಸವವು ಜೂ.೧೩ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಅಂದು ಬೆಳಿಗ್ಗೆ ೫ ರಿಂದ ಸಂಜೆ ೫.೩೦ರವರೆಗೆ ಸಾಮೂಹಿಕ ಪ್ರಾರ್ಥನೆಗಳು ನಡೆದವು. ಮೈಸೂರು ಧರ್ಮಪ್ರಾಂತ್ಯದ ಧರ್ಮಪ್ರಚಾರಕ ಆಡಳಿತಾಧಿಕಾರಿ ಹಾಗೂ ನಿವೃತ್ತ ಅರ್ಚ್ಬಿಷಪ್ ಪರಮಪೂಜ್ಯ ಡಾ.ಬರ್ನಾರ್ಡ್ ಮೊರಾಸ್ ಅವರ ದಿವ್ಯ ಸಾನಿಧ್ಯ ದಲ್ಲಿ ವಿವಿಧ ಧರ್ಮಕೇಂದ್ರದ ಗುರುಗಳೊಂದಿಗೆ ಹಬ್ಬದ ಪವಿತ್ರ ಪ್ರಸಾದದ ಆರಾಧನೆ ಹಾಗೂ ಪವಿತ್ರ ಪೂಜಾವಿಧಿಗಳನ್ನು ನೆರವೇ ರಿಸಲಾಯಿತು. ಕೆ.ಆರ್.ನಗರದ ಶಾಸಕ ರವಿಶಂಕರ್ ಸೇರಿದಂತೆ ಅನೇತ ಗಣ್ಯಾತಿಗಣ್ಯರು ಕೂಡ ಸೇಂಟ್ ಅಂತೋನಿ ಬೆಸಿಲಿಕಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ದಿನವಿಡೀ ನಡೆದ ಮಹಾ ಮಸ್ತಕಾಭಿ ಷೇಕದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಹರಕೆ ತೀರಿಸಿದರು.