ತೃತೀಯ ಲಿಂಗ ಸಮುದಾಯದ ಮೇಲಿನ ದೌರ್ಜನ್ಯ ಖಂಡನೀಯ
ಶಿವಮೊಗ್ಗ: ತೃತಿಯ ಲಿಂಗ ಸಮುದಾಯದ ಮೇಲೆ ನಿರಂತರ ವಾಗಿ ಮಾನಸಿಕ ಹಾಗೂ ದೈಹಿಕ ವಾಗಿ ಆಗುತ್ತಿರುವ ದೌರ್ಜನ್ಯ, ಕಿರುಕುಳ ಖಂಡನೀಯ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿ ಯೇಷನ್ ಆಫ್ ಇಂಡಿಯಾ ಶಿವ ಮೊಗ್ಗ ಘಟಕದ ಅಧ್ಯಕ್ಷ ಎಸ್. ಬಿ.ಅಶೋಕ್ಕುಮಾರ್ ಹೇಳಿ ದರು.
ಶಿವಮೊಗ್ಗ ನಗರದಲ್ಲಿರುವ ಫ್ಯಾಮಿಲಿ ಪ್ಲಾನಿಂಗ್ ಅಸೋಸಿ ಯೇಷನ್ ಆಫ್ ಇಂಡಿಯಾ ಶಿವ ಮೊಗ್ಗ ಘಟಕದಲ್ಲಿ ಆಯೋಜಿಸಿದ್ದ ತೃತಿಯಲಿಂಗಿಗಳಿಗೆ ಆರೋಗ್ಯ ಜಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ೨೦೧೪ ರಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪು ತೃತಿಯಲಿಂಗಿ ಗಳಿಗೂ ಕಾನೂನು ಬದ್ದವಾದ ಹಕ್ಕುಗಳನ್ನು ಸಾಮಾನ್ಯರಿಗೆ ಇರು ವಂತೆ ಉದ್ಯೋಗ, ವಿದ್ಯಾಭ್ಯಾಸ, ವ್ಯವಹಾರದಲ್ಲಿ ಸಮಾನ ಹಕ್ಕು ನೀಡಿದೆ. ಅದರೆ ಈ ಕಾಯಿದೆ ಇನ್ನು ಅನುಷ್ಟಾನ ಜರಿಗೆ ಬಂದಿಲ್ಲದಿರು ವುದು ವಿಷಾದನೀಯ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಶಿವ ಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯ ದರ್ಶಿ ಜಿ.ವಿಜಯ್ಕುಮಾರ್ ಅವ ರು ಗಣೇಶ ಅಂಗಡಿ ಫಾರ್ಮ್ದವರು ಸಮುದಾಯದ ಜನರಿಗೆ ಕೊಟ್ಟಂತ ಪೌಷ್ಟಿಕ ಆಹಾರ ಮತ್ತು ಮಾತ್ರೆ ಗಳನ್ನು ವಿತರಿಸಿದರು.
ತೃತೀಯ ಲಿಂಗ ಸಮುದಾ ಯದ ಮೇಲೆ ಮಾನಸಿಕ ಕಿರುಕುಳ ಹಾಗೂ ದೈಹಿಕ ದೌರ್ಜನ್ಯ ಆಗು ವುದನ್ನು ತಡೆಗಟ್ಟಬೇಕು. ಇವರಿಗೆ ಕಾನೂನಿನಲ್ಲಿ ಇರುವ ಹಕ್ಕುಗಳನ್ನು ಪರಿಣಾಮಕಾರಿಯಾಗಿ ತಲುಪಿ ಸುವ ಕೆಲಸ ಆಗಬೇಕು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ರಕ್ಷ ಸಮುದಾಯ ಸಂಘದ ಯೋಜನೆ ನಿರ್ದೇಶಕ ಮಹಮದ್ ಸೈಫ್ ವು ಸಭೆಯಲ್ಲಿ ಉಪಸ್ಥಿತರಿ ದ್ದರು. ಅನಿಲ್ ಕುಮಾರ್ ಸರ್ವ ರನ್ನು ಸ್ವಾಗತಿಸಿದರು. ಅಬ್ದುಲ್ ಪ್ರಾರ್ಥಿಸಿದರು. ಸೌಜನ್ಯ ವಂದನಾ ರ್ಪಣೆ ನಡೆಸಿಕೊಟ್ಟರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.