ಆ. ೧೧ ರಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಹಾರಾಟ ಆರಂಭ …
ಶಿವಮೊಗ್ಗ : ಮುಂಬರುವ ಆ.೧೧ ರಿಂದ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಸರಕಾರಿ ನೌಕರರ ಭವನದಲ್ಲಿ ಇಂದು ಬೆಳಗ್ಗೆ ಜಿ ಬಿಜೆಪಿ ಹಮ್ಮಿಕೊಂಡಿದ್ದ ವರ್ತಕರ ಸಭೆಯನ್ನು ದೀಪ ಬೆಳ ಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ರೈಲ್ವೆ ಕ್ಷೇತ್ರ ದಲ್ಲೂ ಕೂಡ ಮಹತ್ತರ ಬದ ಲಾವಣೆಯಾಗಿವೆ. ಶಿವಮೊಗ್ಗ- ಶಿಕಾರಿಪುರ-ರಾಣೆಬೆನ್ನೂರಿಗೆ ನೂತನ ರೈಲು ಸಂಪರ್ಕ ಕಲ್ಪಿಸಲಾ ಗುತ್ತಿದೆ.೧೦ ಜಿಗಳಿಗೆ ಇದು ಸಂಪರ್ಕ ಕಲ್ಪಿಸಲಿದೆ. ಇದರಿಂದಾಗಿ ಶಿವಮೊಗ್ಗ ಜಿ ಮತ್ತಷ್ಟು ಅಭಿ ವೃದ್ಧಿ ಆಗುವುದರಲ್ಲಿ ಅನುಮಾನ ವೇ ಇಲ್ಲ ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜ ಕಾರಣ ಬೇಡ, ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಲಾಭ ಆಗ ಲಿದೆ.ಶಿವಮೊಗ್ಗದಿಂದ ಹಲವಾರು ಜನರು ದೆಹಲಿಗೆ ಸಂಚರಿಸುತ್ತಾರೆ. ಪ್ರವಾಸೋದ್ಯಮ, ಕೈಗಾರಿಕಾ ವಲಯ ಅಭಿವೃದ್ಧಿಗೆ ಇದು ಪೂರಕ ವಾಗಿದೆ. ಈಗಾಗಲೇ ನಾವು ಇಂಡಿ ಗೋ ಸಂಸ್ಥೆಗೆ ಸಬ್ಸಿಡಿ ನೀಡಿzವೆ. ಪ್ರವಾಸೋದ್ಯಮದಲ್ಲಿ ಜೋಗ ಅಭಿವೃದ್ಧಿ ಆಗುತ್ತಿದೆ. ಜೋಗ ಅಭಿ ವೃದ್ಧಿಯಾದರೆ, ಉದ್ಯೋಗ ಸೇರಿ ದಂತೆ ವಿವಿಧ ಆಯಾಮಗಳಲ್ಲಿ ಶಿವಮೊಗ್ಗ ಜನತೆಗೆ ಲಾಭವಾಗ ಲಿದೆ. ರಾಜಕಾರಣಕ್ಕಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜರಿ ಹಿಂಪಡೆ ಯಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದೆ. ಈ ಬಗ್ಗೆ ಪಶು ಸಂಗೋಪನೆ ಇಲಾಖೆ ಸಚಿವರು ಹೇಳಿzರೆ. ಗೋವನ್ನು ತಾಯಿ ಯ ಹಾಗೆ ನಾವು ಪೂಜಿಸುತ್ತೆವೆ. ಈ ಕಾಯ್ದೆ ಹಿಂಪಡೆಯುವುದು ಎಷ್ಟು ಸರಿ ಪ್ರಶ್ನಿಸಿದರು.
ವಿಐಎಸ್ಎಲ್ ಪುನಶ್ಚೇತನ ವಿಚಾರವಾಗಿ ಸಂಬಂಧಪಟ್ಟ ಸಚಿ ವರ ಬಳಿ ಚರ್ಚೆ ನಡೆಸಿzನೆ ಎಂದ ಅವರು, ನೂತನ ಹೆzರಿ ರಸ್ತೆ ನಿರ್ಮಾಣದ ಬಗ್ಗೆಯೂ ಸಚಿವ ರಾದ ನಿತಿನ್ ಗಡ್ಕರಿಯವರ ಬಳಿ ಚರ್ಚೆ ನಡೆಸಲಾಗಿದೆ ಎಂದರು.
ಶರಾವತಿ ಹಿನ್ನೀರಿನಲ್ಲಿ ನಾವು ನೀರು ಕಡಿಮೆ ಮಾಡಿದ್ದೇವೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪ ಮಾಡಿ zರೆ. ಆ ಪುಣ್ಯಾತ್ಮ ಅದ್ಯಾಕೆ ಆ ರೀತಿ ಆರೋಪ ಮಾಡಿzರೋ ಗೊತ್ತಿಲ್ಲ. ಸೇತುವೆ ನಿರ್ಮಾಣ ಮಾಡಲು, ಸಾಮಗ್ರಿಗಳನ್ನು ತೆಗೆ ದುಕೊಂಡು ಹೋಗಲು ನಮಗೆ ನೀರು ಬೇಕು. ನೀರು ನಾವು ಕಡಿಮೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.
ಬರುವ ಡಿಸೆಂಬರ್ ಒಳಗೆ ಹಂತ ಹಂತವಾಗಿ ಈ ಎ ಮೇಲ್ಸೇತುವೆ ಕಾಮಗಾರಿ ಉದ್ಘಾಟಿಸಲಾಗುವುದು. ಈಗಾ ಗಲೇ ಈ ಬಗ್ಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರ ಜೊತೆ ಚರ್ಚಿ ಸಲಾಗಿದೆ. ವಿಕಾಸ ಸಂಕಲ್ಪ ಯೋ ಜನೆ ವೀಕ್ಷಣೆ ಮಾಡಲಾಗುತ್ತಿದೆ.
ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಪ್ರಧಾನಮಂತ್ರಿಗಳ ವಿಕಾಸ ಸಂಕಲ್ಪ ಯೋಜನೆ ಫಲಪ್ರದವಾಗಿದೆ ಎಂದು ಹೇಳಿದರು.
ಆರ್ಥಿಕ ತಜ್ಞ ವಿಶ್ವಾನಾಥ್ ಭಟ್ ಅವರು ಮಾತನಾಡಿ, ದೇಶವು ಅಭಿವೃದ್ಧಿ ಹೊಂದಿದಾಗ ಎಲ್ಲರಿಂದಲೂ ಸಾಧನೆ ಸಾಧ್ಯ, ಆದರೆ ಆರ್ಥಿಕ ಹಿಂಜರಿತ ಬಂದಾಗ ಎಲ್ಲವೂ ಹಿನ್ನಡೆ ಆಗುತ್ತದೆ. ಭಾರತದ ವರ್ತಕರ ಭವಿಷ್ಯ ನಮ್ಮ ದೇಶದ ಅಭಿವೃದ್ಧಿಯೊಂದಿಗೆ ಸಂ ಪೂರ್ಣವಾಗಿ ಬೆಸೆದುಕೊಂಡಿದೆ. ಎಲ್ಲಿಯರೆಗೂ ಅಭಿವೃದ್ಧಿ ಏರುತಿ ಯಲ್ಲಿರುತ್ತೋ ಅಲ್ಲಿಯವರೆಗೂ ವರ್ತಕರು ಸುಭಿಕ್ಷವಾಗಿರುತ್ತಾರೆ ಎಂದು ಹೇಳಿದರು.
ಭಾರತದ ವರ್ತಕರ ಸಮುದಾ ಯದ ಬಗ್ಗೆ ಹೆಮ್ಮೆ ಇದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಪ್ರಗತಿಗೆ ಪೂರಕವಾಗಿದ್ದರೆ, ಕಾಂಗ್ರೆಸ್ ಸರಕಾರ ಹಾಗಿಲ್ಲ. ಎಲ್ಲವೂ ಓಟ್ ಬ್ಯಾಂಕ್ ಆಧಾರಿತ ವಾಗಿವೆ. ಮೋದಿ ಅವರ ಸರಕಾರ ಬಂದ ಬಳಿಕ ಮೇಳೆ ವಿಶ್ವ ಬ್ಯಾಂಕ್ ಹೇಳಿದೆ, ಭಾರತವು ಕಡುಬಡತನ ವನ್ನು ಕಡಿಮೆ ಮಾಡಿದೆ, ಇದು ಹೆಮ್ಮೆಯ ವಿಷಯ ಎಂದರು.
ಸಭೆಯಲ್ಲಿ ಶಾಸಕ ಎಸ್.ಎನ್. ಚೆನ್ನಬಸಪ್ಪ, ಬಿಜೆಪಿ ಜಿಧ್ಯಕ್ಷ ಟಿ.ಡಿ. ಮೇಘರಾಜ್, ಬಿಜೆಪಿ ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಆರ್ಥಿಕ ತಜ್ಞ ವಿಶ್ವಾನಾಥ್ ಭಟ್, ಜಿ ಬಿಜೆಪಿ ಮುಖಂಡ ಡಾ. ಧನಂಜಯ ಸರ್ಜಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.