ಸಿಎಂ ಸಿದ್ದರಾಮಯ್ಯ ಕಾಂತರಾಜು ಆಯೋಗದ ವರದಿಯನ್ನು ಶೀಘ್ರ ಜರಿಗೊಳಿಸಲಿ …
ಸಾಗರ:ಹಿಂದುಳಿದ ವರ್ಗ ದವರ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಸಿದ್ದ ರಾಮಯ್ಯನವರು ಎಚ್.ಕಾಂತ ರಾಜ ಆಯೋಗದ ವರದಿಯನ್ನು ಶೀಘ್ರವೇ ಜರಿಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಪರವಾಗಿ ಹಿಂದುಳಿದ ಜನ ಜಗೃತಿ ವೇದಿಕೆ ಮೂಲಕ ಆಗ್ರಹಿಸುತ್ತೇವೆ ಎಂದು ವೇದಿಕೆ ಗೌರವಾಧ್ಯಕ್ಷ ರಾಚಪ್ಪ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಆಯೋಗದ ವರದಿ ಜರಿಯಿಂದ ಎಲ್ಲ ವರ್ಗದವರ ಸರ್ವತೋ ಮುಖ ಅಭಿವೃದ್ಧಿ ಸಾಧ್ಯ ಎಂದರು.
ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದಿದ್ದರೂ ಹಿಂದುಳಿದ ಜತಿಗಳ ಸ್ಥಿತಿಗತಿ ಬದಲಾಗಿಲ್ಲ. ರಾಜಕೀ ಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಯಾವುದೇ ಅಭಿವೃದ್ಧಿಯಾಗಿಲ್ಲ. ಉದ್ಯೋಗಕ್ಕೆ ಸಂಬಂಧಿಸಿ ೭೫ ವರ್ಷದ ಹಿಂದಿನ ಸ್ಥಿತಿಯೇ ಇದೆ. ಭಾರತದ ಜನಸಂಖ್ಯೆಯಲ್ಲಿ ಶೇ, ೭೦ ಕ್ಕೂ ಹೆಚ್ಚು ಜನರು ಈ ಜತಿಗೆ ಸೇರಿದವರಾಗಿzರೆ. ಸ್ವಾತಂತ್ರ್ಯ ಪೂರ್ವದಲ್ಲೂ ಬ್ರಿಟಿಷ್ ಆಡಳಿತದ ಮುಂದೆ ಮೀಸಲಾತಿ ಕುರಿತು ಬೇ ಡಿಕೆ ಮಂಡಿಸಲಾಗಿತ್ತು ಎಂದರು.
ಸಂವಿಧಾನ ಶಿಲ್ಪಿ ಡಾ. ಅಂಬೆ ಡ್ಕರ್ ಅವರು ಹಿಂದುಳಿದವರಿಗೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ಕುರಿತು ಹೇಳಿzರೆ. ಸಾಮಾಜಿಕ ಸ್ಥಿತಿಗತಿ ಅಧ್ಯಯನ ನಡೆಸಿ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಿಂದುಳಿದ ವರ್ಗ, ಜತಿಗಳ ಮೀಸಲಾತಿ ಸಂಬಂಧ ಹಲವು ಆಯೋಗಗಳು ರಚನೆಯಾಗಿವೆ. ೧೯೫೩ ರಲ್ಲಿ ಕೇಂದ್ರ ಸರ್ಕಾರ ಕಾಕ ಸಾಹೇಬ್ ಕಾಲೇಲ್ಕರ್ ಆಯೋಗ ರಚಿಸಿತ್ತು. ಈ ಆಯೋಗ ಅಧ್ಯ ಯನ ನಡೆಸಿ ೧೯೫೫ ರಲ್ಲಿ ವರದಿ ಸಲ್ಲಿಸಿತ್ತು. ನಂತರ ಕೇಂದ್ರ ಸರ್ಕಾ ರವು ಶೈಕ್ಷಣಿಕ ಮತ್ತು ಉದ್ಯೋಗ ದಲ್ಲಿ ಹಿಂದುಳಿದ ಜತಿಗಳಿಗೆ ಮೀಸಲಾತಿ ಡಲು ಶಿಫಾರಸು ಮಾಡಿತ್ತು. ಆದರೆ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅದು ಜರಿಯಾಗಲಿಲ್ಲ ಎಂದರು.
ಕೇಂದ್ರ ಸರ್ಕಾರವು ಪುನಾ ೧೯೭೯ ರಲ್ಲಿ ಮಂಡಲ್ ಅವರ ನೇತೃತ್ವದಲ್ಲಿ ಮಂಡಲ್ ಆಯೋಗ ರಚಿಸಿ ೧೯೮೦ ರಲ್ಲಿ ವರದಿ ನೀಡಿತು. ಹಿಂದುಳಿದ ಜತಿಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಸರ್ಕಾ ರದ ಹುzಗಳಲ್ಲಿ ಮೀಸಲಾತಿ ಯನ್ನು ಜರಿಗೊಳಿಸಬೇಕೆಂದು ಶಿಫಾರಸು ಮಾಡಿತು. ಆದರೆ ಅದು ಕೂಡ ಜರಿಯಾಗಲಿಲ್ಲ. ನಂತರ ೧೯೮೯ ರಲ್ಲಿ ಪ್ರಧಾನಿ ವಿ.ಪಿ.ಸಿಂಗ್ ಅವರು ಮಂಡಲ್ ಆಯೋಗದ ವರದಿಯನ್ನು ಆಧರಿಸಿ ಹಿಂದುಳಿದ ಜರಿಗಳಿಗೆ ಮೀಸಲಾತಿ ಡಿತು. ಆದರೆ ಮೀಸಲಾತಿಯನ್ನು ಪ್ರಶ್ನಿಸಿ ಇಂದ್ರಸಹಾನಿ ಮತ್ತು ಇತರರು ಸುಪ್ರಿಂ ಕೋರ್ಟ್ ನಲ್ಲಿ ದಾವೆ ಹೂಡಿದರು. ನಂತರದ ದಿನಗಳಲ್ಲಿ ಇದು ನೆನೆಗುದಿಗೆ ಬಿತ್ತು.
ಕರ್ನಾಟಕದಲ್ಲೂ ಮುಖ್ಯ ಮಂತ್ರಿಗಳಾಗಿದ್ದ ಎಸ್.ನಿಜಲಿಂಗ ಪ್ಪನವರು ನಾಗನ ಗೌಡ ಸಮಿತಿ, ದೇವರಾಜ ಅರಸು ಅವರು ಎಲ್. ಜಿ.ಹಾವನೂರ್ ಆಯೋಗ, ರಾಮಕೃಷ್ಣ ಹೆಗಡೆಯವರು ವೆಂಕಟಸ್ವಾಮಿ ಆಯೋಗ ರಚಿಸಿ ಹಿಂದುಳಿದ ವರ್ಗದ ಅಧ್ಯಯನ ನಡೆಸಿವೆ. ೧೯೯೪ ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಹಿಂದುಳಿದ ವರ್ಗಗಳ ಮೀಸಲಾ ತಿಯನ್ನು ಕರ್ನಾಟಕ ಸರ್ಕಾರವು ಸದ್ಯದ ಪರಿಸ್ಥಿತಿಯಲ್ಲಿ ಮುಂದುವ ರೆಸಿಕೊಂಡು ಬಂದಿದೆ. ಶೇ. ೫೦ ಕ್ಕಿಂತ ಹೆಚ್ಚು ಮೀಸಲಾತಿಯನ್ನು ನೀಡಬಾರದೆಂದು ಆದೇಶಿಸಿದೆ.
೨೦೧೪ ರಲ್ಲಿ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿ zಗ ಎಚ್.ಕಾಂತರಾಜ ಅವರ ಅಧ್ಯಕ್ಷತೆಯಲ್ಲಿ ಕಾಂತರಾಜ ಆಯೋಗ ರಚನೆಯಾಯಿತು. ೨೦೧೯ ರಲ್ಲಿ ಈ ಆಯೋಗವು ತನ್ನ ವರದಿ ಸಲ್ಲಿಸಿತು. ಈ ಆಯೋಗವು ತನ್ನ ಸಮೀಕ್ಷೆಯಲ್ಲಿ ಇಡೀ ರಾಜ್ಯ ದಲ್ಲಿ ಕುಟುಂಬಗಳ ನಿಖರವಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅಭ್ಯಸಿಸಿ, ಸಾಕಷ್ಟು ವೈeಕ ಮಾಹಿತಿ ಯನ್ನು ಕಲೆಹಾಕಿ ವರದಿ ಡಿತ್ತು. ಸಮಾಜದಲ್ಲಿ ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದ ಆಧಾರದ ಮೇಲೆ ಸಮಾನತೆಯನ್ನು ಸಾಧಿಸಲು, ಜನಪರ ಯೋಜನೆಗಳನ್ನು ರೂಪಿ ಸಲು ಹಾಗೂ ರಾಜ್ಯದ ಸರ್ವಾಂ ಗೀಣ ಅಭಿವೃದ್ಧಿಗೆ ಜತಿ ಸಮೀಕ್ಷೆ ಅಗತ್ಯ ಎಂದಿzರೆ.
ಆದರೆ ನಂತರ ಬಂದ ಮುಖ್ಯ ಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ ಶೆಟ್ಟರ್, ಬೊ ಮ್ಮಾಯಿಯವರು ಹಿಂದುಳಿದ ವರ್ಗಕ್ಕೆ ದ್ರೋಹವೆಸಗಿದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸೇರಿದಂತೆ ಅನೇಕ ಮಂಡಳಿ ನೇಮಿಸಿ ಬೇಕಾಬಿಟ್ಟಿ ಅನುದಾನ ನೀಡಿದರು. ತಳಸಮುದಾಯದ ಅಭಿವೃದ್ಧಿಗೆ ಪೂರಕವಾದ ಕಾಂತ ರಾಜ ಆಯೋಗದ ವರದಿಯನ್ನು ಯಾರೂ ಗಂಭೀರವಾಗಿ ಪರಿಗಣಿ ಸಿಲ್ಲ ಎಂದವರು ಆರೋಪಿಸಿದರು.
ಇದೀಗ ಪುನಾ ಸಿದ್ದರಾಮ ಯ್ಯನವರು ಮುಖ್ಯಮಂತ್ರಿಗಳಾ ಗಿzರೆ. ಹಿಂದುಳಿದ ವರ್ಗ, ಜತಿಗಳ ಕುರಿತು ಅವರಿಗೆ ಅಪಾರ ಕಾಳಜಿ ಯಿದೆ. ಈ ಸಂದರ್ಭದಲ್ಲಿ ಅವರು ಕಾಂತರಾಜ ಆಯೋಗ ವರದಿಯ ಶಿಫಾರಸುಗಳನ್ನು ಜರಿಗೆ ತರ ಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಹೋರಾಟಗಾರ ತೀ.ನ.ಶ್ರೀನಿವಾಸ್ ಮಾತನಾಡಿ, ಕಾಂತರಾಜ ಆಯೋಗ ಶಾಸನಬದ್ಧ ವಾಗಿ ರಚನೆಗೊಂಡು ೧೬೫ ಕೋಟಿ ರೂ. ವೆಚ್ಚ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಸಮಾಜದ ಪ್ರತಿ ಮನೆಯನ್ನೂ ಭೇಟಿ ಮಾಡಿ ಅಂಕಿ ಅಂಶಗಳನ್ನು ಕಲೆಹಾಕಿ ವರದಿ ಸಿದ್ಧಪಡಿಸಲಾಗಿದೆ. ಇದೊಂದು ವೈeನಿಕ ವರದಿ. ಆಗ ಸಿದ್ದ ರಾಮಯ್ಯ ಮುಖ್ಯಮಂತ್ರಿ ಯಾಗಿzಗ ರಚನೆಯಾದ ಆಯೋಗದ ವರದಿಯನ್ನು ಈಗ ಮುಖ್ಯಮಂತ್ರಿಯಾದಾಗಿ ಜರಿ ಗೊಳಿಸಬೇಕು. ಸಂವಿಧಾನದ ಆಶಯದ ಆಯೋಗದ ವರದಿಯನ್ನು ತಕ್ಷಣ ಅನುಷ್ಠಾನಗೊಳಿಸಬೇಕು. ಈಗ ಹಲವಾರು ಉಚಿತ ಭಾಗ್ಯಗಳನ್ನು ನೀಡಿzರೆ.
ಅದಕ್ಕಿಂತ ಹಳೆ ಬಾಕಿ ಕಾಂತರಾಜ ವರದಿ ಶಿಫಾರಸನ್ನು ಜರಿಗೊಳಿಸುವುದು ಎಂದರು.
ವೇದಿಕೆಯ ಪ್ರಮುಖರಾದ ನಟರಾಜ್, ಮಹಾಬಲೇಶ್, ಶಾಂ ತಮೂರ್ತಿ, ಜನಮೇಜಿರಾವ್, ರಾಮಕೃಷ್ಣ ವಾರಣಕರ್, ರಾಮದಾಸ್ ಹಾಜರಿದ್ದರು.