ಜೂ.೧೬ ರಿಂದ ೨೨ರವರೆಗೆ ಗೋವಾದಲ್ಲಿ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ…
ಹುಬ್ಬಳ್ಳಿ: ಗೋವಾದಲ್ಲಿ ಕಳೆದ ೧೧ ವರ್ಷಗಳಿಂದ ನಡೆಯುತ್ತಿರುವ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಿಂದ ಹಿಂದೂ ರಾಷ್ಟ್ರದ ಚರ್ಚೆ ಈಗ ಕೇವಲ ಭಾರತದಲ್ಲಷ್ಟೇ ಅಲ್ಲ, ವಿಶ್ವ ಮಟ್ಟದಲ್ಲಿ ಆರಂಭವಾಗಿದೆ ಎಂದು ಹಿಂದೂ ಜನಜಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ್ ಗೌಡ ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದೂ ರಾಷ್ಟ್ರದ ಬೇಡಿಕೆಯಿಡುವ ಅನೇಕ ವೇದಿಕೆಗಳು ನಿರ್ಮಾಣವಾಗಿವೆ ಎಂದ ಅವರು, ಹಿಂದೂ ಕಾರ್ಯಕರ್ತರ ಹತ್ಯೆ ಮಾಡುತ್ತಿzರೆ, ಮಣಿಪುರ್, ನಾಗಾಲ್ಯಾಂಡ್ನಂತಹ ರಾಜ್ಯಗಳಲ್ಲಿನ ಹಿಂದೂಗಳ ಮನೆಗಳನ್ನು ಸುಡಲಾಗುತ್ತಿದೆ. ಕಾಶ್ಮೀರದಲ್ಲಿ ಕಲಂ ೩೭೦ ರದ್ದುಗೊಳಿಸಿದರು. ಆದರೂ ಅಲ್ಲಿಯ ಹಿಂದೂಗಳು ಸುರಕ್ಷಿತ ವಾಗಿಲ್ಲ. ಲವ್ ಜಿಹಾದಿಗಳಿಂದ ದೇಶಾದ್ಯಂತ ಸಾಕ್ಷಿ, ಅನುರಾಧ, ಶ್ರದ್ಧಾ ವಾಲ್ಕರ್ನಂತಹ ಅನೇಕ ಹಿಂದೂ ಹುಡುಗಿಯರ ಭೀಕರ ಹತ್ಯೆಗಳನ್ನು ನೋಡಿದರೆ ದೇಶದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಿ ಕೇರಳ ಸ್ಟೋರಿ' ಈ ಚಲನಚಿತ್ರದಲ್ಲಿ ಮಂಡಿಸಿರುವ ವಾಸ್ತವ ಕೇವಲ ಕೇರಳಕ್ಕಷ್ಟೇ ಸೀಮಿತವಾಗಿರದೆ, ಈ ಜಿಹಾದಿ ಷಡ್ಯಂತ್ರದ ವ್ಯಾಪ್ತಿ ದೇಶಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಬಹಿರಂಗವಾಗಿದೆ. ಮತ್ತೊಂದೆಡೆ ಹಿಂದೂಗಳು ಭಾಷಣ ಮಾಡಿದರೆ, ಕೂಡಲೇ ಅವರ ಮೇಲೆ ಧ್ವೇಷ ಭಾಷಣ ನೆಪದಲ್ಲಿ ದೂರು ದಾಖಲಾಗುತ್ತದೆ; ಆದರೆ
ಸರ್ ತನ್ ಸೇ ಜುದಾ’ ಮಾಡುವುದರ ಬಗ್ಗೆ ಬಹಿರಂಗವಾಗಿ ಘೋಷಿಸುತ್ತಿ ದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುವುದು ಕಾಣುವುದಿಲ್ಲ ಎಂದರು.
ಭಾರತವನ್ನು ಮತ್ತೆ ತುಂಡಾಗುವುದನ್ನು ತಡೆಯಲು ಭಾರತವನ್ನು ಆದರ್ಶ ರಾಮರಾಜ್ಯ ಅರ್ಥಾತ್ ಹಿಂದೂ ರಾಷ್ಟ್ರ ಮಾಡದೆ ಪರ್ಯಾಯವಿಲ್ಲ; ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಗತಿ ನೀಡಲು ಪ್ರತಿವರ್ಷದಂತೆ ಜೂ.೧೬ ರಿಂದ ೨೨ರ ಕಾಲಾವಧಿಯಲ್ಲಿ ಪೋಂಡಾ, ಗೋವಾದಲ್ಲಿನ ಶ್ರೀ ರಾಮನಾಥ ದೇವಸ್ಥಾನದಲ್ಲಿ ೧೧ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಂದರೆ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಆಯೋಜಿಸಿದೆ ಎಂದು ಅವರು ತಿಳಿಸಿದರು.
ದಯಾನಂದರಾವ್ ಅವರು ಮಾತನಾಡಿ, ಜಗತ್ತಿನಲ್ಲಿ ಎ ರಾಷ್ಟ್ರಗಳು ಇದೆ. ಮುಸ್ಲಿಂ ರಾಷ್ಟ್ರ ಇದೆ, ಕ್ರೈಸ್ತ ರಾಷ್ಟ್ರ ಇದೆ, ಹಾಗೆ ಹಿಂದೂಗಳಿಗೆ ಒಂದೇ ಒಂದು ರಾಷ್ಟ್ರ ಇಲ್ಲ, ಹಾಗಾಗಿ ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಮಾಡುವ ಉದ್ದೇಶದೊಂದಿಗೆ ಈ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದರು.
ನ್ಯಾಯವಾದಿ ರೂಪಾ ಢವಳಗಿ ಅವರು ಮಾತನಾಡಿ, ಈ ಸಮಾವೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯದ ವಿಷಯಗಳ ಮೇಲೆ ಚರ್ಚೆಯಾಗುತ್ತದೆ ಎಂದರು.
ಈ ಅಧಿವೇಶನಕ್ಕೆ ಅಮೇರಿಕಾ, ಬಾಂಗ್ಲಾದೇಶ, ನೇಪಾಳ, ಇಂಗ್ಲೆಂಡ್, ಸಿಂಗಪೂರ ಈ ದೇಶಗಳ ಜೊತೆಗೆ ಭಾರತದಲ್ಲಿನ ೨೮ ರಾಜ್ಯಗಳಲ್ಲಿನ ೩೫೦ಕ್ಕೂ ಹೆಚ್ಚಿನ ಹಿಂದೂ ಸಂಘಟನೆಗಳ ೧,೫೦೦ ಕಿಂತಲೂ ಹೆಚ್ಚಿನ ಪ್ರತಿನಿಧಿಗಳಿಗೆ ಆಮಂತ್ರಿಸಲಾಗಿದೆ ಎಂದರು.
ಹುಬ್ಬಳ್ಳಿ ಕೇಂದ್ರದ ಹಿಂದೂ ಜನಜಗೃತಿ ಸಮಿತಿ ಸಮನ್ವಯಕ ಅಶೋಕ ಭೋಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.