ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಕೊಟ್ಯಾಕ್ ಮ್ಯೂಚುವಲ್ ಫಂಡ್ ಆಶಾದಾಯಕ ಹೂಡಿಕೆ…

Share Below Link

ಶಿವಮೊಗ್ಗ: ಕೊಟ್ಯಾಕ್ ಮ್ಯೂ ಚುವಲ್ ಫಂಡ್ ಆಶಾದಾಯಕ ಹೂಡಿಕೆಯಾಗಿದೆ ಎಂದು ಕೋಟ್ಯಾಕ್ ಮಹೇಂದ್ರ ಅಸೆಟ್ ಮ್ಯಾಜೇಜ್‌ಮೆಂಟ್ ಕಂಪೆನಿಯ ಹಾಗೂ ಹೂಡಿಕೆ ಅಧಿಕಾರಿ ಹರ್ಷ ಉಪಾಧ್ಯಾಯ ಹೇಳಿದರು.
ಅವರು ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಇತ್ತೀ ಚಿನ ವರ್ಷಗಳಲ್ಲಿ ಭಾರತೀಯ ಮ್ಯೂಚುಯಲ್ ಫಂಡ್ ಉದ್ಯ ಮವು ತ್ವರಿತ ಬೆಳವಣಿಗೆ ಕಂಡಿದೆ. ಹೂಡಿಕೆದಾರರು ಹೂಡಿಕೆ ಆಯ್ಕೆಗಳನ್ನು ಹುಡುಕುತ್ತಿzರೆ. ಕೋಟ್ಯಾಕ್ ಮ್ಯೂಚುಯಲ್ ಫಂಡ್ ಜನಪ್ರಿಯ ವಾಗಿರುವುದ ರಿಂದ ಹೂಡಿಕೆದಾರರಿಗೆ ಭರವಸೆ ಬಂದಿದೆ ಎಂದರು.

ಹೂಡಿಕೆದಾರರು ಮ್ಯೂಚು ಯಲ್ ಫಂಡ್ ಯೋಜನೆಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡು ತ್ತಾರೆ. ಕೊಟ್ಯಾಕ್ ಫ್ಲೆಕ್ಸಿಕ್ಯಾಪ್ ಫಂಡ್, ಕೊಟ್ಯಾಕ್ ಬ್ಲೂಚಿಪ್, ಕೊಟ್ಯಾಕ್ ಎಮಜಿಂಗ್ ಇಕ್ವಿಟಿ ಮತ್ತು ಕೊಟ್ಯಾಕ್ ಇಕ್ವಿಟಿ ಅವಕಾಶ ಗಳಂತಹ ಉತ್ಪನ್ನಗಳು ಕೊಟ್ಯಾಕ್ ಮ್ಯೂಚುಯಲ್ ಫಂಡ್ ಹೂಡಿಕೆ ದಾರರಲ್ಲಿ ಜನಪ್ರಿಯವಾಗಿವೆ. ಏರಿಳಿತದ ಸಮಯದಲ್ಲೂ ಶಿಸ್ತನ್ನು ಕಾಪಾಡಿಕೊಳ್ಳುತ್ತದೆ ಎಂದರು.
ಕೊಟ್ಯಾಕ್ ಮ್ಯೂಚುಯಲ್ ಫಂಡ್ ಪ್ರಸ್ತುತ ಶಿವಮೊಗ್ಗವೂ ಸೇರಿದಂತೆ ಕರ್ನಾಟಕದಾದ್ಯಂತ ೧೦ ಸ್ಥಳಗಳಲ್ಲಿದೆ. ಶಿವಮೊಗ್ಗದಲ್ಲಿ ಉದ್ಯಮದ ಎಯುಎಂ ೧೬೦೦ ಕೋಟಿಗಿಂತ ಹೆಚ್ಚಿದೆ, ಈಕ್ವಿಟಿ ಎಯುಎಂ ಸುಮಾರು ೧೪೦೦ ಕೋಟಿ ಆಗಿದೆ. ೧೦೦ಕ್ಕೂ ಹೆಚ್ಚು ಎಂಪನೇಲ್ಡ್ ಮ್ಯೂಚುಯಲ್ ಫಂಡ್ ವಿತರಕರ ಬಲವಾದ ಜಲದ ಮೂಲಕ ಮ್ಯೂಚು ಯಲ್ ಫಂಡ್‌ಗಳನ್ನು ವಿತರಿಸಲಾ ಗುತ್ತದೆ. ಮ್ಯೂಚುಯಲ್ ಫಂಡ್ ಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಕೂಡ ನಿರ್ವಾಹಕರು ಇರುತ್ತಾರೆ ಎಂದರು.
ಹೆಚ್ಚಿನ ವಿವರಗಳಿಗೆ ೦೮೧೮೨ ೪೦೨೭೦೬, ೯೧೬೪೫ ೫೦೭೦೭ ಅನ್ನು ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳಾದ ಚಿತ್ರಾ, ಶರತ್ ಚಂದ್ರ ಶೆಟ್ಟಿ ಇದ್ದರು.