ಬದುಕನ್ನು ಸೃಜನಾತ್ಮಕವಾಗಿ ರೂಪಿಸಿಕೊಳ್ಳುವ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಿ…
ಸಾಗರ : ಬದುಕನ್ನು ಸೃಜ ನಾತ್ಮಕವಾಗಿ ರೂಪಿಸಿಕೊಳ್ಳುವ ಜೊತೆಗೆ ಸಾಹಿತ್ಯ ಸಾಂಸ್ಕತಿಕ ಚಟು ವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳ ಬೇಕು ಎಂದು ಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜು ನಾಥ್ ತಿಳಿಸಿದರು.
ಇಲ್ಲಿನ ಆರ್ಯ ಈಡಿಗರ ಸಭಾಭವನದಲ್ಲಿ ಶನಿವಾರ ಅಮೃತ್ ರಾಜ್ ಹಾಗೂ ಸಂಜನಾ ಅವರ ವಿವಾಹ ಸಮಾರಂಭದಲ್ಲಿ ದೇವನೂರು ಅಚ್ಚುತ್ ರಾವ್ ರಚಿಸಿದ `ಭಾವಕನ್ನಿಕೆ ಕವನ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಭಾವನಾತ್ಮಕ ಭಾವನೆಗಳನ್ನು ಹಂಚಿಕೊಳ್ಳುವ ಕಾವ್ಯಕ್ಕೆ ಪ್ರಾಚೀನ ಪರಂಪರೆಯಿದೆ. ಮತ್ತೆಮತ್ತೆ ಹೊಸ ತಲೆಮಾರನ್ನು ಪ್ರಭಾವಿ ಸುವ ಕಾವ್ಯ ಹುಟ್ಟಿ ಬರಬೇಕಾಗಿದೆ. ಯುವಜನತೆ ಸಾಹಿತ್ಯ ಕಡೆ ಮುಖ ಮಾಡಬೇಕು. ಮದುವೆ ಇನ್ನಿತರೆ ಶುಭ ಸಮಾರಂಭಗಳಲ್ಲಿ ಸಾಹಿತ್ಯ ಕೃತಿ ಲೋಕಾರ್ಪಣೆಗೊಳ್ಳುವುದು ಉತ್ತಮವಾದ ಬೆಳವಣಿಗೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಡಾ. ನಾ.ಡಿಸೋಜ, ಕಾವ್ಯದ ಒಳ ಹೊಕ್ಕು ಅದರ ನೈಜತೆಯನ್ನು ಅರ್ಥ ಮಾಡಿಕೊಳ್ಳಬೇಕು. ನಿಜ ವಾದ ಕಾವ್ಯ ಸಾಮಾಜಿಕ ಸಾಮರಸ್ಯ ವನ್ನು ಮೂಡಿಸುತ್ತದೆ. ವಿವಾಹ ಸಮಾರಂಭದಲ್ಲಿ ಕಾವ್ಯ ಕೃತಿ ಬಿಡುಗಡೆಗೊಳಿಸುತ್ತಿರುವುದು ಅಭಿನಂದಾರ್ಹ ಸಂಗತಿ ಎಂದರು.
ಕೃತಿ ಕುರಿತು ಮಾತನಾಡಿದ ಲೇಖಕಿ ಅನುಪಮ ಸುಲಾಖೆ, ಭಾವನೆಗಳ ಅನಾವರಣಕ್ಕೆ ಕಾವ್ಯ ಪೂರಕವಾಗಿದೆ. ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಕಾವ್ಯ ಅತ್ಯಂ ತ ಪರಿಣಾಮಕಾರಿ ಮಾಧ್ಯಮ ವಾಗಿದೆ. ಅಚ್ಚುತ್ ರಾವ್ ಅವರ ಕಾವ್ಯ ಬದುಕಿಗೆ ತೀರ ಹತ್ತಿರವಾ ದದ್ದನ್ನು ಹೇಳಿದೆ ಎಂದರು.
ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಮುಖಪುಟ ವಿನ್ಯಾ ಸ ಬಿಡಗುಡೆ ಮಾಡಿದರು. ಬೆಂಗ ಳೂರಿನ ವಾಣಿ, ಶ್ಯಾಮ್ ಯಾಧ ವ್, ರತ್ನಾಕರ್, ಚಿಕ್ಕ ನಾಪ್ಪ, ವಾಸು ದೇವ ಮೂರ್ತಿ, ಡಿ. ಗಣೇಶ್ ಇನ್ನಿತರರು ಹಾಜರಿ ದ್ದರು. ಸಾನ್ವಿ ಪ್ರಾರ್ಥಿಸಿದರು. ಕೃತಿಕಾರಿ ದೇವ ನೂರು ಅಚ್ಚುತ್ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿ.ಕೆ.ಕೃಷ್ಣವೇಣಿ ವಂದಿಸಿದರು.