ತಾಜಾ ಸುದ್ದಿಲೇಖನಗಳು

ಕಾಲ ಬದಲಾಗಿದೆ : ಇದು ನಮ್ಮ ಭ್ರಮೆಯೋ?, ವಾಸ್ತವವೋ?

Share Below Link

ಪ್ರೀಯ ಓದುಗರೇ, ಇಂದಿನ ದಿನಮಾನದಲ್ಲಿ ಜನರು ಮಾತನಾಡುವಾಗ ಕಾಲ ಬದಲಾಗಿ ಹೋಗಿದೆ, ಕಾಲ ಕೆಟ್ಟಿದೆ ಎಂದು ಹೇಳುವ ರೂಢಿಯಂಟು. ಆದರೆ ಅದು ಬರೀ ಕಲ್ಪನೆಯ ಭ್ರಮೆಯೋ?, ವಾಸ್ತವವೊ? ಅಥವಾ ರೂಢಿಯಲ್ಲಿ ಬಂದ ಸ್ಥಿರ ಅನುಕರಣಾ ವಾಕ್ಯವೋ? ಎಂದು ಹಲವು ವೈeನಿಕ, ತಾರ್ಕಿಕ ಹಾಗೂ ಆಧ್ಯಾತ್ಮಿಕ ಅಂಶಗಳ ಉದಾಹರಣೆಗಳೊಂದಿಗೆ ಮನನ ಮಾಡಿಕೊಡುವುದು ಈ ಲೇಖನದ ಒತ್ತಾಸೆಯಾಗಿದೆ.
ಮಾನವನ ದೈನಂದಿನ ಜೀವನದಲ್ಲಿ ಗತಿಸಿ ಹೋಗುವ ಪ್ರತಿಯೊಂದು ಕ್ಷಣಗಳೂ ಭೂತಕಾಲದ ಸಂಗತಿಗಳೇ. ಅಂತಹ ಎಷ್ಟೋ ಗತಿಸಿ ಹೋದಂತಹ ಕ್ಷಣಗಳನ್ನು, ದಿನಗಳನ್ನು ನಾವು ನೆನೆದು ಅವುಗಳನ್ನೇ ಸ್ಮರಿಸುತ್ತಾ ‘ಕಳೆದು ಹೋದ ಆ ದಿನಗಳೇ ಚಂದ’, ‘ಆ ಕ್ಷಣಗಳೇ ಅಂದ’ ಎಂದು ನೆನೆಯುತ್ತಾ, ಇರುವ ಪ್ರಸ್ತುತ ಸಮಯವನ್ನು ವ್ಯರ್ಥ ಮಾಡಿಕೊಂಡು ಮುಂಬರುವ ದಿನ ಮತ್ತು ಕ್ಷಣಗಳನ್ನು ಚೆಂದಮಯವಾಗಿಸಿ ಕೊಳ್ಳುವ ಅವಕಾಶವನ್ನೇ ಕಳೆದುಕೊಳ್ಳುತ್ತೇವೆ.
ಇಲ್ಲಿ ಕಾಲದ ಪ್ರಾಮುಖ್ಯತೆಯ ಕುರಿತಾಗಿ ಮಹಾಭಾರತದ ಉಪಮೇಯೊಂದನ್ನು ಸ್ಮರಿಸಬಹುದು. ಶ್ರೀಕೃಷ್ಣ ಪರಮಾತ್ಮನಿಗೆ ಸವ್ಯಸಾಚಿ, ಗಾಂಡೀವಿ ಅರ್ಜುನನು ಬಂದು ಹೇಳುತ್ತಾನೆ, ಪ್ರಭು ಈ ಗೋಡೆಯ ಮೇಲೆ ಒಂದು ಸಾಲನ್ನು ಬರೆ, ಅದು ನಾನು ದುಃಖದಲ್ಲಿzಗ ಸಂತೋಷವನ್ನುಂಟು ಮಾಡಬೇಕು, ಹಾಗೂ ಸಂತೋಷದಲ್ಲಿzಗ ದುಃಖವನ್ನುಂಟು ಮಾಡಬೇಕು ಎಂದು ಹೇಳಿದನು. ಆಗ ಶ್ರೀಕೃಷ್ಣ ಪರಮಾತ್ಮನು ಹೀಗೆ ಬರೆಯುತ್ತಾನೆ ಈ ಸಮಯ ಕಳೆದು ಹೋಗುತ್ತದೆ ಎಂದು.

ಈ ಸಂದರ್ಭೋಚಿತ ಉದಾಹರಣೆಯನ್ನು ನಾವಿಲ್ಲಿ ಸ್ಮರಿಸಬಹುದು. ಏಕೆಂದರೆ ನಮ್ಮ ಕಾಲಚಕ್ರದಲ್ಲಿ ಜರುಗುವ ಪ್ರತಿಯೊಂದು ಆಗು ಹೋಗುಗಳೂ ಒಂದೊಂದು ಸಿಹಿ ಮತ್ತು ಕಹಿ ನೆನಪುಗಳನ್ನು ಕಟ್ಟಿಕೊಡುತ್ತವೆ. ಆದರೆ ಪ್ರeಶೀಲರಾದ ನಾವು ಆ ಎಲ್ಲ ಸಮಯಗಳಲ್ಲಿ ಶ್ರೀಕೃಷ್ಣ ಪರಮಾತ್ಮನು ಹೇಳಿದ ಸಾಲನ್ನು ನೆನೆದು ಕಾಲ ಬದಲಾಗುತ್ತಿದೆ/ಬದಲಾಗಿದೆ ಎಂದು ಕೂರದೇ ಕಾಲಕಾಲಕ್ಕೆ ತಕ್ಕಂತೆ ಅನುಸರಿಸಿ ನಡೆದಾಗ ಅಲ್ಲಿ ಬದಲಾಗುವುದು ಕಾಲವಲ್ಲ ಬದಲಾಗಿ, ನಮ್ಮ ಮನಸ್ಥಿತಿ ಹಾಗೂ ದೃಷ್ಟಿಕೋನ ಎಂಬುದು ತಿಳಿದುಬರುತ್ತದೆ.
ಕಾಲ ಬದಲಾಗಿ ಹೋಗಿದೆ ಎಂದು ಜನರು ತಮ್ಮ ಹಳೆಯ ಬಾಲ್ಯ, ಯೌವನದ ದಿನಗಳ ಕುರಿತು ಹೇಳುತ್ತಾ ಇಂದಿನ ಪ್ರಚಲಿತ ವಿದ್ಯುನ್ಮಾನಯುತ ತಾಂತ್ರಿಕ ದಿನಗಳೊಂದಿಗೆ ಹೋಲಿಕೆ ಮಾಡಿ ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ ಎಂದು ಹೇಳುವುದುಂಟು. ಅಕ್ಷರಶಃ ಅವರು ಬಾಳಿ ಬದುಕಿದಂತಹ ಜೀವನಶೈಲಿಯ ದೃಷ್ಟಿಕೋನದಲ್ಲಿ ಅದು ಸತ್ಯವೇ. ವಿದ್ಯುತ್ ಶಕ್ತಿಯ ಸಂಪರ್ಕವಿಲ್ಲದ ಆ ಹಿಂದಿನ ದಿನಗಳಲ್ಲಿ ಜನರು ಯಾವುದೇ ತೆರೆನಾದ ತಾಂತ್ರಿಕ ಸಹಾಯವಿಲ್ಲದೆ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಸ್ವತಃ ಮಾಡಿಕೊಳ್ಳಬೇಕಿತ್ತು, ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಎಷ್ಟೇ ದೂರ ಪ್ರಯಾಣಿಸಬೇಕಿದ್ದರೂ ಅದು ಬರೀ ಕಾಲ್ನಡಿಗೆಯಲ್ಲಿ, ಎತ್ತಿನ ಬಂಡಿಗಳಲ್ಲಿ ಅಥವಾ ಕುದುರೆ ಸವಾರಿಯಿಂದ ಮಾತ್ರವೇ ಕ್ರಮಿಸಬೇಕಿತ್ತು.
ದಿನಕಳೆದಂತೆ, ತಂತ್ರeನ ಮುಂದುವರೆದು ನಂತರದ ದಿನಗಳಲ್ಲಿ ಸಂಚಾರ ವ್ಯವಸ್ಥೆ ಸುಸ್ಥಿರವಾಗಿ ವಾಹನ ಸೌಕರ್ಯಗಳು ಬಳಕೆಗೆ ಬಂದವು. ಆದರೂ ಸಹ ಇಂದಿಗೂ ನಮ್ಮ ಹಲವು ಹಿರಿಯರ ಒಮ್ಮತ ತಮ್ಮ ಹಿಂದಿನ ಕಾಲದ ಜೀವನಶೈಲಿಗೇ ಆಗಿದೆ.
ಸ್ವತಂತ್ರ ನಂತರದ ಅಭಿವೃದ್ಧಿ ಹೊಂದುತ್ತಿರುವ ನಮ್ಮ ಹೆಮ್ಮೆಯ ಭಾರತ ದೇಶದಲ್ಲಿ ವಿeನ, ತಂತ್ರeನದಿಂದ ಮುಂದುವರೆದಿರುವ ಈ ಜಗತ್ತಿನ ಹೊಸ ಆವಿಷ್ಕಾರಗಳಾದ ಆಂಡ್ರಾಯ್ಡ್ ಫೋನ್‌ಗಳು, ಆಂಡ್ರಾಯ್ಡ್ ಆಪ್ಲಿಕೇಶನ್‌ಗಳು, ತಂತ್ರeನದ ಯಂತ್ರಗಳು, ದಿನನಿತ್ಯದ ಬಳಕೆಯ ಪರಿಕರಗಳು, ಎಲೆಕ್ಟ್ರಾನಿಕ್ ವಸ್ತುಗಳಂತಹ ಮೊಬೈಲ್, ಪೀಸಿ, ಲ್ಯಾಪ್ಟಾಪ್, ಟ್ಯಾಬ್, ಇನ್ನಿತರೆ ಚಿಕ್ಕಪುಟ್ಟ ಆಧುನಿಕ ತಂತ್ರeನ ಆಧಾರಿತ ಸಾಧನಗಳನ್ನು ಈಗಲೂ ನಮ್ಮಲ್ಲಿ ಹಲವಾರು ಜನರಿಗೆ ಬಳಸಲು ಬರುವುದಿಲ್ಲ. ಮುಖ್ಯವಾಗಿ ನಮ್ಮ ಮನೆಯಲ್ಲಿಯೇ ನಮ್ಮ ಅಜ್ಜ- ಅಜ್ಜಿಯರಿಗೆ ಈ ಆಧುನಿಕ ಜಗತ್ತಿನ ಆವಿಷ್ಕಾರಗಳ ಪರಿeನವಿಲ್ಲ. ಇವುಗಳ ಬಳಕೆಯ ಕುರಿತು ಅವರಿಗೆ ತಿಳಿಹೇಳಲು ಹೋದರೂ ಅಲ್ಲಿ ಅವರಿಂದ ಬರುವ ಉತ್ತರ ಅವಶ್ಯಕತೆ ಇಲ್ಲ ಎಂಬ ಮಾತು.
ಕಾಲ ಕಳೆದಂತೆ, ದಿನಗಳುರುಳಿದಂತೆ ಮತ್ತು ವಯಸ್ಸಾದಂತೆ ಜನರು ಬದಲಾವಣೆಯನ್ನು ಬಯಸುವುದಿಲ್ಲ ವಾದ್ದರಿಂದಲೇ ಈ ಸಮಸ್ಯೆ ನಮ್ಮಲ್ಲಿ ಇನ್ನೂ ಇರುವುದೆಂಬುದು ನನ್ನ ಅಭಿಪ್ರಾಯ.
ನಮಗೂ ನಿಮಗೂ ತಿಳಿದಂತೆ ನಾವು ಕುಳಿತ ಜಗದಿಂದಲೇ ದೇಶದ ಇನ್ನೊಂದು ಕೋಣೆಯಲ್ಲಿರುವ ವ್ಯಕ್ತಿಗೆ ಉಚಿತವಾಗಿ ಒಂದೇ ಕ್ಲಿಕ್‌ನಲ್ಲಿ ಯು.ಪಿ.ಐ ಆಧಾರಿತ ಹಣ ಸಂದಾಯ ಮಾಡಬಹುದಾದ ತಂತ್ರeನ ವ್ಯವಸ್ಥೆ ನಮ್ಮಲ್ಲಿ ಇದ್ದರೂ ಸಹ ನಮ್ಮಲ್ಲಿನ ಕೆಲವು ಜನರಿಗೆ ಭಾರತೀಯ ಪೇಮೆಂಟ್ ಆಪ್ ಗಳಾದ ಫೋನ್ ಪೇ, ಪೇಟಿಎಂ, ಭೀಮ್ ಯುಪಿಐ ಇನ್ನೀತರೇ ಅಪ್ಲೀಕೇಶನ್ ಗಳ ಬಳಕೆಯ ಬಗ್ಗೆ ಗೊತ್ತೇಯಿಲ್ಲ ಎಂಬುದು ಒಂದು ವರದಿಯ ಮಾಹಿತಿ. ನಮ್ಮಲ್ಲಿ ಈಗಲೂ ಹಣವನ್ನು ಖಾತೆಯಿಂದ ಖಾತೆಗೆ ವರ್ಗಾಯಿಸಬೇಕಾದರೆ ನೇರವಾಗಿ ತಮ್ಮ ಬ್ಯಾಂಕ್‌ಗಳಿಗೆ ತೆರಳಿ ತಾವೆ ಖುದ್ದು ಹಣ ಸಂದಾಯ ಮಾಡುವ ಪದ್ಧತಿಯೇ ಹಲವು ಜನರಲ್ಲಿದೆ.


೨೦೨೩ರ ಎಪ್ರಿಲ್‌ನಲ್ಲಿ ಪ್ರಕಟಗೊಂಡ ಭಾರತೀಯ ಆರ್ಥಿಕ ಸಮೀಕ್ಷೆಯ ವರದಿಯೊಂದರ ಪ್ರಕಾರ ೨೦೨೧-೨೨ನೇ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಶೇ.೫೨ ಜನರು ಡಿಜಿಟಲ್ ಯುಪಿಐ ಆಧಾರಿತ ಟ್ರಾನ್ಸಾಕ್ಷನ್ ಗಳನ್ನು ಮಾಡಿzರೆ. ಇದರರ್ಥ ಉಳಿದ ಶೇ.೪೮ ಪ್ರತಿಶತ ಜನರು ಈ ಹೊಸ ತಂತ್ರeನ ಆಧಾರಿತ ಯುಪಿಐ ಆಪ್‌ಗಳ ಸೇವೆಯ ಮುಲಾಜಿಗೇ ಹೋಗಿಲ್ಲವೆಂಬುದು ವರದಿಯ ಸುದ್ಧಿ.
ಹೀಗೆ ಎ ವಿಷಯಗಳ ದೃಷ್ಟಿಕೋನದಲ್ಲಿ ಇಣುಕಿ ನೋಡುತ್ತಾ ಹೋದರೆ ಬದಲಾವಣೆ ಜಗದ ನಿಯಮ ಎಂಬ ವಾಕ್ಯ ನಮ್ಮ ಜನರಿಗೆ, ನಮಗೆ ಅಗತ್ಯವೆಂಬುದು ತಿಳಿದುಬರುತ್ತದೆ. ಮುಖ್ಯವಾಗಿ ಬದಲಾಗುತ್ತಿರುವುದು ಇಲ್ಲಿ ಕಾಲವಲ್ಲ. ಮಾಹಿತಿ ತಂತ್ರeನದಲ್ಲಿ ಹೊಸ ವಿಷಯಗಳ ಆವಿಷ್ಕಾರಗಳಲ್ಲಿ ಕಾಲವು ಮುಂದೆ ಹೋಗುತ್ತಿದೆ ಬದಲಾಗಿ ಅವುಗಳ ಕುರಿತು ತಿಳಿದುಕೊಳ್ಳದೇ, ಅರಿತುಕೊಳ್ಳದೇ ನಾವು ಹಿಂದೆಯೇ ಉಳಿಯುತ್ತಿದ್ದೇವೆ ಎಂಬುದನ್ನು ಅರಿಯಬೇಕಾಗಿದೆ.
ಒಂದು ಸರಳ ಉದಾಹರಣೆ ಯೊಂದಿಗೆ ಪ್ರಸ್ತಾಪಿಸುವುದಾದರೆ ಇತ್ತೀಚಿನ ದಿನಗಳಲ್ಲಿ ನಾವು, ನೀವುಗಳೆಲ್ಲರೂ ಹೆಚ್ಚಾಗಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳನ್ನೇ ಬಳಸುತ್ತಿದ್ದೇವೆ. ನಿಮಗೆ ಗೊತ್ತಿರಬಹುದು. ಪ್ರತಿಯೊಂದು ಆಂಡ್ರಾಯ್ಡ್ ಫೋನ್‌ಗಳಲ್ಲೂ ಆಯಾ ಫೋನ್‌ನ ಕಂಪನಿಗಳಿಂದ ಆಗಾಗ ಹೊಸ ಸಾಫ್ಟ್‌ವೇರ್ ಅಪ್ಡೇಟ್ ಬರುತ್ತವೆ. ಕೆಲವೊಂದು ಕಂಪನಿಗಳಲ್ಲಿ ವಾರಕ್ಕೊಮ್ಮೆ, ಕೆಲವೊಂದರಲ್ಲಿ ತಿಂಗಳಿಗೆ ಹೀಗೆ ಹೊಸ ವರ್ಶನ್ ಉಳ್ಳ ಸಾಫ್ಟ್‌ವೇರ್ ಅಪ್ಡೇಟ್‌ಗಳು ಬರುತ್ತವೆ. , ಅವನ್ನು ಅಪ್ಡೇಟ್ ಮಾಡಿಕೊಳ್ಳಿ ಎಂದು ಆಯಾ ಮೊಬೈಲ್ ಕಂಪನಿಗಳಿಂದ ಸೂಚನೆಗಳೂ ಬರುತ್ತವೆ. ಏನದು ಸಾಫ್ಟ್‌ವೇರ್ ಅಪ್ಡೇಟ್? ನಾವು ಅದನ್ನು ಏಕೆ ನಮ್ಮ ಮೊಬೈಲ್‌ಗೆ ಅಪ್ಡೇಟ್ ಮಾಡಬೇಕು?
ಸಾಫ್ಟ್‌ವೇರ್ ಅಪ್ಡೇಟ್ ಎಂದರೆ ವೈeನಿಕ ಜಗತ್ತಿನಲ್ಲಿ ಆವಿಷ್ಕಾರಗೊಳ್ಳುವ ಹೊಸ ಹೊಸ ಫೀಚರ್ಸ್ ಗಳನ್ನು ಒಳಪಟ್ಟಿರುವ, ಬಳಕೆದಾರನ ವಯಕ್ತಿಕ ಮಾಹಿತಿಯ ಸುರಕ್ಷತೆಯು ದ್ವಿಗುಣಗೊಳಿಸುವ, ಆ ಉಪಕರಣದ ಕಾರ್ಯ ಕ್ಷಮತೆಯನ್ನು ಸುಲಲಿತವಾಗಿರುವಂತೆ ನೋಡಿಕೊಳ್ಳುವ ಹಾಗೂ ಮೊಬೈಲ್ನಲ್ಲಿರುವ ಬ್ಯಾಟರಿಯ ಲೈಫ್‌ನ್ನು ಹೆಚ್ಚಿಸಿ ಬಹುಕಾಲ ಬಾಳಿಕೆ ಬರುವಂತೆ ಮಾಡುವಂತಹ ಪ್ಯಾಕೇಜನ್ನು ಈ ಸಾಫ್ಟ್‌ವೇರ್ ಅಪ್ಡೇಟ್ ಹೊಂದಿರುತ್ತದೆ. ಒಟ್ಟಾಗಿ ಹೇಳುವುದಾದರೆ ಹೊಸ ವರ್ಶನ್‌ನ ಸಾಫ್ಟ್‌ವೇರನ್ನು ಅಪ್ಡೇಟ್ ಮಾಡುವುದರಿಂದ ನಮ್ಮ ಮೊಬೈಲ್‌ಗಳಿಗೆ ಒಳಿತು.
ಈ ಮೊಬೈಲ್‌ಗಳಿಗೆ ವಾರಕ್ಕೆ, ತಿಂಗಳಿಗೆ ಬರುವ ಹೊಸ ವರ್ಶನ್‌ಗಳ ಅಪ್ಡೇಟ್ ಎಷ್ಟು ಮುಖ್ಯವೋ ಹಾಗೆಯೇ ನಮಗೂ ಇಂದಿನ ವಿeನ ಮತ್ತು ತಂತ್ರeನ ಆಧಾರಿತ ಕಂಪ್ಯೂಟರ್ ಯುಗದಲ್ಲಿನ ಪ್ರಚಲಿತ ದೈನಂದಿನ ವಿದ್ಯಮಾನಗಳ ಕುರಿತು, ವೈeನಿಕ ಬೆಳವಣಿಗೆಗಳ ಕುರಿತು, ವೈeನಿಕ ಆವಿಷ್ಕಾರಗಳ ಕುರಿತು, ರಾಷ್ಟ್ರೀಯ – ಅಂತರಾಷ್ಟ್ರೀಯ ವಿದ್ಯಮಾನಗಳ ಕುರಿತು ಡೇ-ಟು-ಡೇ ಅಪ್ಡೇಟ್ ಅಗತ್ಯ.
ಮೊಬೈಲ್‌ಗಳಿಗೆ ವಾರಕ್ಕೆ, ತಿಂಗಳಿಗೆ ಅಪಡೇಟ್ ಅವಶ್ಯ. ಹಾಗೆಯೇ ದಿನದಿಂದ-ದಿನಕ್ಕೆ ನಮ್ಮ ವ್ಯಕ್ತಿತ್ವ ಮತ್ತು ಬುದ್ಧಿಮಟ್ಟಕ್ಕೆ eನ ಹಾಗೂ ಕೌಶಲ್ಯಗಳ ಹೊಸ ಹೊಸ ಅಪ್ಡೇಟ್ ಅಗತ್ಯವೋ ಅಗತ್ಯ.’ ಇಲ್ಲವಾದರೆ ನಾವೂ ಸಹ ಈ ಎಲ್ಲ ಮಾಹಿತಿಗಳಿಂದ ವಿಮುಖರಾಗಿ, ಕಾಲವು ಮುಂದೆ ಹೋಗಿ ನಾವು ಹಿಂದೆಯೇ ಉಳಿದು, ಆಗ ಮತ್ತೆ ‘ಕಾಲ ಬದಲಾಗಿದೆ’ ಎಂದು ಹೇಳಬೇಕಾದೀತು.
ನಮ್ಮಲ್ಲಿ ಹಳ್ಳಿಗಳಲ್ಲಿ ಕೋಲೆಬಸವ ಎಂದು ಬಸವನನ್ನು(ಎತ್ತು) ಸಿಂಗರಿಸಿಕೊಂಡು ಅದರ ಮಾಲಿಕನು ಪಂಚೆ, ನಿಲುವಂಗಿ, ಕಪ್ಪು ಕೋಟ್ ಹಾಗೂ ರುಮಾಲನ್ನು ತೊಟ್ಟು ಸಂಗೀತ ವಾದ್ಯವೊಂದನ್ನು ನುಡಿಸುತ್ತಾ ಹಬ್ಬ- ಹರಿದಿನಗಳಲ್ಲಿ ಮನೆ ಮನೆಗೆ ತೆರಳಿ ಆಯಾ ಮನೆಗಳಲ್ಲಿ ಕೊಟ್ಟ ಅಷ್ಟೋ ಇಷ್ಟೋ ಹಣ ಸ್ವೀಕರಿಸುವುದುಂಟು. ನಾವು ಸಹ ನಮ್ಮ ಬಾಲ್ಯದಿಂದಲೂ ಈ ಪದ್ದತಿಯನ್ನು ನೋಡುತ್ತಾ ಬಂದಿದ್ದೇವೆ. ಆದರೆ ಇತ್ತೀಚೆಗೆ ನಾನೊಮ್ಮೆ ಟ್ವಿಟರ್ ನಲ್ಲಿ ಕಣ್ಣಾಡಿಸಿದಾಗ ಕಂಡುಬಂದ ಚಿತ್ರವನ್ನಿಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಬರು ಬರುತ್ತ ನಮ್ಮಲ್ಲಿ ತಂತ್ರeನ ಬೆಳೆದು ಅದರ ಗಾಳಿ ಎಡೆ ಬೀಸತೊಡಗಿದಾಗಿನಿಂದ ಆ ಕೋಲೆಬಸವನ ಮಾಲೀಕನಿಗೂ ಸಹ ತಂತ್ರeನದ ಅರಿವಾಗಿ ಪ್ರಸ್ತುತ ದಿನಗಳಲ್ಲಿ ಅವನೂ ಸಹ ಪೇಮೆಂಟ್ ಆಪ್‌ಗಳಾದ ಪೋನ್ ಪೇ, ಗೂಗಲ್ ಪೇ, ಪೇಟಿಎಂ ಗಳ ಕ್ಯೂ.ಆರ್. ಕೋಡನ್ನು ಬಳಸಲು ಪ್ರಾರಭಿಸಿzನೆ. ಅಂದರೆ ಹಣ ಕೊಡುವವರು ಆ ಕ್ಯೂ.ಆರ್. ಕೋಡನ್ನು ಸ್ಕ್ಯಾನ್ ಮಾಡಿಯೂ ಸಹ ಹಣ ಸಂದಾಯ ಮಾಡಬಹುದು.


ಇಲ್ಲಿ ಕೋಲೆಬಸವನ ಮಾಲೀಕನಿಂದ ನಾವು ಕಲಿಯಬೇಕಾದದ್ದೇನೆಂದರೆ ‘ಕಾಲ ಬದಲಾಗಿದೆ’ ಎಂದು ಹಿಂದೆ ಉಳಿಯದೇ ನಮ್ಮ ಮನಸ್ಥಿತಿ ಹಾಗೂ ದೃಷ್ಟಿಕೋನವನ್ನು ಬದಲಿಸಿಕೊಂಡು ಆ ಚಲಿಸುವ ಕಾಲದ ಜೋತೆ ನಾವು ಚಲಿಸಿದಾಗಲೇ ಎಲ್ಲವೂ ಸರಿಯಾಗಿರುವುದು ಅಥವಾ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿರಬೇಕು ಎಂಬುದು.
ಆಗಿನ ೯೦ರ ದಶಕದಲ್ಲಿನ ಮಕ್ಕಳು ಶಾಲೆಯ ನಂತರ ಬರೀ ಆಟೋಟ ಗಳಲ್ಲಿ ಸಂಜೆಯಾದರೂ ಮಗ್ನರಾಗಿರುತ್ತಿದ್ದರು ಆಗ ಅವರ ತಂದೆ ತಾಯಿಯಂದಿರು ಮಕ್ಕಳನ್ನು ಬೈದೋ, ಹೊಡೆದೋ, ಕಿವಿ ಹಿಂಡಿಯೋ ಮನೆಗೆ ಎಳೆದುಕೊಂಡು ಹೋಗಿ ಊಟ ಮಾಡಿಸಿ ಮಲಗಿಸುವ ಸಂದರ್ಭವೊಂದಿತ್ತು. ಆದರೆ ಈಗಿನ ಮಕ್ಕಳು ಹಾಗಲ್ಲ. ಈಗಿನ ಮಕ್ಕಳು ಬರೀ ಫೋನ್‌ನ ಗೀಳಿಗೆ ಒಳಗಾಗಿಬಿಟ್ಟಿzರೆ. ಫೋನ್ ಒಂದಿದ್ದರೆ ಸಾಕು ಊಟ, ತಿಂಡಿ, ನೀರು ಎಲ್ಲವನ್ನೂ ಮರೆತು ಕೂತುಬಿಡುತ್ತಾರೆ. ಇಲ್ಲಿ ಕಾಲ ಬದಲಾಗಿದೆ ಎಂದು ಕೂತರೆ ಅದು ಪಾಲಕರ ತಪ್ಪಾದೀತು ಬದಲಾಗಿ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಮಕ್ಕಳ ಭವಿಷ್ಯದ ಕುರಿತು ಚಿಂತಿಸಬೇಕು.
ಮೊದಲು ಮನೆಯನ್ನು ಕಾಯಲು ನಾಯಿಗಳನ್ನು ಸಾಕಲಾಗುತ್ತಿತ್ತು. ಆದರೆ ಈಗ ಸಾಕಿದ ನಾಯಿಯನ್ನೇ ಯಜಮಾನ ಕಾಯಬೇಕಾದ ಪರಿಸ್ಥಿತಿ ಇಂದಿಗಿದೆ. ಕಾರಣ ಬದಲಾಗುತ್ತಿರುವ ಕಾಲವಲ್ಲ!, ಬದಲಾಗಿರುವ ನಮ್ಮ ಮನಸ್ಥಿತಿ.


ಅಂದಿನ ರಾಮಾಯಣದಲ್ಲಿನ ಪ್ರಭು ಶ್ರೀರಾಮಚಂದ್ರರು ಅವತರಿಸಿದಂತ ಪುಣ್ಯಭೂಮಿಯೇ ಇಂದಿಗೂ ಇದೆ, ಪುರಾಣ ಪ್ರಸಿದ್ಧ ರಾಮಾಯಣ, ಮಹಾಭಾರತಗಳು ಸಂಭವಿಸಿದಂತಹ ಪುಣ್ಯ ಭೂಮಿಯೇ ಇಂದಿಗೂ ಇದೆ. ಅಂದು ಹಗಲಿನಲ್ಲಿ ಬೆಳಕ ಚೆಲ್ಲಿದ ಸೂರ್ಯ ಹಾಗೂ ರಾತ್ರಿಯಲ್ಲಿ ಬೆಳದಿಂಗಳ ಹಂಚಿದ ಚಂದ್ರರೇ ಇಂದಿಗೂ ಇzರೆ. ಎಂತೆಂಥ ಮಹಾನ್ ಸಿದ್ಧ ಸಾಧಕರು, ಸಿದ್ಧ ಸಾಧ್ಯರು, ಸಿದ್ಧಪುರುಷರು, ಸಾಧುಗಳು, ಸಂತವರೇಣ್ಯರು, ಯೋಗಿಗಳು, ಹಠಯೋಗಿಗಳು, ಮಹಾನ್ ತಪಸ್ವಿಗಳು, ಕವಿಗಳು, ಸಾಹಿತಿಗಳು, ರಸಜ್ಞರು, ಶಾಸಜ್ಞರು, ಪರಿಣಿತರು, ಪಾಮರರು, ಪಂಡಿತೋತ್ತಮರು, ಅಗಣಿತ ಶರಣರು, ಜನ್ಮ ತಾಳಿಬಂದು ಬೆಳಗಿದ ನಾಡ ಭೂಮಿಯೆ ಅಂದಿನಿಂದ ಇಂದಿಗೂ ಇದೆ. ಅನೇಕ ರಾಜ-ಮಹಾರಾಜರಾಳಿದ ಶಾಂತಿಯುತ ನಾಡೇ ಇಂದಿಗೂ ಇದೆ. ಮುಂದೆಯೂ ಇರುತ್ತದೆ. ಹಣ್ಣು ಕೊಡುವ ಮರಗಳು ಮೊದಲಿನಂತೆ ಇಂದಿಗೂ ಹಣ್ಣನ್ನೇ ಕೊಡುತ್ತಿವೆಯೇ ಹೊರತು ಕಲ್ಲನ್ನೇನಲ್ಲವಲ್ಲ?. ಅಂದಮೇಲೆ ಇಲ್ಲಿ ಬದಲಾದದ್ದು ಕಾಲವೇ? , ಕೆಟ್ಟು ಹೋದದ್ದು ಕಾಲವೇ?.
ಅಲ್ಲ ವಾಸ್ತವದಲ್ಲಿ, ಬದಲಾದದ್ದು ಕಾಲವಲ್ಲ ಬದಲಾಗಿ ಮನುಷ್ಯನ ಮನಸ್ಥಿತಿ,ಆತನ ಆಚಾರ, ವಿಚಾರ, ಧರ್ಮ, ಸಂಪ್ರದಾಯ, ಸಂಸ್ಕೃತಿಯ ಸೂಕ್ಷ್ಮ ಪ್ರe , ನಡೆ, ನುಡಿ, ಗೌರವ, ನಂಬಿಕೆ, ವಿಶ್ವಾಸ, ಕಾಯಕ ನಿಷ್ಠೆ, ಜೀವನದ ದೃಷ್ಟಿಕೋನಗಳು. ಹಾಗಾಗಿ ಇಂದಿನ ದಿನಗಳು ಹಿಂದಿನ ದಿನಗಳಂತೆ ಮನುಷ್ಯನಿಗೆ ಕಂಡುಬರುತ್ತಿಲ್ಲ.
ಓದುಗ ಮಹಾಶಯರೇ ಲೇಖನದ ಸಂದೇಶವೆಂದರೆ ಪ್ರಾಜ್ಞರಾದ ನಾವು, ನೀವುಗಳು ಈ ಮೇಲೆ ತಿಳಿಸಿದ ನಿರ್ಲಕ್ಷಿತವಾಗಿರುವ ನಮ್ಮ ಆಚಾರ, ಸುವಿಚಾರಗಳನ್ನು ಪರಿಪಾಲಿಸುತ್ತಾ, ಧರ್ಮವನ್ನಾಚರಿಸುತ್ತಾ, ಸುಸಂಸ್ಕೃತ ಶುದ್ಧ ನಡೆ, ನುಡಿ, ಗೌರವ, ವಿಶ್ವಾಸಗಳಂತಹ ಸೂಕ್ಷ್ಮ ಪ್ರeಂಶಗಳನ್ನು ಮೈಗೂಡಿಸಿಕೊಂಡು ನಾವುಗಳೂ ಸಹ ನಮ್ಮ ಪೂರ್ವಜರ ಹಾಗೆ ಶಾಂತಿಯುತ, ಗೌರವಯುತ, ಸಂತೋಷದ ಹಾಗೂ ನೆಮ್ಮದಿಯ ಜೀವನವನ್ನು ಜೀವಿಸೋಣ ಎಂಬ ಸಂದೇಶವನ್ನು ಬಿತ್ತರಿಸುತ್ತ, ಲೇಖನಕ್ಕೆ ವಿರಾಮವನ್ನು ನೀಡುತ್ತಿರುವೆ.
ಬದಲಾವಣೆ ಜಗದ ನಿಯಮ,
ಬದಲಾವಣೆ ನಮ್ಮಿಂದಲೇ ಸಾಧ್ಯ
ಧನ್ಯವಾದಗಳು.
ಜೈ ಹಿಂದ್

ಲೇಖಕರು: ಬಾಲರಾಜ ಎಮ್. ವಿಶ್ವಕರ್ಮ, ಅರಳಗುಂಡಗಿ
ಕಲಬುರಗಿ ಜಿ