ಉದ್ಯೋಗಖಾತ್ರಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಆಗ್ರಹಿಸಿ ತಾಪಂ ಕಛೇರಿ ಎದುರು ಧರಣಿ…
ಯಲಬುರ್ಗಾ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಜರಿಗೆ ಆಗ್ರಹಿಸಿ, ಕೊಪ್ಪಳ ಜಿಯ ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಪಂ ಕಾರ್ಯಾಲಯದ ಮುಂದೆ ಕೂಲಿ ಕಾರ್ಮಿಕರು ಸಾಂಕೇತಿಕ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಕೂಲಿ ಕಾರ್ಮಿಕ ಗಿರಿಯಪ್ಪ ಕೋರಿ, ಕೆಲಸ ವಿಲ್ಲದೆ ಸಮಸ್ಯೆ ಎದರುರಾಗಿದ್ದ ರಿಂದ ರೈತಾಪಿ ವರ್ಗ ಕಂಗಲಾಗಿ zರೆ. ಸರಕಾರ ತಕ್ಷಣವೇ ಉದ್ಯೋಗ ಖಾತರಿ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸದಿದ್ದರೆ ಪ್ರತಿಯೊಬ್ಬರ ಸಂಕಷ್ಟ ಹೆಚ್ಚಾಗಲಿದೆ. ಪ್ರತಿ ಕುಟುಂಬಕ್ಕೂ ಅವರು ಬಯಸುವಷ್ಟು ದಿನ ಉದ್ಯೋಗ ಖಾತರಿ ಯೋಜನೆ ಯಡಿ ಕೆಲಸ ಒದಗಿಸಬೇಕು. ಎಲ್ಲ ಕೆಲಸಗಾರರಿಗೆ ಸಕಾಲದಲ್ಲಿ ಸರಿಯಾದ ಕೂಲಿ ಪಾವತಿ ಮಾಡಬೇಕು. ಸಕಾಲದಲ್ಲಿ ಉದ್ಯೋಗ ಒದಗಿಸಲಾಗದ ಸಂದರ್ಭಗಳಲ್ಲಿ ನಿರುದ್ಯೋಗ ಭತ್ಯೆಯನ್ನು ಪಡೆಯಲು ಗ್ರಾಪಂ ಅಥವಾ ತಾಪಂಗೆ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಿ ಸ್ವೀಕತಿ ಪತ್ರ ನೀಡಬೇಕು. ವಾರಕ್ಕೊಮ್ಮೆ ಎನ್.ಎಂ.ಆರ್.ಗಳನ್ನು ಮುಕ್ತಾಯಗೊಳಿಸಿ ವಾರಕ್ಕೊಮ್ಮೆ ಕೆಲಸಗಾರರಿಗೆ ಕೂಲಿ ಪಾವತಿ ಮಾಡಬೇಕು. ಕೂಲಿ ಪಾವತಿ ವಿಳಂಬವಾದರೆ ೯೩೬ರ ವೇತನ ಪಾವತಿ ಕಾಯ್ದೆಯ ಪ್ರಕಾರ ವಿಳಂಬ ಕೂಲಿ ಪಾವತಿ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.