ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮನವಿ
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ವಾರ್ಡ್ ನಂ.೨ರಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಅನೇಕ ಮತದಾರರ ಹೆಸರುಗಳು ಬಿಟ್ಟು ಹೋಗಿದ್ದು, ಪುನಃ ಅವರ ಹೆಸರ ನ್ನು ಮತದಾರರ ಪಟ್ಟಿಗೆ ಸೇರ್ಪ ಡೆಗೊಳಿಸಬೇಕೆಂದು ವಾರ್ಡಿನ ಪಾಲಿಕೆ ಸದಸ್ಯ ಇ. ವಿಶ್ವಾಸ್ ಜಿ ಧಿಕಾರಿಗಳಿಗೆ ಮನವಿ ಸಲ್ಲಿಸಿzರೆ.
ಮೊನ್ನೆ ನಡೆದ ಚುನಾವಣೆ ವೇಳೆ ಮತಗಟ್ಟೆಗೆ ತೆರಳಿದಾಗ ಕೆಲವರಿಗೆ ತಮ್ಮ ಹೆಸರು ಮತದಾ ರರ ಪಟ್ಟಿಯಲ್ಲಿ ಬಿಟ್ಟಿರುವುದು ಗಮನಕ್ಕೆ ಬಂದಿದೆ. ಹಾಗೂ ಅವರು ಆ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳ ಬಳಿ ದೂರನ್ನು ಸಲ್ಲಿಸಿ zರೆ. ಹಾಗೂ ಮತದಾರರ ಪಟ್ಟಿ ಯಲ್ಲಿ ಹೆಸರ ಬಿಟ್ಟುಹೋಗಿರುವ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿzರೆ.ಕೆಲವೇ ತಿಂಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಅಷ್ಟರಲ್ಲಿ ಮತ ದಾರರ ಪಟ್ಟಿಗೆ ಬಿಟ್ಟುಹೋದ ಹೆಸ ರುಗಳನ್ನು ಮತ್ತು ಹೊಸ ಮತ ದಾರರ ಹೆಸರುಗಳನ್ನು ಸೇರ್ಪಡೆ ಗೊಳಿಸಬೇಕೆಂದು ಸಂತ್ರಸ್ತರು ಮತ್ತು ಸ್ತಳೀಯ ಕಾರ್ಪೊರೇಟರ್ ಆಗ್ರಹಿಸಿzರೆ.
ಈಸಂದರ್ಭದಲ್ಲಿ ಶೇಖರ್, ಚಂದ್ರಶೇಖರ್, ಶರತ್ ಇದ್ದರು.