ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ; ಮಕ್ಕಳೇ ವಿದ್ಯಾವಂತರಾಗುವ ಮೂಲಕ ದೇಶದ ಪ್ರಗತಿಯ ಸಾಧನಗಳಾಗಿ: ಚನ್ನಬಸಪ್ಪ

Share Below Link

ಶಿವಮೊಗ್ಗ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಎಲ್ಲರೂ ವಿದ್ಯಾವಂತರಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ.ಮಕ್ಕಳು ವಿದ್ಯಾವಂತರಾಗಿ ದೇಶಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿzರೆ.
ಅವರು ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಪದನಿಮಿತ್ತ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಶಿವಮೊಗ್ಗ ಇದರ ವತಿಯಿಂದ ಗಾಡಿಕೊಪ್ಪ ಸರ್ಕಾರಿ ಪ್ರೌಢಶಾಲೆ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೨೦೨೩-೨೪ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
ಹೆಣ್ಣೊಂದು ಕಲಿತರೆ ಶಾಲೆ ಯೊಂದು ತೆರೆದಂತೆ ಎಂಬ ನಾಣ್ಣು ಡಿಯಂತೆ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡಲೇಬೇಕು. ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಹೆಣ್ಣು ಕಲಿತರೆ ಕುಟುಂಬ ಮಾತ್ರವಲ್ಲದೆ ಸಮಾ ಜದ ಅಭಿವೃದ್ಧಿಯೂ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.


ಮಕ್ಕಳು ವಿದ್ಯಾವಂತರಾಗಿ ಸಾಧನೆ ಮಾಡಿದಾಗ ಪೋಷಕರು ಅತ್ಯಂತ ಖುಷಪಡುತ್ತಾರೆ. ವಿದ್ಯಾ ರ್ಥಿಗಳ ಜೀವನ ರೂಪಿಸಲು ವಿದ್ಯಾಭ್ಯಾಸ ಅಗತ್ಯ. ವಿದ್ಯೆಯಿಂದ ಯಾರೂ ಕೂಡ ವಂಚಿತ ರಾಗಬಾರದು. ವಿದ್ಯೆಯಿಂದ ಒಳ್ಳೆ ಯ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ದೇಶಕ್ಕೆ ಆಸ್ತಿಯಾಗುತ್ತಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗ ರಾಜ್ ಮಾತನಾಡಿ, ಇಂದಿನಿಂದ ಶಾಲೆಗಳಿಗೆ ವಿಧ್ಯುಕ್ತ ಚಾಲನೆ ದೊರ ಕಿದೆ. ಕಳೆದ ಮೂರು ವರ್ಷಗಳಿಂದ ಕೊರೋನಾ ಕಾರಣದಿಂದ ಶಾಲೆ ಗಳು ಪರಿಣಾಮಕಾರಿಯಾಗಿ ನಡೆದಿರಲಿಲ್ಲ. ಸರ್ಕಾರಿ ಶಾಲೆಗಳಿಗೆ ಸರ್ಕಾರ ಅನೇಕ ಪ್ರೋತ್ಸಾಹದಾ ಯಕ ಯೋಜನೆಗಳನ್ನು ನೀಡಿದೆ. ಇಂದಿನಿಂದಲೇ ಎ ಮಕ್ಕಳಿಗೂ ೨ಜೊತೆ ಸಮವಸ್ತ್ರ ಮತ್ತು ಉಚಿತ ಪಠ್ಯ ಪುಸ್ತಕಗಳನ್ನು ನೀಡಲಾಗಿದೆ. ಶೂ ಮತ್ತು ಸಾಕ್ಸ್‌ಗಳನ್ನು ಕೂಡ ವಿತರಿಸಲಾಗಿದೆ. ಮಕ್ಕಳು ಅನಾ ರೋಗ್ಯ ಮತ್ತು ಹಸಿವಿನಿಂದ ಪೀಡಿ ತರಾಗಬಾರದು ಎಂದು ಎ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶ ಯುಕ್ತ ಆಹಾರ, ಕೆನೆಭರಿತ ಹಾಲು, ವಾರಕ್ಕೆ ೨ ಮೊಟ್ಟೆ, ವಿಟ ಮಿನ್‌ಯುಕ್ತ ಮಾತ್ರೆಗಳನ್ನು ನೀಡ ಲಾಗುತ್ತಿದೆ. ಅಲ್ಲದೆ ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆಯಡಿ ಗಂಭೀರ ಸ್ವರೂಪದ ಕಾಯಿಲೆಗಳು ಮಕ್ಕಳಲ್ಲಿ ಕಂಡುಬಂದರೆ ಉಚಿತ ವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.ಪೋಷಕರಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಬೇಡಿಕೆ ಹೆಚ್ಚಿ ರುವುದರಿಂದ ಮತ್ತು ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿಸುವ ದೃಷ್ಟಿಯಿಂದ ನಗರದಲ್ಲಿ ೧೦ ಸರ್ಕಾ ರಿ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗಳು ಈ ಬಾರಿ ಪ್ರಾರಂಭವಾ ಗಿದೆ ಎಂದರು.


ಗಾಡಿಕೊಪ್ಪ ಶಾಲೆಯಲ್ಲಿ ೩೫೦ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ೧೫೦ಕ್ಕೂ ಹೆಚ್ಚು ಪ್ರೌಢಶಾಲಾ ಮಕ್ಕಳಿದ್ದು, ಇಂದು ಎ ಮಕ್ಕಳಿಗೂ ತಿಲಕ ಇಟ್ಟು ಆರತಿ ಎತ್ತಿ ಕೈಗೊಂದು ಬೆಲೂನು, ಗುಲಾಬಿ ಚಾಕಲೇಟ್ ನೀಡಿ ಶಾಸಕರು ಮತ್ತು ಶಾಲಾ ಅಧ್ಯಾಪಕ ವೃಂದ ಮಕ್ಕಳನ್ನು ಅದ್ಧೂರಿಯಾಗಿ ಬರಮಾಡಿಕೊಂಡಿತು.
ಇಡೀ ಶಾಲಾ ವಾತಾವರಣ ಸಂಭ್ರಮದಿಂದ ಕೂಡಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಕಾಪೊರೆ ಟರ್ ಲತಾ ಗಣೇಶ್ ಶಿಕ್ಷಣ ಇಲಾ ಖೆಯ ಶಿವಣ್ಣಸಂಕಣ್ಣನವರ್, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾ ರ್ಜುನ, ಮತ್ತು ಸದಸ್ಯರು ಹಾಗೂ ಪ್ರೌಢಶಾಲೆ ಮುಖ್ಯೋಪಾ ಧ್ಯಾಯ ಪ್ರಕಾಶ್, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಭುವನೇಶ್ವರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.