ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಇದೇನು ಸ್ನೇಹವೋ… ಪ್ರೀತಿಯೋ…!

Share Below Link

ಬಹುಷಃ ಇಲ್ಲಿಯವರೆಗೂ ಯಾರನ್ನೂ ಅಷ್ಟಾಗಿ ಬಯಸದ ನಾನು ಅದೇಕೋ ನಿನ್ನನ್ನು ಬಯಸಿದೆ.
ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳಬಾರದು ಎಂದು ಮನಸ್ಸಿಗೆ ಎಷ್ಟೇ ಬುದ್ಧಿ ಹೇಳಿಕೊಂಡಿದ್ದರೂ, ನನಗರಿವಿಲ್ಲದೇ ನಿನ್ನನ್ನು ನನ್ನೊಳಗೆ ಹಚ್ಚಿಕೊಂಡೆ.
ನೀನು ನನ್ನ ಬದುಕಿಗೆ ಅದ್ಯಾವಾಗ ಬಂದೆ, ಯಾವ ಕ್ಷಣದಲ್ಲಿ ನನ್ನ ಈ ಪುಟ್ಟ ಹೃದಯದ ಯಾವುದೋ ಒಂದು ಮೂಲೆಯಲ್ಲಿ ಜಾಗ ಮಾಡಿಕೊಂಡೆ ಎಂಬುದೇ ನನಗೆ ಗೊತ್ತಾಗಲಿಲ್ಲ.
ಮೊದಮೊದಲಿಗೆ ನಿನ್ನೊಂದಿಗೆ ಮಾತನಾಡಿದ್ದು ಸಾಮಾನ್ಯವಾಗಿತ್ತು. ನಿನ್ನ ಮಾತುಗಳು, ನಿನ್ನ ನಗು, ನಿನ್ನ ಸಣ್ಣ ಸಣ್ಣ ಹುಸಿ ಕೋಪಗಳು ಎಲ್ಲವೂ ಇತರರಂತೆಯೇ ಸಹಜವೆನಿಸಿತ್ತು. ಆದರೆ ದಿನಗಳು ಕಳೆದಂತೆ, ನಿನ್ನನ್ನು ನೋಡದ ದಿನ ಅಪೂರ್ಣವೆನಿಸತೊಡಗಿತು. ನಿನ್ನ ಧ್ವನಿ ಕೇಳದ ಕ್ಷಣಗಳು ಏನೋ ಕಳೆದುಕೊಂಡಂತಾಗತೊಡಗಿದವು. ಆಗಲೇ ನನಗೆ ಅರಿವಾಯಿತು ನೀನು ನನಗೆ ಯಾರೋ ಅಲ್ಲ, ಬದಲಿಗೆ ನನ್ನವಳು ಆಗಿಬಿಟ್ಟಿದ್ದೀಯ ಎಂದು.
ಯಾರಿಗಾಗಿಯೂ ಕಾಯದ ನಾನು, ನಿನಗಾಗಿ ಕಾಯಲು ಕಲಿತೆ. ನಿನ್ನಿಂದ ಒಂದು ಕರೆ ಬರಬಹುದೇನೋ, ಒಂದು ಸಂದೇಶ ಬರಬಹುದೇನೋ ಎಂದು ಮೊಬೈಲ್ ಪರದೆಯನ್ನು ನೋಡುತ್ತಾ ಕುಳಿತ ಕ್ಷಣಗಳೆಷ್ಟೋ. ಸಮಯ ತನ್ನ ದಾರಿಯಲ್ಲಿ ಸಾಗುತ್ತಿದ್ದರೂ, ನನ್ನ ಮನಸ್ಸು ಮಾತ್ರ ನಿನ್ನ ಬರುವಿಕೆಯ ದಾರಿಯಲ್ಲಿ ನಿಂತುಹೋಗುತ್ತಿತ್ತು.
ಯಾರಿಗಾಗಿಯೂ ಕಣ್ಣೀರು ಹಾಕದ ನಾನು, ನಿನಗಾಗಿ ಕಣ್ಣೀರು ಹಾಕಿದೆ. ಕಾರಣ ನಿನ್ನನ್ನು ಕಳೆದುಕೊಳ್ಳುವ ಭಯ ನನ್ನೊಳಗೆ ಹುಟ್ಟಿದ್ದಕ್ಕಾಗಿ. ಕೆಲವೊಮ್ಮೆ ಪ್ರೀತಿ ಎನ್ನುವುದು ಸಂತೋಷಕ್ಕಿಂತಲೂ ಹೆಚ್ಚು ಭಯವನ್ನು ಕೊಡುತ್ತದೆ. ನನ್ನವಳು ಎಂದುಕೊಂಡವಳು ನಾಳೆ ನನ್ನವಳಾಗಿರುತ್ತಾಳೆಯೇ ಎಂಬ ಪ್ರಶ್ನೆ, ಮನಸ್ಸಿನೊಳಗೆ ಕಾಡತೊಡಗುತ್ತದೆ.
ಯಾರ ಮಾತನ್ನೂ ಅಷ್ಟಾಗಿ ಕೇಳದ ನಾನು, ನಿನ್ನ ಧ್ವನಿಗಾಗಿ ಕಾತರಿಸುತ್ತಿzನೆ. ನಿನ್ನ ಹಲೋ ಎಂಬ ಒಂದೇ ಒಂದು ಪದ ನನ್ನ ದಿನದ ಎಲ್ಲ ಧಣಿವನ್ನೂ ಕಳೆಯುತ್ತದೆ. ನಿನ್ನ ಧ್ವನಿಯಲ್ಲಿ ಏನೋ ಒಂದು ಮಾಯೆಯಿದೆ. ಅದನ್ನು ಕೇಳಿದಾಗ ಮನಸ್ಸು ತನ್ನ ಎಲ್ಲ ಗೊಂದಲಗಳನ್ನು ಮರೆತುಬಿಡುತ್ತದೆ. ನೀನು ಮಾತನಾಡುತ್ತಿದ್ದರೆ ಸಾಕು ಉಳಿದ ಜಗತ್ತು ಸ್ವಲ್ಪ ಹೊತ್ತು ಮನವಾಗಲಿ ಎನ್ನಿಸುತ್ತದೆ.
ಯಾರನ್ನೂ ದೂರ ಮಾಡಿಕೊಳ್ಳದ ನಾನು, ಇಂದು ನಿನ್ನನ್ನು ದೂರದಿಂದಲೇ ನೋಡುತ್ತಿzನೆ. ಹತ್ತಿರ ಬರಬೇಕು ಎಂಬ ಆಸೆ ಇದೆ. ಆದರೆ ನಿನ್ನ ಮನಸ್ಸಿನಲ್ಲಿ ನನಗೆ ಯಾವ ಜಾಗವಿದೆ ಎಂಬುದು ತಿಳಿಯದ ಭಯವೂ ಇದೆ. ಅದಕ್ಕಾಗಿಯೇ ಬಹುಶಃ ಪ್ರೀತಿಯನ್ನು ಹೇಳಿಕೊಳ್ಳದೆ, ನಿನ್ನನ್ನು ದೂರದಿಂದಲೇ ಪ್ರೀತಿಸುತ್ತಿzನೆ. ಕೆಲವೊಂದು ಭಾವನೆಗಳು ಹೇಳಿದಾಗ ಸಣ್ಣವಾಗುತ್ತವೆ. ಹೇಳದೆ ಹೃದಯದ ಉಳಿಸಿಕೊಂಡಾಗ ಮಾತ್ರ ಅವು ಇನ್ನಷ್ಟು ಆಳವಾಗುತ್ತವೆ.
ಮೊದಲಿನಿಂದಲೂ ಸ್ವಲ್ಪ ಸೋಮಾರಿತನವನ್ನು ಅಪ್ಪಿಕೊಂಡ ನನಗೆ ನಿದ್ರೆ ಎಂದರೆ ಬಹಳ ಇಷ್ಟ. ದಿನವಿಡೀ ಎಷ್ಟೇ ಕೆಲಸವಿದ್ದರೂ ರಾತ್ರಿ ಬಂದರೆ ನಿzಯ ಮಡಿಲಿಗೆ ಜಾರುತ್ತಿದ್ದ ನಾನು, ಈಗ ನಿz ಮರೆತು ಕುಳಿತಿzನೆ. ಕಣ್ಣು ಮುಚ್ಚಿದರೆ ನೀನು ಕಾಣಿಸುತ್ತೀಯೆ. ಕಣ್ಣು ತೆರೆದರೆ ನಿನ್ನ ನೆನಪು ಎದುರಾಗುತ್ತದೆ. ಹೀಗಿರುವಾಗ ನಿz ಹೇಗೆ ಬರಬೇಕು ನೀನೇ ಹೇಳು.
ನಿನ್ನೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ನೀನು ಹೇಳಿದ ಮಾತುಗಳನ್ನು ಮತ್ತೆ ಮತ್ತೆ ಮನಸ್ಸಿನಲ್ಲಿ ಕೇಳಿಸಿಕೊಳ್ಳುತ್ತಾ, ನಿನ್ನ ನಗುವನ್ನು ನೆನಪಿಸಿಕೊಂಡು ಒಬ್ಬನೇ ನಗುತ್ತಾ, ಕೆಲವೊಮ್ಮೆ ನಿನ್ನ ಮನದ ಅರ್ಥ ಹುಡುಕುತ್ತಾ ರಾತ್ರಿಗಳನ್ನು ಕಳೆಯುತ್ತಿzನೆ.
ಇದೆಲ್ಲವನ್ನೂ ಏನೆಂದು ಕರೆಯಲಿ..?!
ಇದೇನು ಸ್ನೇಹವೋ… ?
ಪ್ರೀತಿಯೋ… ?
ಆಕರ್ಷಣೆಯೋ… ?
ಅಥವಾ
ನನಗರಿವಿಲ್ಲದೇ ನನ್ನ ಹೃದಯ ನಿನ್ನನ್ನು ತನ್ನದೇ ಆದವಳೆಂದು ಒಪ್ಪಿಕೊಂಡಿದೆಯೋ?
ನನಗೆ ಮಾತ್ರ ಉತ್ತರ ಗೊತ್ತಿಲ್ಲ..!
ಆದರೆ ಒಂದಂತೂ ಸತ್ಯ. ನನ್ನ ದಿನದ ಆರಂಭದಲ್ಲೂ ನೀನಿದ್ದೀಯೆ, ಅಂತ್ಯದಲ್ಲೂ ನೀನಿದ್ದೀಯೆ. ನನ್ನ ನಗುವಿನ ಹಿಂದೆಯೂ ನೀನಿದ್ದೀಯೆ, ನನ್ನ ಮನದೊಳಗೂ ನೀನಿದ್ದೀಯೆ. ನನ್ನ ಕಾಯುವಿಕೆಯಲ್ಲೂ ನೀನಿದ್ದೀಯೆ, ನನ್ನ ಕಣ್ಣೀರಿನಲ್ಲೂ ನೀನಿದ್ದೀಯೆ.
ಹೀಗಿರುವಾಗ ಇದನ್ನು ಸ್ನೇಹವೆಂದು ಹೇಗೆ ಒಪ್ಪಿಕೊಳ್ಳಲಿ?
ನೀನೇ ಹೇಳು ಗೆಳತಿ…
ನಿನ್ನನ್ನು ಇಷ್ಟು ಪ್ರೀತಿಸುವ ಈ ಪುಟ್ಟ ಹೃದಯಕ್ಕೆ ನೀನು ಕೊಡುವ ಹೆಸರೇನು…?!

Leave a Reply

Your email address will not be published. Required fields are marked *