ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ನಿನ್ನ ಕಣ್ಣಿನ ಬೆಳಕಲ್ಲಿ ನನ್ನ ಪ್ರೀತಿಯ ಪ್ರಪಂಚ…

Share Below Link

ಏನೆಂದು ಹೇಳಲಿ ನಾನು…

ಕೆಲವು ಭಾವನೆಗಳನ್ನು ಹೇಗೆ ವರ್ಣಿಸಬೇಕೆಂದೇ ತಿಳಿಯುವುದಿಲ್ಲ.

ಅದೇರೀತಿ ಕೆಲವು ಪ್ರೀತಿಗಳಿಗೆ ಭಾಷೆಯ ಗಡಿಯೇ ಇರುವುದಿಲ್ಲ.

ಹೃದಯದೊಳಗೆ salient ಆಗಿ ಹುಟ್ಟಿಕೊಂಡು,

ಉಸಿರಿನ ಜೊತೆ ಬೆರೆತು,

ಪ್ರತಿಕ್ಷಣವೂ ನಮ್ಮನ್ನು ಹಿಂಬಾಲಿಸುವ ಆ ಪ್ರೀತಿಯನ್ನು

ಗೆ ಅಕ್ಷರಗಳಲ್ಲಿ ಕಟ್ಟಿಹಾಕಲಿ ನಾನು…?!

ನನ್ನ ಹೃದಯ ನಿನ್ನ ಮೇಲೆ ಇಟ್ಟುಕೊಂಡಿರುವ ಪ್ರೀತಿ ಅಷ್ಟೊಂದು ಆಳವಾದುದು.

ಅದಕ್ಕೆ ಯಾವುದೇ measurement ಇಲ್ಲ..,

expiry date ಇಲ್ಲ…,

reason ಅಂತೂ ಇಲ್ಲವೇಇಲ್ಲ.

ನೀನು ಅರಿತರೂ ಸರಿ, ಅರಿಯದಿದ್ದರೂ ಸರಿ.

ನನ್ನ ಪಾಲಿಗೆ ನೀನೇ ನನ್ನ ಪ್ರಪಂಚ.

ನನ್ನ ದಿನದ ಆರಂಭವೂ ನೀನೇ…,

ಮುಗಿಯದ ನೆನಪಿನ ಕೊನೆಯ ಸಾಲೂ ನೀನೇ…

ಅಂದು ನಿನ್ನ ಕಣ್ಣಲ್ಲಿ ಒಮ್ಮೆ ಕಾಣಿಸಿಕೊಂಡ ಆ ಪ್ರೀತಿಯ ಬೆಳಕು…

ಅದು ನಿಜವಾಗಿತ್ತೋ ಅಥವಾ ನನ್ನ ಭ್ರಮೆಯಾಗಿತ್ತೋ god promise ನನಗೆ ಗೊತ್ತಿಲ್ಲ.

but, ಆ ಒಂದು ಕ್ಷಣ ಮಾತ್ರ ನನ್ನ ಬದುಕಿನ ಅರ್ಥವನ್ನೇ ಬದಲಿಸಿತು.

ಕತ್ತಲಲ್ಲಿ ದಾರಿ ತಪ್ಪಿದವನಿಗೆ ದೂರದಲ್ಲಿ ಕಾಣುವ ಒಂದು ಪುಟ್ಟ ದೀಪದಂತೆ,

ನಿನ್ನ ಕಣ್ಣಿನ ಆ ಬೆಳಕು ಇಂದಿಗೂ ನನ್ನ ಬಾಳಿಗೆ ದಾರಿದೀಪವಾಗಿದೆ.

ಕೆಲವೊಮ್ಮೆ ಅನಿಸುತ್ತದೆ…

ಪ್ರೀತಿ ಎಂದರೆ ಪರಸ್ಪರ ಹತ್ತಿರದಲ್ಲಿರದಿದ್ದರೂ

ಒಬ್ಬರ ಉಸಿರಿನೊಳಗೆ ಮತ್ತೊಬ್ಬರು ಜೀವಿಸುವುದು.

ಮಾತಿಲ್ಲದಾಗಲೂ ಮನಸ್ಸು ಮಾತಾಡುವುದು.

ಕಾಣದಿzಗಲೂ ಕಣ್ಣಮುಂದೆ ಕಾಣಿಸುವುದು.

ಮುಟ್ಟಲಾಗದಿದ್ದರೂ ಹೃದಯಕ್ಕೆ ಹತ್ತಿರವಾಗಿರುವುದು.

ಮನವು ಚೆನ್ನ…, ಮಾತು ಚೆನ್ನ…,

ನಗುವಾಗ ನೀನಿನ್ನೂ ಚೆನ್ನ…,

ನಿನಗಿಂತ ಯಾರಿಲ್ಲ ಚೆನ್ನ…

ನಿನ್ನ ಜೊತೆ ಮಾತನಾಡಿದ ಕ್ಷಣಗಳಿಗಿಂತ

ನಿನ್ನ ಜೊತೆ ಮಾತನಾಡಬೇಕೆಂದು ಕಾಯುವ ಕ್ಷಣಗಳೇ ನನಗೆ ಹೆಚ್ಚು ಪ್ರಿಯ.

ಏಕೆಂದರೆ ಆ ಕಾಯುವಿಕೆಯಲ್ಲೂ ಒಂದು ಸಿಹಿ ಇದೆ.

ಬರುವೆಯೋ ಇಲ್ಲವೋ ಗೊತ್ತಿಲ್ಲದಿದ್ದರೂ,

ಬಾಗಿಲಿನತ್ತ ಕಣ್ಣು ಹಾಯಿಸುವ ನಿರೀಕ್ಷೆಯಲ್ಲೂ love ಇದೆ.

ನಿನ್ನ smile…

ಅದು ಬರೀ ನಗುವಲ್ಲ.

ನನ್ನ ಬೇಸರದ ದಿನಗಳ ಮೇಲೆ ಸುರಿಯುವ ಮುಂಗಾರು ಮಳೆಯ ಹನಿಯಂತೆ.

ನಿನ್ನ ಒಂದು ನೋಟ…

ಅದು ಬರೀ ನೋಟವಲ್ಲ.

ನನ್ನೊಳಗೆ ಮಲಗಿರುವ ಸಾವಿರ ಕನಸುಗಳನ್ನು ಎಬ್ಬಿಸುವ ಮನದ ಕರೆಯಂತೆ.

ಬಹುಶಃ ಅದಕ್ಕೇ ಕೆಲವೊಮ್ಮೆ ಪ್ರೀತಿಯೆಂಬುದು ವಿಚಿತ್ರ ಅನ್ಸುತ್ತೆ.

ನಾವು ಪ್ರೀತಿಸುವ ವ್ಯಕ್ತಿಯನ್ನು ಪಡೆಯುತ್ತೇವೆಯೋ… ಇಲ್ಲವೋ… ಎಂಬುದಕ್ಕಿಂತ,

ಅವರನ್ನು ಪ್ರೀತಿಸುವಾಗ ನಮ್ಮೊಳಗೆ ಹುಟ್ಟುವ ಹೊಸ ಮನುಷ್ಯನೇ ಮುಖ್ಯವಾಗಿಬಿಡುತ್ತಾನೆ.

ನಿನ್ನನ್ನು ಪ್ರೀತಿಸಿದ ಮೇಲೆ ನಾನು ನನ್ನನ್ನೇ ಹೊಸದಾಗಿ ಕಂಡುಕೊಂಡೆ.

ನಿನ್ನ ನೆನಪುಗಳು ನನ್ನ ಒಂಟಿತನಕ್ಕೆ ಸಂಗಾತಿಯಾದವು.

ನಿನ್ನ ಮಾತುಗಳು ನನ್ನ ಮನಕ್ಕೆ ಅರ್ಥವಾದವು.

ನೀ ದೂರವಾದರೂ ನೆನಪು ಹತ್ತಿರ…

ನೀ ಮನವಾದರೂ ಮನಸು ಮಾತಾಡುತ್ತದೆ..

ನೀ ಕಾಣದ ದಾರಿಯಲ್ಲಿದ್ದರೂ,

ನನ್ನ ಕಣ್ಣು ನಿನ್ನನ್ನೇ ಹುಡುಕುತ್ತದೆ…

ನಿನ್ನನ್ನು ಪಡೆಯುವ ಹಂಬಲಕ್ಕಿಂತ,

ನಿನ್ನನ್ನು ಕಳೆದುಕೊಳ್ಳಬಾರದೆಂಬ fear ಕೆಲವೊಮ್ಮೆ ಹೆಚ್ಚಾಗುತ್ತದೆ.

ಏಕೆಂದರೆ ನೀನು ನನ್ನ ಬದುಕಿನಲ್ಲಿ ಬಂದದ್ದು ಆಕಸ್ಮಿಕವಲ್ಲ,

ಅದು ನನ್ನ ಬದುಕಿನ ಒಂದು ಸುಂದರ ಅಧ್ಯಾಯ.

ಆ ಅಧ್ಯಾಯ ಮುಗಿಯಬಾರದೆಂಬ ಆಸೆಯೇ ಬಹುಶಃ ಪ್ರೀತಿಯ ಮತ್ತೊಂದು ಹೆಸರು.

ನಾಳೆ ಏನಾಗುತ್ತದೆ ಗೊತ್ತಿಲ್ಲ.

ನಮ್ಮ ದಾರಿಗಳು ಒಂದಾಗುತ್ತವೆಯೋ,

ಬೇರೆಬೇರೆ ದಿಕ್ಕುಗಳಲ್ಲಿ ಸಾಗುತ್ತವೆಯೋ ತಿಳಿಯದು.

ಆದರೆ ಇಂದಿನ ಈ ಕ್ಷಣದಲ್ಲಿ ನನ್ನ ಹೃದಯ ಹೇಳುವುದು ಒಂದೇ ಮಾತು.

ನಿನ್ನನ್ನು ಪ್ರೀತಿಸಿzನೆ…, ಪ್ರೀತಿಸುತ್ತೇನೆ…,

ಬಹುಶಃ ನನ್ನ ಕೊನೆಯ ಉಸಿರಿನವರೆಗೂ ಪ್ರೀತಿಸುತ್ತಲೇ ಇರುತ್ತೇನೆ….

ಏಕೆಂದರೆ ಕೆಲವರು ನಮ್ಮ ಬದುಕಿಗೆ ಬಂದು ಹೋಗುವುದಿಲ್ಲ.

ಅವರು ನಮ್ಮ ಬದುಕಿನ ಅರ್ಥವಾಗಿಬಿಡುತ್ತಾರೆ.

ನೀನು ಅಂಥವಳು…

ನನ್ನ ನೆನಪಿನಲ್ಲಲ್ಲ…

ನನ್ನ ಹೃದಯದೊಳಗೆ ಶಾಶ್ವತವಾಗಿ ಉಳಿದವಳು…..

See less

Leave a Reply

Your email address will not be published. Required fields are marked *