ಮನೆಗಳ್ಳತನ: 6.04 ಲಕ್ಷ ಮಲ್ಯದ ಚಿನ್ನ-ಬೆಳ್ಳಿ ಸಹಿತ ೩ ದಿನದ ಆರೋಪಿಗಳು ಅರೆಸ್ಟ್…
ಶಿವಮೊಗ್ಗ: ನಗರದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಶ್ರಯ ಬಡಾವಣೆ, ಬೊಮ್ಮನಕಟ್ಟೆಯ ನಿವಾಸಿಯೊಬ್ಬರ ಮನೆಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಪೊಲೀಸರು ಕೇವಲ ಮೂರು ದಿನಗಳ ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿzರೆ.
ಈ ಸಂಬಂಧ ಜೂ. ೧೭ರಂದು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ ೧೨೨/೨೦೨೬ರಡಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ ೩೩೧(೩), ೩೩೧(೪) ಹಾಗೂ ೩೦೫ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದ ಮೇರೆಗೆ ವಿನೋಬನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಸಂಗ್ರಹಿಸಿದ ವಿಶೇಷ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ರವಿ ಬಿನ್ ಬೆಕ್ಕು ಬಿನ್ ಉಮೇಶ್ ನಾಯ್ಕ್ (೨೭) ಹಾಗೂ ಗಣೇಶ್ ಬಿನ್ ಗಣಿ ಬಿನ್ ಮಹೇಂದ್ರ ಅವರನ್ನು ಬಂಧಿಸಿದೆ. ಇಬ್ಬರೂ ಆಶ್ರಯ ಬಡಾವಣೆ ನಿವಾಸಿಗಳಾಗಿzರೆ.
ಬಂಧಿತರಿಂದ ಕಳುವಾಗಿದ್ದ ೫೧ ಗ್ರಾಂ ತೂಕದ ಚಿನ್ನದ ಆಭರಣ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮಲ್ಯ ರೂ.೬ ಲಕ್ಷವಾಗಿದೆ. ಜೊತೆಗೆ ೨೭ ಗ್ರಾಂ ತೂಕದ ಬೆಳ್ಳಿಯ ಬಳೆಯನ್ನೂ ಜಪ್ತಿ ಮಾಡಲಾಗಿದ್ದು, ಅದರ ಮಲ್ಯ ಸುಮಾರು ರೂ.೪ ಸಾವಿರ ಎಂದು ಅಂದಾಜಿಸಲಾಗಿದೆ. ಒಟ್ಟು ರೂ. ೬.೦೪ ಲಕ್ಷ ಮಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಪೊಲೀಸರು ಅಮಾನತು ಗೊಳಿಸಿಕೊಂಡಿzರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಶೀಘ್ರ ಅವಧಿಯ ಆರೋಪಿಗಳನ್ನು ಬಂಧಿಸಿ ಕಳುವಾದ ಮಾಲನ್ನು ಪತ್ತೆಹಚ್ಚಿದ ವಿಶೇಷ ತಂಡದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಜಿ ಪೊಲೀಸ್ ಅಧೀಕ್ಷಕರು ಅಭಿನಂದಿಸಿzರೆ.
