ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ ಜಿಲ್ಲೆಯಲ್ಲಿ ಭಯಾನಕ ಮರಳು ಮಾಫಿಯಾ: ಮಾಜಿ ಶಾಸಕ ಕೆ.ಬಿ.ಪಿ ಆತಂಕ

Share Below Link

ಶಿವಮೊಗ್ಗ: ಶಿವಮೊಗ್ಗ ಜಿಯಲ್ಲಿ ಮರಳು ಮಾಫಿಯಾ ಯಥೇಚ್ಛವಾಗಿ ನಡೆಯುತ್ತಿದ್ದು, ಮತ್ತೊಂದು ಬೆಲೇಕೇರಿ ಹಗರಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆತಂಕ ವ್ಯಕ್ತಪಡಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಯಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೇ ಸಾಗುತ್ತಿದೆ. ಗಣಿ ಮತ್ತು ಭೂ ವಿeನ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸುಮ್ಮನೆ ಕುಳಿ ತಿವೆ. ೨೦೨೫ರ ಜು.೧ರಂದು ೨೨ ಬ್ಲಾಕ್ ಗಳಿಗೆ ಮರಳು ಕ್ವಾರಿಗಳಿಗೆ ಅನುಮತಿ ನೀಡಲಾಗಿತ್ತು. ಆದರೆ, ೧೧ ತಿಂಗಳಾದರೂ ಕೂಡ ಇಲಾಖೆ ಗಳಿಂದ ಇವುಗಳಿಗೆ ಅನುಮತಿ ನೀಡಿದ್ದರೂ ಇನ್ನೂ ಆರಂಭವಾ ಗಿಲ್ಲ. ಇದರ ಪರಿಣಾಮ ಅಕ್ರಮ ಮರಳುಗಾರಿಕೆ ಹೆಚ್ಚಾಗಿದ್ದು, ಇಲ್ಲಿನ ಮರಳು ಇತರೆ ಜಿ ಹಾಗೂ ರಾಜ್ಯಗಳಿಗೂ ಸರಬರಾಜಗುತ್ತಿದೆ ಎಂದರು.


ಮರಳು ಮಾಫಿಯಾದ ಬಗ್ಗೆ ಸ್ಥಳೀಯ ಪತ್ರಿಕೆಗಳು ಸುದ್ದಿ ಮಾಡಿ ದ್ದವು. ಆದರೂ ಕೂಡ ಯಾವ ಅಧಿಕಾರಿಗಳು ಕೂಡ ಸಕ್ರಿಯವಾಗಿಲ್ಲ. ಆದರೆ, ಲೋಕಾಯುಕ್ತರು ಮಾತ್ರ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಮಾಡಿ ದಾಳಿ ನಡೆಸಿದ ಪರಿಣಾಮವಾಗಿ ಸುಮಾರು ೩೭ ಸಾವಿರ ಮೆಟ್ರಿಕ್ ಟನ್ ಅಕ್ರಮ ಮರಳನ್ನು ಪತ್ತೆ ಹಚ್ಚಿದೆ. ಅಂದರೆ ಸುಮಾರು ೪ ಸಾವಿರ ಲಾರಿ ಲೋಡ್ ನಷ್ಟು ಮರಳು ಇದಾಗು ತ್ತದೆ. ಸುಮಾರು ೧೨ ಕೋಟಿ ಬೆಲೆ ಬಾಳಬಹುದಾಗಿದೆ. ಈ ಮರಳನ್ನು ಒಂದು ಕಡೆ ಸಂಗ್ರಹ ಮಾಡಿಡಲಾ ಗಿದೆ. ಆದರೆ ಈ ಸಂಗ್ರಹ ಮಾಡಿದ ಮರಳನ್ನು ಕಾಯುವವರೇ ಇಲ್ಲವಾಗಿದೆ ಎಂದು ದೂರಿದರು.
ಈ ಸಂಗ್ರಹವಾದ ಮರಳು ಎಲ್ಲಿಗೆ ಹೋಗುತ್ತೋ ಗೊತ್ತಿಲ್ಲ. ಆದರೆ, ನಿಧಾನವಾಗಿ ಖಾಲಿಯಾ ಗುವುದಂತೂ ನಿಜ. ಇದನ್ನು ಪೊಲೀಸರಾಗಲೀ, ಅಧಿಕಾರಿಗಳಾ ಗಲೀ ಕಾಯುತ್ತಲೂ ಇಲ್ಲ. ಮತ್ತೊಂದು ಕಡೆ ಸರ್ಕಾರಿ ಕೆಲಸಕ್ಕೆ ಮರಳು ಬೇಕು ಎಂದು ನೆಪ ಹೇಳಿ ಸಾಗಿಸುವ ಕೆಲಸವೂ ನಡೆಯುತ್ತಿದೆ. ಜಿಧಿಕಾರಿಗಳು ಕೂಡ ಇದರ ಜವಾಬ್ದಾರಿ ಹೊರಬೇಕಾಗಿದೆ. ಪೊಲೀಸ್ ಇಲಾಖೆಯಾಗಲಿ, ಗಣಿ ಇಲಾಖೆಯಾಗಲಿ, ಸುಮ್ಮನಿರುವು ದನ್ನು ನೋಡಿದರೆ ಅನುಮಾನ ಗಳು ಹುಟ್ಟಿಕೊಳುತ್ತವೆ ಎಂದರ ಲ್ಲದೇ, ಇದನ್ನೆ ನಿರ್ವಹಿಸ ಬೇಕಾ ಗಿದ್ದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿzರೆ. ಅಕ್ರಮ ಮರಳು ಗಾರಿಕೆ ತಡೆಯಬೇಕಾದವರೇ ಶಾಮೀಲಾಗಿರುವುದರಿಂದ ಇಲಾ ಖೆ ಒಳಗಿನವರೇ ಈ ಅಧಿಕಾರಿ ಗಳನ್ನು ಗೋವಿಂದ ಗೋವಿಂದ ಎಂದು ಹಾಸ್ಯದಲ್ಲಿ ಹೇಳುತ್ತಾರೆ. ಇದು ನಿಜ ಕೂಡ. ಈ ಗೋವಿಂದ ಅಂಡ್ ಗೋವಿಂದ ಕಂಪನಿಯವರು ಇಡೀ ಮರಳನ್ನೇ ಗೋವಿಂದ ಮಾಡಿದರೂ ಕೂಡ ಆಶ್ಚರ್ಯವಿಲ್ಲ ಎಂದರು.


ಈ ರೀತಿಯ ಸಂಗ್ರಹವಾದ ಮರಳು ಮತ್ತೆ ಅನ್ಯರ ಪಾಲಾಗು ವುದರಿಂದ ಇದು ಮತ್ತೊಂದು ಬೆಲೇಕೇರಿ ಪ್ರಕರಣಕ್ಕೆ ಸಾಕ್ಷಿಯಾ ಗಲಿದೆ.
ಅಲ್ಲದೇ, ಅಕ್ರಮ ಮರಳು ಗಾರಿಕೆ ಎಗ್ಗಿಲ್ಲದೇ ನಡೆಯುತ್ತಿರುವು ದರಿಂದ ಸರ್ಕಾರಕ್ಕೆ ಕೋಟಿ ಕೋಟಿ ಹಣ ನಷ್ಟವಾಗುತ್ತಿದೆ. ಇಲಾಖೆ ಗಳು, ಜಿಧಿಕಾರಿಗಳು ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಿವಮೊಗ್ಗ ಜಿಯ ಈ ಅಕ್ರಮ ಮರಳುಗಾರಿಕೆ ಹಗರಣ ಇಡೀ ರಾಜ್ಯದಲ್ಲಿಯೇ ಬಹುದೊಡ್ಡ ಸುದ್ದಿಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದೀಪಕ್ ಸಿಂಗ್, ಹೆಚ್.ಎಂ. ಸಂಗಯ್ಯ, ರಮೇಶ್ ನಾಯ್ಕ್, ವೆಂಕಟೇಶ್, ರಘು, ದಯಾನಂದ್, ಸುನಿಲ್ ಗೌಡ, ಸಂಜಯ್ ಕಶ್ಯಪ್, ರಾಘವೇಂದ್ರ ಉಡುಪ, ಲೋಹಿತ್, ಚಂದ್ರ ಶೇಖರ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *