ರಸ್ತೆ ವಿಭಜಕ ಕಾಮಗಾರಿಗೆ ಜೆಡಿಎಸ್ ವಿರೋಧ…
ಭದ್ರಾವತಿ: ವರನಟ ಡಾ.ರಾಜ ಕುಮಾರ್ ರಸ್ತೆ, ಹಾಲಪ್ಪ ವೃತ್ತದಲ್ಲಿ ನಗರ ಸಭೆಯಿಂದ ರಸ್ತೆ ಮಧ್ಯ ಭಾಗದಲ್ಲಿ ವಿಭಜಕ ನಿರ್ಮಿಸಲಾಗುತ್ತಿದ್ದು, ಜೆಡಿಎಸ್ ಮುಖಂಡರು ಕಾಮಗಾರಿ ಸ್ಥಳದಲ್ಲಿ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.

ಹಾಲಪ್ಪ ವೃತ್ತದಲ್ಲಿ ರಸ್ತೆ ಕಿರಿದಾಗಿದ್ದು, ಈಗಾಗಲೇ ಅಪಘಾತ ಗಳು ಸಂಭವಿಸುತ್ತಿವೆ. ಇಂತಹ ಸ್ಥಳದಲ್ಲಿ ರಸ್ತೆ ವಿಭಜಕ ನಿರ್ಮಿಸು ವುದರಿಂದ ಮತ್ತಷ್ಟು ಅಪಘಾತಗಳು ಹೆಚ್ಚಾಗಲಿವೆ. ರಸ್ತೆ ವಿಭಜಕ ಅವೈeನಿಕವಾಗಿದ್ದು, ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ನೇತೃತ್ವ ದಲ್ಲಿ ಸುಮಾರು ೧ ಗಂಟೆಗೂ ಹೆಚ್ಚು ಸಮಯ ನಗರಸಭೆ ಅಧಿಕಾರಿ ಗ ಳೊಂದಿಗೆ ಮಾತುಕತೆ ನಡೆಸಲಾ ಯಿತು. ಅಂತಿಮವಾಗಿ ಈ ಸಂಬಂಧ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿ, ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದರು.
ಜೆಡಿಎಸ್ ಮಹಿಳಾ ಘಟಕದ ಜಿಧ್ಯಕ್ಷೆ ಗೀತಾ, ನಗರಸಭೆ ಸದಸ್ಯರಾದ ಉದಯ್ ಕುಮಾರ್, ಆರ್. ಮೋಹನ್ ಕುಮಾರ್, ಮುಖಂಡರಾದ ಎಸ್. ಮಧು ಸೂದನ್, ಸುರೇಶ್, ಧರ್ಮ ರಾಜ್, ಎನ್. ರಾಮಕೃಷ್ಣ, ಸಾವಿತ್ರಮ್ಮ ಪುಟ್ಟೇಗೌಡ, ಭಾಗ್ಯಮ್ಮ ಮಂಜುನಾಥ್ ನವೀನ್ ಸ್ಥಳೀಯ ವರ್ತಕರು ಉಪಸ್ಥಿತರಿದ್ದರು.
