ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯಶಸ್ಸಿಗೆ ಕಾರಣರಾದವರನ್ನು ನಾವು ಎಂದಿಗೂ ಮರೆಬಾರದು…

Share Below Link

ಭದ್ರಾವತಿ : ಮನುಷ್ಯ ಜನ್ಮ ಪವಿತ್ರವಾದದ್ದು. ಪ್ರತಿಯೊಬ್ಬರಿಗೂ ಸಾಧಿಸುವ ಛಲವಿದ್ದರೆ ಏನೆ ಅಂದು ಕೊಂಡಿದ್ದು ಸಾಧಿಸಬಹುದು. ಜೊತೆಗೆ ದಡ ಸೇರಿದ ಮೇಲೆ ನಮ್ಮ ಯಶಸ್ಸಿಗೆ ಕಾರಣರಾದವರನ್ನು ಎಂದಿಗೂ ಮರೆಬಾರದೆಂದು ನೂತನವಾಗಿ ಆಯ್ಕೆಯಾದ ನ್ಯಾಯಾಧೀಶೆ ಕುಮಾರಿ ಅನನ್ಯ ಶಾಸ್ತ್ರಿ ಹೇಳಿದರು.


ಅವರು ಜನ್ನಾಪುರದ ಎಸ್.ಜೆ ರಸ್ತೆಯಲ್ಲಿರುವ ಗಾಯತ್ರಿ ಕ್ರೆಡಿಟ್ ಕೋ ಆಪರೇಟೀವ್ ಸೊಸೈಟಿಯ ಆಡಳಿತ ಮಂಡಳಿಯು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾವು ಪಡೆದ ಶಿಕ್ಷಣ, ನೆನಪಿನ ಬುತ್ತಿಯ ಜೊತೆಗೆ ಯಶಸ್ಸಿಗೆ ಕಾರಣರಾದವರನ್ನು ನೆನೆಯುತ್ತಾ ಪೋಷಕರ ಹಾಗೂ ಸಹಾಯ ಹಸ್ತ ನೀಡಿದವರನ್ನು ಸ್ಮರಿಸಿ ಮೆಲಕು ಹಾಕಿ ಮಾತನಾಡಿದರು.
ಸೊಸೈಟಿಯ ಅಧ್ಯಕ್ಷೆ ಶ್ವೇತಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೊಸೈಟಿಯ ಮಾಜಿ ಅಧ್ಯಕ್ಷ ಆನಂದರಾವ್ ವೇದ ಘೋಷ ನಡೆಸಿಕೊಟ್ಟರು. ಉಪಾಧ್ಯಕ್ಷ ಗುರುಪ್ರಸಾದ್, ಕಾರ್ಯದರ್ಶಿ ಎಂ.ವಿ.ಶಶಿದರ್, ನಿರ್ದೇಶಕರುಗಳಾದ ಇಂದ್ರಸೇನರಾವ್, ಶ್ರೀವತ್ಸ, ಜಯತೀರ್ಥ, ಸಂತೋಷ್, ನಿಖಿಲ್, ಮಧುಕೇಶ್, ಪ್ರಗತಿ ಪ್ರಸಾದ್ ಮುಂತಾದವರಿದ್ದರು.

Leave a Reply

Your email address will not be published. Required fields are marked *