ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಮಹಾಸಮರ…
ಶಿವಮೊಗ್ಗ ಮೇ ೧೫: ರಾಜ್ಯದ ಫುಟ್ಬಾಲ್ ಅಭಿಮಾನಿಗಳ ಗಮನ ಸೆಳೆಯುವ ರಾಜ್ಯಮಟ್ಟದ ಅಂತರ ಜಿ ಫುಟ್ಬಾಲ್ ಪಂದ್ಯಾವಳಿಗೆ ಶಿವಮೊಗ್ಗ ನಗರ ಇದೀಗ ಸಜ್ಜಾಗಿದೆ. ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ, ಶಿವಮೊಗ್ಗ ಜಿ ಫುಟ್ಬಾಲ್ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮೇ ೧೬, ೧೭, ೨೨, ೨೩ ಮತ್ತು ೨೪ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಅಂತರ ಜಿ ಫುಟ್ಬಾಲ್ ಪಂದ್ಯಾವಳಿಗಳು ನಡೆಯಲಿವೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಸಂಸ್ಥೆಯ ಪೋಷಕರೂ ಆದ ವಿಧಾನ ಪರಿಷತ್ ಸದಸ್ಯ ಡಾ| ಧನಂಜಯ ಸರ್ಜಿ ಅವರು, ಮೇ ೧೬ರ ನಾಳೆ ಬೆಳಿಗ್ಗೆ ೭.೩೦ಕ್ಕೆ ಮೊದಲ ಪಂದ್ಯಕ್ಕೆ ಚಾಲನೆ ದೊರೆಯಲಿದ್ದು, ಅದೇ ದಿನ ಸಂಜೆ ೪ ಗಂಟೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಮುಖ್ಯ ಅತಿಥಿಗಳಾಗಿ ಜಿ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಹಾಗೂ ಬೆಂಗಳೂರು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್, ಅರಗ eನೇಂದ್ರ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಲ್ಕೀಶ್ ಬಾನು, ಗೋಪಾಲಕೃಷ್ಣ ಬೇಳೂರು, ಎಂ.ಎ.ಡಿ.ಬಿ. ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಪ್ರಮುಖರಾದ ಆಯನೂರು ಮಂಜುನಾಥ್, ಕೆ.ಬಿ.ಪ್ರಸನ್ನಕುಮಾರ್, ಎಂ.ಶ್ರೀಕಾಂತ್ ಮೊದಲಾದವರು ಆಗಮಿಸಲಿzರೆ. ಅಧ್ಯಕ್ಷತೆಯನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ವಹಿಸಲಿzರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಫುಟ್ಬಾಲ್ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ನಗರದ ಹಿರಿಯ ಪುಟ್‌ಬಾಲ್ ಕ್ರೀಡಾಪಟುಗಳಾದ ಮೊಹಮ್ಮದ್ ದಾದಾಪೀರ್ ಹಾಗೂ ವಿಕ್ಟರ್ ಡಿಸೋಜಾ ಅವರನ್ನು ಜೀವಮಾನ ಸಾಧನೆಗಾಗಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ರಾಜ್ಯದ ವಿವಿಧ ಜಿಗಳ ಶ್ರೇಷ್ಠ ತಂಡಗಳು ಭಾಗವಹಿಸುತ್ತಿರು ವುದರಿಂದ ಕ್ರೀಡಾಭಿಮಾನಿಗಳಿಗೆ ಉನ್ನತ ಮಟ್ಟದ ಪೈಪೋಟಿ ನೋಡುವ ಅವಕಾಶ ದೊರೆಯಲಿದೆ ಎಂದರಲ್ಲದೇ, ವಿಜಯಪುರ, ಬೆಳಗಾವಿ, ಹಾವೇರಿ, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಈ ಆರು ಜಿಗಳಿಂದ ಕ್ರೀಡಾಪಟುಗಳು ಆಗಮಿಸಿ, ಪರಸ್ಪರ ಮುಖಾಮುಖಿಯಾಗಲಿzರೆ ಎಂದರು.
ಪಂದ್ಯಾವಳಿಯನ್ನು ರೌಂಡ್ ರಾಬಿನ್ ಮಾದರಿಯಲ್ಲಿ ಆಯೋಜಿಸಲಾಗಿದ್ದು, ಪ್ರತಿಯೊಂದು ತಂಡವೂ ಪರಸ್ಪರ ಮುಖಾಮುಖಿಯಾಗಲಿದೆ. ಈ ವಿನೂತನ ಮಾದರಿಯಿಂದ ಸ್ಪರ್ಧೆ ಇನ್ನಷ್ಟು ರೋಚಕವಾಗಲಿದ್ದು, ಪ್ರತೀ ತಂಡಕ್ಕೂ ತಮ್ಮ ಸಾಮರ್ಥ್ಯ ತೋರಿಸಲು ಸಮಾನ ಅವಕಾಶ ದೊರೆಯಲಿದೆ ಎಂಬ ವಿಶ್ವಾಸವನ್ನು ಸಂಘಟಕರು ವ್ಯಕ್ತಪಡಿಸಿದರು.
ವಿವಿಧ ದಿನಗಳಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಶಿವಮೊಗ್ಗ ಜಿ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಶ್ರೀನಾಥ್ ಎಸ್.ಆರ್., ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷ ಕೆ.ರಂಗನಾಥ್, ರಾಜ್ಯ ಜವಳಿ ನಿಗಮದ ಅಧ್ಯಕ್ಷ ಕೆ.ಚೇತನ್‌ಗೌಡ, ಪ್ರಮುಖರಾದ ಎಸ್.ರುದ್ರೇಗೌಡ, ಹೆಚ್.ಎಸ್. ಸುಂದರೇಶ್, ಉಪವಿಭಾಗಾಧಿಕಾರಿ ಜಿ.ಹೆಚ್.ಸತ್ಯನಾರಾಯಣ, ತಹಶೀಲ್ದಾರ್ ರಾಜೀವ್ ವಿ.ಎಸ್., ಪೌರಾಯುಕ್ತ ಮಾಯಣ್ಣಗೌಡ ಮೊದಲಾದವರು ಭಾಗವಹಿಸಲಿzರೆ ಎಂದರು.

ಪ್ರಪಂಚದಲ್ಲಿ ಅತೀ ಹೆಚ್ಚು ಇಷ್ಟಪಡುವವರ ಕ್ರೀಡೆ ಫುಟ್‌ಬಾಲ್ ಆಗಿದ್ದು, ೫೦೦ ಕೋಟಿಗೂ ಹೆಚ್ಚು ಜನ ಇದನ್ನು ವೀಕ್ಷಣೆ ಮಾಡುತ್ತಾರೆ. ೩೦ ವರ್ಷಗಳ ನಂತರ ಈ ಪಂದ್ಯಾವಳಿ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಇನ್ನೂ ಈ ಕ್ರೀಡೆಗೆ ಪ್ರತ್ಯೇಕ ಮೈದಾನವಿಲ್ಲ. ಸಾಗರ ರಸ್ತೆಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿರುವ ಹಾಕಿ ಗ್ರೌಂಡಿನ ಪಕ್ಕೆ ಫುಟ್‌ಬಾಲ್ ಆಟಕ್ಕೆ ಜಗ ಗುರುತಿಸಲಾಗಿದೆ. ಆದಷ್ಟು ಬೇಗ ಈ ಜಗವನ್ನು ಫುಟ್‌ಬಾಲ್‌ಗೆ ಉಪಯೋಗಿಸುವ ಪ್ರಯತ್ನ ನಡೆದಿದೆ. ಸಂಸದ ಬಿ.ವೈ.ರಾಘವೇಂದ್ರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿzರೆ ಎಂದು ಡಾ| ಸರ್ಜಿ ಅವರು ವಿವರಿಸಿದರು.
೧೯೭೫ರಲ್ಲಿ ಸ್ಥಾಪಿತವಾದ ಶಿವಮೊಗ್ಗ ಜಿ ಫುಟ್ಬಾಲ್ ಸಂಸ್ಥೆಯು ಐದು ದಶಕಗಳ ಸುದೀರ್ಘ ಹಾಗೂ ಸಮೃದ್ಧ ಇತಿಹಾಸವನ್ನು ಹೊಂದಿದೆ. ಸಂಸ್ಥೆಯ ಆಶ್ರಯದಲ್ಲಿ ಬೆಳೆದ ಅನೇಕ ಪ್ರತಿಭೆಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಶಿವಮೊಗ್ಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪ್ರಸ್ತುತ ಜಿಯಾದ್ಯಂತ ೧೮ ಫುಟ್ಬಾಲ್ ಕ್ಲಬ್‌ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಭಾಗಗಳಲ್ಲಿಯೂ ಫುಟ್ಬಾಲ್ ಕ್ರೀಡೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.
ಮೇ ೨೪ರಂದು ಮಧ್ಯಾಹ್ನ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕಿ ಶಾರದಾಪೂರ್‍ಯಾನಾಯ್ಕ್, ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಜಿ ರಕ್ಷಣಾಧಿಕಾರಿ ನಿಖಿಲ್ ಬಿ., ಅಪರ ಜಿಧಿಕಾರಿ ಅಭಿಷೇಕ್, ಮಾಜಿ ಶಾಸಕ ಆರ್.ಕೆ.ಸಿದ್ದರಾಮಣ್ಣ, ಪ್ರಮುಖರಾದ ಹೆಚ್.ಸಿ.ಯೋಗೀಶ್, ಕೆ.ಈ. ಕಾಂತೇಶ್, ಖಲೀಂಪಾಷಾ ಮೊದಲಾದವರು ಉಪಸ್ಥಿತರಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ವಿನ್ಸೆಂಟ್ ರೋಡ್ರಿಗಸ್, ಕಿರಣ್ ಫರ್ನಾಂಡಿಸ್, ಶಿವರಾಜ್, ಸುಸೈನಾದನ್, ಮೈಕಲ್ ಕಿರಣ್, ಕ್ಲೆಮೆಂಟ್ ರಾಯನ್, ಸೂಲಯ್ಯ, ವಿಜಯ್, ರಾಮರಾವ್ ಪವಾರ್, ಎಸ್.ಆರ್. ಶ್ರೀನಾಥ್, ಹರ್ಷಾ ಭೋವಿ, ಆರೀಫ್ ಸೇರಿದಂತೆ ಇನ್ನಿತರ ಪ್ರಮುಖರು ಹಾಗೂ ಪುಟ್‌ಬಾಲ್ ಕ್ರೀಡಾಪಟುಗಳು ಉಪಸ್ಥಿತರಿದ್ದರು.
