ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಅಭ್ಯಾಸವೇ ಯಶಸ್ಸಿನ ಮಂತ್ರ…

Share Below Link

ಡಾ.ಸುಧಾಕರ.ಜಿ.ಲಕ್ಕವಳ್ಳಿ.

ಇಂದಿನ ತಾಂತ್ರಿಕ ಯುಗದಲ್ಲಿ ಯುವಜನತೆಯ ಏಕಾಗ್ರತೆಯ ಕೇಂದ್ರಬಿಂದು ಬದಲಾಗಿದೆ. ಪುಸ್ತಕದ ಪುಟಗಳ ಮೇಲೆ ಇರಬೇಕಾದ ದೃಷ್ಟಿ ಇಂದು ಮೊಬೈಲ್ ಸ್ಕ್ರೀನ್ ಮೇಲೆ ನೆಟ್ಟಿದೆ.ಬೆರಳ ತುದಿಯಲ್ಲಿ ಇಡೀ ಜಗತ್ತೇ ಲಭ್ಯವಿದೆ ಎಂಬ ಭ್ರಮೆಯಲ್ಲಿರುವ ಯುವಜನತೆಗೆ ಒಂದು ಕಟು ಸತ್ಯದ ಅರಿವಾಗಬೇಕಿದೆ ಮೊಬೈಲ್ ನಿನ್ನನ್ನು ತಲೆ ಎತ್ತದಂತೆ ಮಾಡುತ್ತದೆ, ಆದರೆ ಪುಸ್ತಕ ನಿನ್ನನ್ನು ಸಮಾಜದಲ್ಲಿ ತಲೆ ಎತ್ತುವಂತೆ ಮಾಡುತ್ತದೆ. ನಾವು ಸ್ಕ್ರೀನ್ ಮೇಲೆ ಕಳೆಯುವ ಪ್ರತಿ ಕ್ಷಣವೂ ನಮ್ಮ ಆಳವಾದ ಚಿಂತನಾ ಶಕ್ತಿಯನ್ನು ಕ್ಷೀಣಿಸುತ್ತಿದೆ.
ಅಭ್ಯಾಸ ಮತ್ತು ಏಕಾಗ್ರತೆಯ ಮಹತ್ವವನ್ನು ವಿವರಿಸಲು ಶ್ರೀ ರಾಮಕೃಷ್ಣ ಪರಮಹಂಸರು ನೀಡುತ್ತಿದ್ದ ಮೀನುಗಾರನ ದೃಷ್ಟಾಂತ ಇಂದಿನ ಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಸಾಧಕನೊಬ್ಬ ಸ್ವಾಮಿ, ಮನಸ್ಸು ಚಂಚಲವಾಗುತ್ತಿದೆ, ಗುರಿ ಮುಟ್ಟಲು ಸಾಧ್ಯವೇ? ಎಂದು ಕೇಳಿದಾಗ, ಪರಮಹಂಸರು ಹೇಳಿದರು: ನೋಡು ಮಗು, ನದಿಯ ದಂಡೆಯ ಮೇಲೆ ಗಾಳ ಹಾಕಿ ಕುಳಿತುಕೊಳ್ಳುವ ಮೀನುಗಾರನನ್ನು ಗಮನಿಸು. ಅವನ ದೃಷ್ಟಿ ಕೇವಲ ನೀರಿನ ಮೇಲಿರುವ ಆ ಸಣ್ಣ ಬುರುಡೆಯ ಮೇಲಿರುತ್ತದೆ. ಸುತ್ತಮುತ್ತಲಿನ ಯಾವುದೇ ಗದ್ದಲ ಅವನ ಏಕಾಗ್ರತೆಯನ್ನು ಭಂಗಗೊಳಿ ಸುವುದಿಲ್ಲ. ಮೊದಲ ದಿನ ಅವನಿಗೆ ಈ ತಾಳ್ಮೆ ಇರಲಿಲ್ಲ, ಆದರೆ ದಿನಂಪ್ರತಿ ಮಾಡಿದ ಸತತ ‘ಅಭ್ಯಾಸ’ ಅವನಿಗೆ ನೀರಿನ ಒಳಗಿನ ಮೀನಿನ ಸಣ್ಣ ಚಲನೆ ಯನ್ನೂ ಗ್ರಹಿಸುವ ಶಕ್ತಿ ನೀಡಿದೆ.


ಇಂದು ಯುವಜನತೆ ಮೊಬೈಲ್ ನೋಟಿಫಿಕೇಶನ್‌ಗಳ ಗದ್ದಲದಲ್ಲಿ ಈ ಮೀನುಗಾರ ನಂತಹ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದೆ. ಅಭ್ಯಾಸವು ಸ್ಕ್ರೀನ್ ಮೇಲೆ ಸ್ಕ್ರೋಲ್ ಮಾಡುವುದಲ್ಲ, eನವನ್ನು ಮಥಿಸುವುದಾಗಬೇಕು.
ಮೊಬೈಲ್ ಪರದೆಯ ಮೇಲಿನ ಏಕಾಗ್ರತೆಯು ಕೇವಲ ದೃಶ್ಯಗಳ ಆಕರ್ಷಣೆಯಷ್ಟೇ. ಇದು ಮೆದುಳನ್ನು ಆಲಸಿ ಮಾಡುತ್ತದೆ ಮತ್ತು ಮಾಹಿತಿಯ ಕಸದ ಬುಟ್ಟಿಯನ್ನಾಗಿ ಬದಲಿಸುತ್ತದೆ. ಆದರೆ ಪುಸ್ತಕದ ಓದು ಮೆದುಳನ್ನು ಸಕ್ರಿಯಗೊಳಿಸುತ್ತದೆ. ಹಾಲನ್ನು ಮಥಿಸಿದಾಗ ಮಾತ್ರ ಬೆಣ್ಣೆ ಬರುವಂತೆ, ನಿರಂತರ ಓದು ಮತ್ತು ಅಭ್ಯಾಸದ ಮೂಲಕ ಮಿದುಳನ್ನು ಮಥಿಸಿದಾಗ ಮಾತ್ರ ಅಸಾಧಾರಣ ಆಲೋಚನೆಗಳು ಹುಟ್ಟುತ್ತವೆ. ನಿರಂತರ ಓದು ಮತ್ತು eನದ ಹಸಿವು ನಿಮ್ಮನ್ನು ಸಾಧಾರಣದಿಂದ ಅಸಾಧಾರಣ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂಬ ಮಾತು ಇಂದಿನ ಡಿಜಿಟಲ್ ದಾಸ್ಯದಿಂದ ಬಿಡುಗಡೆ ಹೊಂದಲು ಇರುವ ಏಕೈಕ ಮಂತ್ರ.
ಯುವ ಸ್ನೇಹಿತರೇ, ಮೊಬೈಲ್ ನಿಮ್ಮನ್ನು ಕೇವಲ ಗ್ರಾಹಕರನ್ನಾಗಿ ಮಾಡುತ್ತದೆ, ಆದರೆ ಪುಸ್ತಕಗಳು ನಿಮ್ಮನ್ನು ನಾಯಕರನ್ನಾಗಿ ರೂಪಿಸುತ್ತವೆ. ಪರಿಶ್ರಮ ಪಡಲು ಸಿದ್ಧವಿರು ವವನಿಗೆ ಶಾರ್ಟ್‌ಕಟ್‌ಗಳ ಅಗತ್ಯವಿರುವುದಿಲ್ಲ. ಅಭ್ಯಾಸ ಎನ್ನುವುದು ಕೇವಲ ಪರೀಕ್ಷೆಗಾಗಿ ಮಾಡುವ ಕೆಲಸವಲ್ಲ, ಅದು ನಿಮ್ಮ ಅಂತರಂಗದ ಶಕ್ತಿಯನ್ನು ವೃದ್ಧಿಸುವ ತಪಸ್ಸು. ತಲೆ ತಗ್ಗಿಸಿ ಮೊಬೈಲ್ ನೋಡುವುದರಿಂದ eನ ಸಿಗಲಾರದು, ಅದು ಕೇವಲ ಮಾಹಿತಿಯಷ್ಟೇ. ಪುಸ್ತಕದ ಸಹವಾಸ ಮಾಡಿ ಅರಿವನ್ನು ಹೆಚ್ಚಿಸಿಕೊಂಡರೆ ಮಾತ್ರ ನೀವು ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲಲು ಸಾಧ್ಯ.
ನಿಮ್ಮ ಕೈಲಿರುವ ತಂತ್ರeನವು ನಿಮ್ಮ ಅಭಿವೃದ್ಧಿಗೆ ಸಾಧನವಾಗಲಿ, ಅದು ನಿಮ್ಮ ವ್ಯಕ್ತಿತ್ವವನ್ನು ನುಂಗುವ ರಾಕ್ಷಸನಾಗದಿರಲಿ. ದಿನದ ಅಮೂಲ್ಯ ಸಮಯವನ್ನು ವ್ಯರ್ಥ ದೃಶ್ಯಗಳಿಗಾಗಿ ಕಳೆಯುವ ಬದಲು, ಶ್ರೇಷ್ಠ ಸಾಹಿತ್ಯ ಮತ್ತು ಕೌಶಲಗಳ ಅಭ್ಯಾಸಕ್ಕೆ ಮೀಸಲಿಡಿ. ಪರಿಶ್ರಮಕ್ಕೆ ಮಿಗಿಲಾದ ದಾರಿ ಯಾವುದೂ ಇಲ್ಲ. ಸತತ ಪ್ರಯತ್ನವಿದ್ದರೆ ಮಾತ್ರ ಸಾಧಾರಣ ವಿದ್ಯಾರ್ಥಿ ಯೂ ಅಸಾಧಾರಣ ಸಾಧಕನಾಗಬಲ್ಲ. ನೆನಪಿಡಿ, ಸ್ಕ್ರೀನ್ ಮೇಲಿನ ಬೆರಳುಗಳ ಓಟಕ್ಕಿಂತ, ಪುಸ್ತಕದ ಪುಟಗಳ ಮೇಲಿನ ಮನಸ್ಸಿನ ಪಯಣ ಶ್ರೇಷ್ಠವಾದುದು.
ಅಭ್ಯಾಸವೇ ಯಶಸ್ಸಿನ ಮಂತ್ರ. ನಿಮ್ಮ ಜೀವನದ ಗುರಿಯನ್ನು ತಲುಪಲು ಪರಮಹಂಸರು ತೋರಿಸಿಕೊಟ್ಟ ಆ ಮನ ಏಕಾಗ್ರತೆಯನ್ನು ಮೈಗೂಡಿಸಿಕೊಳ್ಳಿ. ಮೊಬೈಲ್‌ನ ಮಾಯೆಯಿಂದ ಹೊರಬಂದು ಪುಸ್ತಕದ eನದ ಬೆಳಕಿನತ್ತ ನಡೆಯಿರಿ. eನದ ಹಸಿವು ನಿಮ್ಮ ಉಸಿರಾಗಲಿ, ನಿರಂತರ ಪರಿಶ್ರಮ ನಿಮ್ಮ ಬದುಕಿನ ಶಕ್ತಿಯಾಗಲಿ. ಆಗ ಮಾತ್ರ ನಿಮ್ಮ ಸಾಧನೆಯೇ ನಿಮ್ಮ ವ್ಯಕ್ತಿತ್ವದ ನಿಜವಾದ ಪರಿಚಯವಾಗುತ್ತದೆ.