ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪಿಯು ಫಲಿತಾಂಶ: ರಾಜ್ಯದಲ್ಲಿ ೪ನೇ ಸ್ಥಾನಕ್ಕೇರಿದ ಶಿವಮೊಗ್ಗದ ಪೇಸ್ ಕಾಲೇಜ್…

Share Below Link

ಶಿವಮೊಗ್ಗ : ಪೇಸ್ ಯು.ಎಂ.ಪಿ.ಯು. ಕಾಲೇಜಿನಲ್ಲಿ ಈ ಬಾರಿ ೨೦೨೫-೨೬ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ೯೯.೪೨ ಆಗಿದ್ದು, ಜಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯದ ೪ನೇ ಸ್ಥಾನ ಪಡೆದಿದೆ ಮುಂದಿನ ದಿನಗಳಲ್ಲಿ ರಾಜ್ಯದ ಪ್ರಥಮ ಸ್ಥಾನ ಪಡೆಯಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿzರೆ.
ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರಯತ್ನದಿಂದ ಉತ್ತಮ ಫಲಿತಾಂಶ ಬಂದಿದೆ. ಹೆಚ್ಚಿನ ಸಾಧನೆ ಮಾಡಿದ ಎ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪರವಾಗಿ ಅಭಿನಂದಿಸಿದರು.
ಸಂಸ್ಥೆಯ ಖಜಾಂಚಿ ಕೆ.ಈ. ಕಾಂತೇಶ್ ಮಾತನಾಡಿ, ಒಟ್ಟಿಗೆ ೬೯೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೬೯೩ ವಿದ್ಯಾರ್ಥಿ ಗಳು ಪಾಸಾಗಿದ್ದು, ಅದರಲ್ಲಿ ಅತ್ಯುತ್ತಮ ಶ್ರೇಣಿ ೪೭೯, ಪ್ರಥಮ ದರ್ಜೆ ೨೧೦, ದ್ವಿತೀಯ ದರ್ಜೆ ೪ ವಿದ್ಯಾರ್ಥಿಗಳು ಪಾಸಾಗಿzರೆ. ಹಿಂದಿ-೨, ಸಂಸ್ಕೃತ-೫೦, ಭೌತಶಾಸ್ತ್ರ-೧೨, ರಾಸಾಯನ ಶಾಸ್ತ್ರ-೦೧, ಗಣಿತಶಾಸ್ತ್ರ-೪೦, ಜೀವಶಾಸ್ತ್ರ-೫, ಕಂಪ್ಯೂಟರ್ ಸೈನ್ಸ್‌ನಲ್ಲಿ-೩೭ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕಗಳನ್ನು ಗಳಿಸಿ zರೆ. ನಮ್ಮ ಈ ಸಾಧನೆಯ ವಿಶೇಷವೇನೆಂದರೆ ನಮ್ಮ ಕಾಲೇಜಿನ ಮಕ್ಕಳಿಗೆ ಟ್ಯೂಷನ್‌ಗೆ ಹೋಗುವ ಅಗತ್ಯವೇ ಇರುವು ದಿಲ್ಲ. ನಮ್ಮ ಎ ಸೌಲಭ್ಯ ಮತ್ತು ಮಾರ್ಗದರ್ಶನ ಸಿಗುವುದರಿಂದ ಹೊರಗಡೆ ಹೋಗುವ ಅವಕಾಶವೇ ಇಲ್ಲ. ಆದ್ದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದರು.
ಮಹೀನ್ ಖಾನಮ್ ಅಫ್ರಿದಿ ೬೦೦ಕ್ಕೆ ೫೯೬ ಅಂಕ ಪಡೆದಿದ್ದು, ಜಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ೪ನೇ ಸ್ಥಾನ ಪಡೆದಿzಳೆ.
ಸಾದ್ವಿ ಎಂ.ಎಸ್. ೫೯೪ ಅಂಕ ಪಡೆದು ಜಿಗೆ ತೃತೀಯ ಹಾಗೂ ರಾಜ್ಯಕ್ಕೆ ೬ನೇ ಸ್ಥಾನ ಪಡೆದಿzಳೆ. ಅಂಕಿತ್ ಯು.ವಿ. ೫೮೯, ಧೃತಿ ಹೆಚ್. ಭಟ್ ೫೮೯, ಸಿಂಚನ ಪಿ.ಓ. ೫೮೯ ಅಂಕಗಳಿಸಿ ಕಾಲೇಜಿಗೆ ೩ನೇ ಸ್ಥಾನ ಪಡೆದಿzರೆ ಎಂದರು.
ಆನಂದ್ ಮಾತನಾಡಿ, ಕೆ.ಎಸ್. ಈಶ್ವರಪ್ಪ ಮತ್ತು ಕೆ.ಈ. ಕಾಂತೇಶ್ ಆಡಳಿತಾತ್ಮಕವಾಗಿ ಸಂಪೂರ್ಣ ಸಹಕಾರ ನೀಡಿ, ಶೈಕ್ಷಣಿಕ ಮಾರ್ಗದರ್ಶನ, ಸಲಹೆ- ಸೂಚನೆ ನೀಡುತ್ತಾ ಬಂದಿದ್ದರಿಂದ ಮತ್ತು ಪೂರ್ಣ ಸ್ವಾತಂತ್ರ್ಯ ನೀಡಿದ್ದರಿಂದ ಕಾಲೇಜು ಯಶಸ್ವಿ ಯಾಗಿ ಉತ್ತಮ ಉಪನ್ಯಾಸಕರ ಸಹಕಾರದಿಂದ ಈ ಹಂತ ತಲು ಪಲು ಸಾಧ್ಯವಾಗಿದೆ ಎಂದರು.
ಹೆಚ್ಚಿನ ಅಂಕಗಳಿಸಿದ ಮಹೀನ್ ಖಾನಮ್ ಅಫ್ರಿದಿ ಮಾತನಾಡಿ, ಕಾಲೇಜಿ ನಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಎ ಉಪನ್ಯಾಸಕರ ಉತ್ತಮ ಮಾರ್ಗದರ್ಶನ ಸಲಹೆ ಮತ್ತು ನಮಗೆ ಯಾವುದೇ ಅನುಮಾನವಿದ್ದರೂ ವಿಶೇಷವಾಗಿ ಕರೆದು ಮಾರ್ಗದರ್ಶನ ನೀಡಿದ್ದರಿಂದ ನನಗೆ ಉತ್ತಮ ಅಂಕ ಪಡೆಯಲು ಸಾಧ್ಯವಾ ಯಿತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ| ವಿಶ್ವನಾಥಯ್ಯ ಹಾಗೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.