ಹೆಜ್ಜೇನು ದಾಳಿ: ಗುಡ್ ಫ್ರೈಡೇ ಪ್ರಾರ್ಥನೆ ವೇಳೆ ಶಿವಮೊಗ್ಗದಲ್ಲಿ ನೂರಾರು ಭಕ್ತರಿಗೆ ಗಾಯ
ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಇಂದು ನಡೆದ ಗುಡ್ ಫ್ರೈಡೇ ವಿಶೇಷ ಪ್ರಾರ್ಥನೆ ವೇಳೆ ಅನಿರೀಕ್ಷಿತ ವಾಗಿ ಹೆಜ್ಜೇನು ದಾಳಿ ಸಂಭವಿಸಿ ನೂರಾರು ಭಕ್ತರು ಗಾಯಗೊಂಡ ಘಟನೆ ಆತಂಕಕ್ಕೆ ಕಾರಣವಾಗಿದೆ.
ಗುಡ್ ಫ್ರೈಡೇ ಅಂಗವಾಗಿ ಶಿಲುಬೆ ಹಾದಿ ಪ್ರಾರ್ಥನೆಗಾಗಿ ಸಾವಿರಾರು ಭಕ್ತರು ಚರ್ಚ್ ಆವರಣದಲ್ಲಿ ಸೇರಿದ್ದರು. ಪ್ರಾರ್ಥನೆ ಮಧ್ಯದ ಏಕಾಏಕಿ ಹೆಜ್ಜೇನುಗಳ ಗುಂಪು ಭಕ್ತರ ಮೇಲೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿ ಗೊಂದಲ ಮತ್ತು ಭೀತಿ ಉಂಟಾಯಿತು. ತಕ್ಷಣವೇ ಜನರು ತಮ್ಮ ಜೀವ ರಕ್ಷಣೆಗಾಗಿ ಚರ್ಚ್ ಒಳಾಂಗಣಕ್ಕೆ ಓಡಿ ಹೋಗಿ ಬಾಗಿಲು ಮುಚ್ಚಿ ಕೊಂಡರು.
ಈ ದಾಳಿಯಲ್ಲಿ ನೂರಾರು ಭಕ್ತರು ಹೆಜ್ಜೇನು ಕಚ್ಚುವಿಕೆಗೆ ಒಳಗಾಗಿ ಗಾಯಗೊಂಡಿzರೆ. ಗಾಯಾಳುಗಳನ್ನು ತಕ್ಷಣವೇ ಆಂಬು ಲೆನ್ಸ್‌ಗಳ ಮೂಲಕ ಸಮೀಪದ ಅಶೋಕ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಚರ್ಚ್‌ನ ಫಾದರ್‌ಗೂ ಹೆಜ್ಜೇನು ದಾಳಿ ನಡೆಸಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ zರೆ. ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಿಬ್ಬಂದಿ ಮತ್ತು ಯುವಕರು ಹೊಗೆ ಹಾಕಿ ಹೆಜ್ಜೇನುಗಳನ್ನು ಓಡಿಸುವ ಕಾರ್ಯಾಚರಣೆ ಕೈಗೊಂಡರು.
ಘಟನೆಯ ಹಿನ್ನೆಲೆಯಲ್ಲಿ ಹೊರಾಂಗಣದಲ್ಲಿ ನಡೆಯುತ್ತಿದ್ದ ಶಿಲುಬೆ ಹಾದಿ ಪ್ರಾರ್ಥನೆಯನ್ನು ಮಧ್ಯದ ಸ್ಥಗಿತಗೊಳಿಸಲಾ ಯಿತು. ಆದರೂ ಭಕ್ತರು ಧೈರ್ಯ ಕಳೆದುಕೊಳ್ಳದೆ ಚರ್ಚ್ ಒಳಾಂಗಣದಲ್ಲಿ ಪ್ರಾರ್ಥನೆಯನ್ನು ಪೂರ್ಣಗೊಳಿಸಿದರು. ಘಟನೆ ಸ್ಥಳಕ್ಕೆ ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
