ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಹಗಲಿರುಳು ದುಡಿಯುವ ಹೆಣ್ಣು ಚೈತನ್ಯ ಮೂರ್ತಿಯಾಗಿದ್ದಾಳೆ: ಕವಿತಾ

Share Below Link

ಶಿಕಾರಿಪುರ : ಮಹಿಳೆ ತಾಳ್ಮೆ, ಸಹನೆ, ಸಂಸ್ಕೃತಿ, ಭದ್ರತೆ, ಸ್ಪೂರ್ತಿಯ ಸೆಲೆಯಾಗಿ ಸಮಾಜದ ಎ ಕ್ಷೇತ್ರ ಗಳಲ್ಲಿಯೂ ತನ್ನನ್ನು ಗುರುತಿಸಿ ಕೊಂಡು ಮನೆ, ಶಾಲೆಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿ ಕೊಂಡು ಬೆಳೆಸುವ ವಿಶಾಲ ಗುಣವನ್ನು ಹೊಂದಿzಳೆ ಎಂದು ಇಲ್ಲಿನ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ, ಕವಿತಾ ಸುಽಂದ್ರ ತಿಳಿಸಿದರು.
ಪಟ್ಟಣದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಕುಟುಂಬದ ಎ ಭಾರವನ್ನು ಹೊತ್ತುಕೊಂಡು ಅವಿರತವಾಗಿ ಹಗಲಿರುಳು ದುಡಿಯುವ ಒಂದು ಚೈತನ್ಯ ಮೂರ್ತಿಯಾಗಿದ್ದು, ಕುಟುಂಬ ದಲ್ಲಿ ಪುರುಷ ಜವಾಬ್ದಾರಿಯನ್ನು ಮರೆತು ಜೀವಿಸಬಹುದು ಆದರೆ ಹೆಣ್ಣು ಮಾತ್ರ ಎಲ್ಲ ಸಮಸ್ಯೆಗಳನ್ನು ಎದುರಿಸಿಕೊಂಡು ಮನಃಸಾಕ್ಷಿ ಪರವಾಗಿ ಗಂಡ, ಮಕ್ಕಳು, ಅಣ್ಣ, ತಮ್ಮ, ಅಕ್ಕ, ತಾಯಿ, ತಂದೆ ಪರವಾಗಿ ಪಾತ್ರಗಳನ್ನು ನಿರ್ವಹಿಸಿ ಎಲ್ಲರನ್ನು ನಗುವಿನಿಂದ ನೋಡಿಕೊಳ್ಳುವ ಹಾಗೂ ಉತ್ತಮ ವಾತಾವರಣವನ್ನು ರೂಪಿಸುವ ವಿಶಾಲ ಗುಣ ಹೊಂದಿzಳೆ. ಆದ್ದರಿಂದ ಅವಳ ಈ ನಿಸ್ವಾರ್ಥ ಸೇವೆಯನ್ನು ಸ್ಮರಿಸಲು ಮಹಿಳಾ ದಿನಾಚರಣೆ ಅತ್ಯಂತ ಸೂಕ್ತ ಸಂದರ್ಭವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಶಿವಕುಮಾರ್ ಜಿ ಎಸ್, ಉತ್ತಮ ಸಮಾಜ ನಿರ್ಮಾಣದಲ್ಲಿ ಹೆಣ್ಣಿನ ಪಾತ್ರ ಬಹಳ ಮುಖ್ಯವಾಗಿದೆ. ಮಹಿಳೆಗೆ ಅವಕಾಶದ ಜತೆಗೆ ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ರಮ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿ,ನವ್ಯ ಎಸ್.ಪಿ ಸ್ವಾಗತಿಸಿ, ವಂದನಾ ನಿರೂಪಿಸಿ, ಸಿಂಧು ವಂದಿಸಿದರು.