ಭದ್ರಾವತಿ: ರಸ್ತೆ ಅಗಲೀಕರಣಕ್ಕೆ ಅಽಕಾರಿಗಳಿಂದ ಕಟ್ಟಡಗಳ ಮೇಲೆ ಮಾರ್ಕಿಂಗ್…
ಭದ್ರಾವತಿ : ನಗರದ ಚನ್ನಗಿರಿ ರಸ್ತೆ ಆಗಲಿಕರಣಕ್ಕೆ ನಗರಸಭೆ ಅಽಕಾರಿಗಳು ಮತ್ತು ಸಿಬ್ಬಂದಿಗಳು ರಸ್ತೆಯ ಅಕ್ಕಪಕ್ಕದ ಕಟ್ಟಡಗಳನ್ನು ನಗರಸಭೆಯ ಖಾತೆಯಲ್ಲಿರುವ ಸ್ವತ್ತಿನ ಮಾಲೀಕರುಗಳ ಖಾತೆಯ ಆಧಾರದ ಮೇಲೆ ಕಟ್ಟಡಗಳ ಮೇಲೆ ಕೆಂಪು ಬಣ್ಣದ ಗುರುತು ಮಾಡಿದರು.
ಈ ಬಗ್ಗೆ ಕಟ್ಟಡಗಳ ಮಾಲೀಕರು, ಬಾಡಿಗೆದಾರರು ಯಾವ ಆಧಾರದ ಮೇಲೆ ಯಾವ ರೀತಿಯಲ್ಲಿ ಗುರುತು ಮಾಡುತ್ತಿ ದ್ದೀರಾ ಎಷ್ಟು ಅಡಿ ಕಟ್ಟಡವನ್ನು ತೆರವು ಮಾಡಬೇಕು ಎಂಬಿತ್ಯಾದಿ ಪ್ರರ್ಶನೆಗಳಿಗೆ ಅಽಕಾರಿಗಳು ಸಮಂಜಸವಾದ ಉತ್ತರ ನೀಡಲಿಲ್ಲ. ಆದ ಕಾರಣ ಅಳತೆ ಮಾಡಿ ಮಾರ್ಕ್ ಮಾಡಲು ಬಂದಿದ್ದ ಸಿಬ್ಬಂದಿಗಳ ಜೊತೆಗೆ ಚರ್ಚೆ, ವಾಗ್ವಾದ ನಡೆದ ಮೇಲೆ ಲೋಕೋಪಯೋಗಿ ಇಂಜೀನೀಯರ್ ಅವರು ಸೂಚಿಸಿದ ಆಧಾರದ ಮೇಲೆ ಮಾರ್ಕ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರಲ್ಲದೆ ಈ ಅಗಲೀಕರಣದ ಬಗ್ಗೆ ಮುಂದಿನ ದಿನಗಳಲ್ಲಿ ಡಿಸಿಯವರ ನೇತೃತ್ವದಲ್ಲಿ ಕಟ್ಟಡಗಳ ಮಾಲೀಕರುಗಳ ಸಭೆ ಕರೆದು ಅಲ್ಲಿ ಚರ್ಚಿಸಿ ನಂತರ ತೀರ್ಮಾನ ಕೈಗೋಳ್ಳುತ್ತಾರೆ ಎಂದರು.
ಇಲ್ಲಿ ಮೂಲಭೂತವಾಗಿ ರುವ ಮುಖ್ಯ ಸಮಸ್ಯೆ ಎಂದರೆ ಮಾಧವಚಾರ್ ಸರ್ಕಲ್ನಿಂದ ಚನ್ನಗಿರಿ ರಸ್ತೆ ಎಷ್ಟು ಆಗಲ ಇದೆ ಎಂಬುದಕ್ಕೆ ಇದುವರೆಗೂ ಲೋಕೋಪಯೋಗಿ ಇಲಾಖೆ ಇಂಜೀನೀಯರ್ಗಳಾಗಲಿ ನಗರಸಭೆಯ ಆಯುಕ್ತರು ಇಂಜೀನೀಯರ್ಗಳಾಗಲಿ ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ. ವಾಸ್ತವವಾಗಿ ಈ ರಸ್ತೆ ಅಂದಾಜು ೧೯೬೨ರ ಸಮಯದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅದರ ಆಧಾರದ ಮೇಲೆ ಮಾಧವಚಾರ್ ಸರ್ಕಲ್ನ ಬಳಿ ಇರುವ ಕೆಲವು ಕಟ್ಟಡಗಳು ಹಾಗು ಚನ್ನಗಿರಿ ರಸ್ತೆಯ ಬಲ ಭಾಗದ ಸಾರ್ವಜನಿಕ ಆಸ್ಪತ್ರೆಯಿಂದ ರಂಗಪ್ಪ ಸರ್ಕಲ್ ವರೆಗೂ ಇರುವ ಕಟ್ಟಡಗಳು ಅಂದಿನ ರಸ್ತೆಯ ಅಳತೆಯ ಮೇಲೆ ೫೦ ಅಡಿ ದೂರ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ.
ಈಗ್ಗೆ ಕೆಲ ತಿಂಗಳ ಹಿಂದೆ ಪಿಡಬ್ಲ್ಯುಡಿ ಇಲಾಖೆಯವರು ಮೂಲ ರಸ್ತೆಯ ನಕಾಶೆಯ ಆಧಾರದ ಮೆಲೆ ಅಳತೆ ಮಾಡದೆ ಹಾಲಿ ಇರುವ ರಸ್ತೆಯ ಆಧಾರದ ಮೇಲೆ ಅಳತೆ ಮಾಡಿ ಎರಡೂ ಬದಿಗಳಿಗೆ ತಲಾ ೫೦ ಅಡಿಗಳಿಗೆ ಮಾರ್ಕ್ ಮಾಡಿದ್ದರು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಮನವಿ ಸಲ್ಲಿಸಿದರೂ ಯಾವುದೆ ಪ್ರಯೋಜನವಾಗಿಲ್ಲ.
ಈ ಬಗ್ಗೆ ನಗರಸಭೆಯಲ್ಲಿ ವಿಚಾರಿಸಿದರೆ ಲೋಕೋಪಯೋಗಿ ಇಲಾಖೆ ಯವರ ಕಡೆ ತೋರಿಸುತ್ತಾರೆ. ನಗರಸಭೆಯವರಿಗೆ ಕೇಳಿದರೆ ಅವರು ಹೇಳಿದ ಆಧಾರದ ಮೇಲೆ ಮಾರ್ಕ್ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಕರಾರುವಕ್ಕಾದ ಅಳತೆಯ ಬಗ್ಗೆ ಯಾರೂ ಮಾತನಾಡಿ ಸ್ಪಷ್ಟನೆ ನೀಡದಿರುವು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕೆ ಸಮಂಜಸವಾದ ಉತ್ತರ ನೀಡುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
