ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಶ್ರೀ ರಾಮನವಮಿ ಆಚರಣೆ…

Share Below Link

ರಾಮನವಮಿ ಎಂದರೆ ಒಂಭತ್ತನೇ ಚಂದ್ರನ ದಿನದಂದು (ನವಮಿ) ಭಗವಾನ್ ರಾಮನ ಜನನವನ್ನು ಗುರುತಿಸುತ್ತದೆ. ಈ ದಿನ ರಾಮನನ್ನು ನೆನಪಿಸಿಕೊಳ್ಳುವ ದಿನ, ಅವನಂತೆ ಬದುಕಲು ಪ್ರಯತ್ನಿಸುವ ದಿನ. ಈ ಪ್ರಯತ್ನ ಮುಖ್ಯ ಏಕೆಂದರೆ ರಾಮನವಮಿ ಎಂದರೆ ಒಂದು ದಿನಕ್ಕೆ ಪರಿಪೂರ್ಣರಾಗುವುದಲ್ಲ ಅದು ದಿಕ್ಕನ್ನು ನೆನಪಿಟ್ಟುಕೊಳ್ಳುವುದು. ಸತ್ಯ ಶಿಸ್ತು ಗೌರವ ಮತ್ತು ಧೈರ್ಯ ಅದರ ಕಡೆಗೆ ಒಂದು ಸಣ್ಣ ಹೆಜ್ಜೆ ಇಡುವುದು.
ರಾಮನವಮಿಯ ಹಿಂದಿನ ಕಥೆಯು ಅಯೋಧ್ಯೆಯಲ್ಲಿ ರಾಜ ದಶರಥನ ಅರಮನೆ ಯಿಂದ ಪ್ರಾರಂಭವಾಗುತ್ತದೆ. ರಾಜ್ಯವು ಬಲಿಷ್ಠವಾಗಿದ್ದು ಗೌರವಾನ್ವಿತವಾಗಿ ಹಾಗೂ ಸಮೃದ್ಧವಾಗಿತ್ತು. ಆದರೂ ರಾಜನು ದೀರ್ಘ ಕಾಲದವರೆಗೆ ವೈಯಕ್ತಿಕ ಶೂನ್ಯತೆಯನ್ನು ಹೊಂದಿದ್ದನು. ಅವನಿಗೆ ಉತ್ತರಾಽಕಾರಿ ಬೇಕಾಗಿತ್ತು ಅದಕ್ಕಾಗಿ ರಾಜನು ಪವಿತ್ರ ಆಚರಣೆಗಳನ್ನು ಭಕ್ತಿಯಿಂದ ನಡೆಸಿದನು. ತದನಂತರ ರಾಮನ ಜನನವು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ( ನವಮಿ) ಅಯೋಧ್ಯೆಯಲ್ಲಿ ರಾಜ ದಶರಥ ಮತ್ತು ರಾಣಿ ಕೌಸಲ್ಯಯ ಮಗನಾಗಿ ಜನಿಸಿದನು. ವಿಷ್ಣುವಿನ ಏಳನೇ ಅವತಾರವಾದ ರಾಮನು ಪುನರ್ವಸು ನಕ್ಷತ್ರ ಮತ್ತು ಕರ್ಕಾಟಕ ಲಗ್ನದಲ್ಲಿ ಜನಿಸಿದನು. ಈ ಪವಿತ್ರ ದಿನವನ್ನು ದೇಶದಾದ್ಯಂತ ರಾಮನವಮಿ ಹಬ್ಬವಾಗಿ ಆಚರಿಸುತ್ತಾರೆ.
ರಾಮನ ಮಲತಾಯಿಯಂದಿರಾದ ಕೈಕೇಯಿಗೆ ಭರತ ಹಾಗೂ ಸುಮಿತ್ರೆಗೆ ಲಕ್ಷ್ಮಣ ಮತ್ತು ಶತ್ರುಜ್ಞನ ಜನನ ಆಯಿತು. ಸೂರ್ಯವಂಶದಲ್ಲಿ ಕೌಸಲ್ಯ ಗರ್ಭದಲ್ಲಿ ಜನಿಸಿದ ರಾಮನು ರಾವಣನನ್ನು ಸಂಹಾರ ಮಾಡಲು ವಿಷ್ಣುವಿನ ಏಳನೇ ಅವತಾರಗೊಂಡನು.
ರಾಮನವಮಿ ಎಂದರೆ ಕುಟುಂಬಗಳಲ್ಲಿ ಸಂಪ್ರದಾಯ ಮತ್ತು ನಂಬಿಕೆ ಬಗ್ಗೆ ಯೋಚಿಸುತ್ತಾರೆ ಅದರಲ್ಲಿ ಮಲ್ಯಗಳು ಸ್ವಾಭಾವಿಕವಾಗಿ ನುಸುಳುತ್ತವೆ. ಆದ್ದರಿಂದ ರಾಮನವಮಿ ದಿನ ಭಕ್ತಿಯಿಂದ ಪೂಜಿಸಿ ಭಜನೆ ಮೂಲಕ ತಮ್ಮ ಹಿರಿಮೆಯನ್ನು ವ್ಯಕ್ತಗೊಳಿ ಸುತ್ತಾರೆ.ಕೆಲವರು ದೇವಸ್ಥಾನಗಳಿಗೆ ತೆರಳಿದರೆ ಇನ್ನು ಕೆಲವರು ಮನೆಯಲ್ಲಿದ್ದು ಆಚರಣೆ ಮಾಡುತ್ತಾರೆ ಕೆಲವರು ಎರಡು ರೀತಿ ಮಾಡುತ್ತಾರೆ. ಇದರ ಸಾಮಾನ್ಯ ಭಾವನೆ ಒಂದೇ ಆಗಿರುತ್ತದೆ. ಇದು ಮನೆಯ ಹೊರಗೆ ಮತ್ತು ಮನಸ್ಸಿನೊಳಗೆ ಜೀವನವನ್ನು ಸ್ವಚ್ಛವಾಗಿಡುವ ದಿನ, ಪ್ರದೇಶ, ಕುಟುಂಬ ಸಂಪ್ರದಾಯ ಮತ್ತು ದೇವಾಲಯ ಪದ್ಧತಿಗಳನ್ನು ಅವಲಂಬಿಸಿ ಈ ದಿನವನ್ನು ಹಲವು ವಿಧಗಳಲ್ಲಿ ಆಚರಿಸಲಾಗುತ್ತದೆ. ವಿಶೇಷವಾಗಿ ಈ ದಿನ ಉಪವಾಸ ಪೂಜೆ ನಡೆಸುತ್ತಾರೆ. ಕೆಲವರು ಹಣ್ಣು ಹಾಲು ಸೇವಿಸಿದರೆ ಇನ್ನು ಕೆಲವರು ಹಬ್ಬದ ಅಡಿಗೆ ಮಾಡಿ ಊಟ ಮಾಡಿ ಸಂಭ್ರಮಿಸುತ್ತಾರೆ.
ದೇವಾಲಯಗಳಲ್ಲಿ ಸಾಮಾನ್ಯವಾಗಿ ರಾಮಾಯಣದಿಂದ ಪಠಣಗಳನ್ನು ಮಾಡುತ್ತಾರೆ. ಹಲವರು ಸ್ಥಳಗಳಲ್ಲಿ ಕೀರ್ತನೆ ಭಜನೆ ಮೆರವಣಿಗೆ ಇತ್ಯಾದಿ ನೆರವೇರುತ್ತದೆ. ಕೆಲವರು ಮನೆಗಳಲ್ಲಿ ಪಾನಕ ಕೋಸಂಬರಿ ಮಾಡಿ ಇತರರಿಗೂ ಹಂಚುತ್ತಾರೆ.
ರಾಮನವಮಿ ಹಬ್ಬವೆಂದರೆ ಸಂಭ್ರಮ ದಿಂದ ಕೂಡಿರುತ್ತದೆ. ಜನದಟ್ಟಣೆ ಇದ್ದರೂ ಸಹ ವಿಭಿನ್ನವಾಗಿರುತ್ತದೆ. ಹಳೆಯ ಹಬ್ಬಗಳು ಸಂಪ್ರದಾಯದಂತೆ ಉಳಿದುಕೊಂಡಿದೆ. ರಾಮನ ಕಥೆಯು ಸಮಸ್ಯೆಗಳಿಲ್ಲದ ಜೀವನದ ಬಗ್ಗೆ ಅಲ್ಲ ಸಮಸ್ಯೆಗಳು ಬಂದಾಗ ಸ್ಥಿರವಾಗಿರುವುದರ ಬಗ್ಗೆ ಅದಕ್ಕಾಗಿ ಜನರು ರಾಮನವಮಿ ಆಚರಿಸುತ್ತಾರೆ.
ರಾಮನವಮಿ ಏಕೆ ಬೇಕು ಎಂಬುದು ಆಶ್ಚರ್ಯಕರವಾಗಿ ಸರಳವಾಗಿದೆ. ಇದು ಜನರು ಧರ್ಮದ ಪರವಾಗಿ ನಿಲ್ಲುವಂತೆ ನೆನಪಿಸುತ್ತದೆ. ಇದು ಶಿಸ್ತು ಮತ್ತು ಸ್ವಯಂ ನಿಯಂತ್ರಣವನ್ನು ಪ್ರೋತ್ಸಾಹಿಸುತ್ತದೆ. ಕುಟುಂಬಗಳು ಮತ್ತು ಸಮುದಾಯವನ್ನು ಒಟ್ಟಿಗೆ ತರುತ್ತದೆ. ಜನರನ್ನು ಶಾಂತಿ ನೆಮ್ಮದಿಗೊಳಿಸುತ್ತದೆ. ಒಟ್ಟಿನಲ್ಲಿ ರಾಮನವಮಿ ಯಂದು ಸಂಪ್ರದಾಯಕ ಉಪವಾಸವು ಅದರ ಆಧ್ಯಾತ್ಮಿಕ ಆವೃತ್ತಿಯಾಗಿದೆ. ಕಡಿಮೆ ಭೋಜನ ಹೆಚ್ಚು ಅರಿವುಂಟು ಮಾಡಿಸುತ್ತದೆ
ಸರ್ವರಿಗೂ ರಾಮನವಮಿಯ ಹಾರ್ದಿಕ ಶುಭಾಶಯಗಳು.
ಎನ್.ಆರ್.ಮಂಜುಳ ನಾಗರಾಜ್
ಬೆಂಗಳೂರು