ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಸಾಧನೆಗೆ ಮನೋಸ್ಥೈರ್ಯ ಮುಖ್ಯ…

Share Below Link

ಆಧುನಿಕ ಪ್ರಪಂಚದಲ್ಲಿ ಬದುಕುತ್ತಿರುವ ನಾವು ನಮ್ಮತನವನ್ನು ಉಳಿಸಿಕೊಳ್ಳಬೇಕಾದರೆ ನಮಗೆ ಇಷ್ಟವಾದ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಸಾಧನೆಯತ್ತ ಮುಖಮಾಡಿ ನಿರಂತರವಾಗಿ ಆ ಸಾಧನೆ ಮಾಡಲು ಪ್ರಯತ್ನಿಸಬೇಕು. ಕೊನೆಗೆ ಒಂದು ದಿನ ನಾವು ಅಂದುಕೊಂಡು ಸಾಧನೆ ಸಾಕಾರವಾಗುವುದು.
ಇದು ಸ್ಪರ್ಧಾತ್ಮಕ ಯುಗ, ಇಲ್ಲಿ ಗೆಲ್ಲುವವನಿಗೆ ಬೆಲೆ ಅಽಕ. ಹಾಗಂತ ಸೋಲು ಅವಮಾನವಲ್ಲ. ಸೋತಾಗ ಕಾರಣ ತಿಳಿದು ಮತ್ತೇ ಮತ್ತೇ ಪ್ರಯತ್ನ ಮಾಡಿದರೆ ಮುಂದೊಂದು ದಿನ ಸೋಲೆ ಗೆಲುವಿನ ಮೆಟ್ಟಿಲು ಆಗುವುದು. ಎಲ್ಲರಂತೆ ನಾವು ಇರದೇ ಎಲ್ಲರಿಗಿಂತ ಭಿನ್ನತೆ ವಿಶೇಷತೆ ಹೊಂದಿರಬೇಕು. ವೈಯಕ್ತಿಕ ಜೀವನ , ವೃತ್ತಿ ಜೀವನ , ಸಾಮಾಜಿಕ ಜೀವನ ಎಲ್ಲರೂ ನಡೆಸುವರು ಸಹಜ, ಅದರಲ್ಲಿಯೇ ನಾವು ತೊಡಗಿಸಿಕೊಂಡು ಆಸಕ್ತಿಯುತ ಕ್ಷೇತ್ರಗಳಲ್ಲಿ ವಿಭಿನ್ನವಾಗಿ ಕೆಲಸ ಮಾಡಿ ಸಾಧನೆ ಮಾಡಬೇಕು.
ಯಾವುದೇ ಸಾಧನೆ ಬಯಸುವುದು ಪ್ರಾಮಾಣಿಕ ಪ್ರಯತ್ನವನ್ನು, ಮನೋಸ್ಥೈರ್ಯವನ್ನು , ನಿರಂತರ ಹೋರಾಟವನ್ನು , ಸಾಽಸುವ ಛಲದ ಗುಣವನ್ನು ಅದಕ್ಕಿಂತ ಮಿಗಿಲಾಗಿ ಸಮಯ ವ್ಯಯಮಾಡದೇ ಇನ್ನೊಬ್ಬರ ಬಗ್ಗೆ ನಿಷೇಧಾತ್ಮಕವಾಗಿ ಚಿಂತಿಸದೇ ನಮ್ಮ ಗುರಿ ಕಡೆ ಗಮನವಿzಗ ಸಾಽಸಲು ಸಾಧ್ಯ. ಸಾಧ್ಯ ಎಂದರೆ ಎಲ್ಲವೂ ಸಾಧ್ಯ . ನಮ್ಮಷ್ಟಕ್ಕೆ ನಾವೂ ಅಸಾಧ್ಯ ಎಂದರೆ ಯಾವುದೂ ಸಾಧ್ಯವಿಲ್ಲ.
ಅರುಣಿಮಾ ಸಿನ್ಹಾ ಕಾಲು ಮುರಿದಾಗಲೂ ಕೃತಕ ಕಾಲುಗಳನ್ನು ಜೋಡಣೆ ಮಾಡಿಕೊಂಡಾಗಲೂ ಏನಾದರೂ ಸಾಽಸಬೇಕೆಂಬ ಛಲದಿಂದ ಹಿಮಾಲಯ ಪರ್ವತವನ್ನು ಏರಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸಚಿನ್ ತೆಂಡೂಲ್ಕರ್ ಕ್ರಿಕೇಟ್ ಜಗತ್ತಿನಲ್ಲಿ ತನ್ನದೇಯಾದ ದಾಖಲೆ ಮಾಡಿದ್ದು ಇತಿಹಾಸ. ಅಲೆಗ್ಸಾಂಡರ ಪ್ಲೆಮಿಂಗ್ ಪೆನ್ಸಿಲಿನ್ ಔಷಧ ಕಂಡು ಹಿಡಿದಿದ್ದು . ನಿಕ್ ಜೆಸಿಕ್ ಕಾಲು ಇಲ್ಲದಿದ್ದರೂ ದೇಶ ಸುತ್ತಿ ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡಿದ್ದು ಇತಿಹಾಸ.
ಹೀಗೆ ಸಾಧಕರು ಸಾವಿರಾರು ಜನರು ನಮ್ಮ ಸುತ್ತಮುತ್ತ ಇರುವವರು. ಮದರ್ ತೆರೆಸಾ, ಸಾಲು ಮರದ ತಿಮ್ಮಕ್ಕ , ಹರೇಕಳ ಹಾಜಬ್ಬ , ಜೋಗತಿ ಮಂಜಮ್ಮ, ಸುಧಾ ಮೂರ್ತಿ, ನಾರಾಯಣಮೂರ್ತಿ, ವಿಜಯ ಸಂಕೇಶ್ವರ, ರಾಜಕುಮಾರ, ಪುನೀತ , ಯಶ, ಸುದೀಪ್ , ರಿಷಬ್ ಶೆಟ್ಟಿ ರಾಹುಲ್ ದ್ರಾವಿಡ್ , ಅನಿಲ್ ಕುಂಬ್ಳೆ ಹೀಗೆ ಸಾಧಕರ ಪಟ್ಟಿ ಮಾಡುತ್ತಾ ಹೋದರೆ ಅಽಕವಾಗುತ್ತದೆ. ಇವರೆ ಕ್ರೀಡೆ, ಸಮಾಜ ಸೇವೆ, ಉದ್ಯಮ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಇತರರಿಗೆ ಸಾಧಕರಿಗೆ ಸದಾ ಸ್ಪೂರ್ತಿಯಾಗಿzರೆ.
ಈ ಸಾಧಕರ ಜೀವನ ಗಾಥೆಯನ್ನು ತಿಳಿದಾಗ ಇವರ ಸಾಧನೆ ಹಿಂದೆ ಅವಿರತ ಶ್ರಮ , ನಿರಂತರ ಪ್ರಯತ್ನ ಸಾಧನೆಯ ಹಾದಿಯಲ್ಲಿ ಸೋಲುಗಳು ಎದುರಾದಾಗ ಆ ಪರಿಸ್ಥಿತಿಗಳನ್ನು ಎದುರಿಸಿದ ರೀತಿ ಎಲ್ಲವೂ ಅಡಗಿದೆ.
ಇಂತಹ ಸಾಧಕರ ಜೀವನ ಚರಿತ್ರೆ ಓದಬೇಕು. ಸಜ್ಜನರ ಸಂಘ ಮಾಡಬೇಕು. ಒಳ್ಳೆಯ ಪುಸ್ತಕಗಳನ್ನು ಓದಿ ತಿಳಿಯಬೇಕು. ಅಂದಾಗ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಹುಟ್ಟಿ ಸಾಧನೆ ಕಡೆ ಮುಖ ಮಾಡುತ್ತೇವೆ. ಇಲ್ಲವೇ ಪ್ರಾಣಿಗಳ ತರಹ ಸಾಮಾನ್ಯ ಬದುಕು ನಡೆಸಿ ನಮ್ಮ ಜೀವನಯಾತ್ರೆ ಮುಗಿಸುತ್ತೇವೆ.
ಸಾಧನೆ ಕೆಲವೊಂದು ತ್ಯಾಗ ಬಯಸುತ್ತದೆ. ವಿದ್ಯಾರ್ಥಿಗಳಾದವರು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು . ಮುಂದೆ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವು ಸಾಽಸಲು ಕಾಲಹರಣ ಮಾಡದೇ ಕ್ರಮಬದ್ದವಾಗಿ ಓದಬೇಕು. ಶಿಸ್ತಿನ ಅಧ್ಯಯನ ಅಗತ್ಯ. ಮೊಬೈಲ್, ಟಿ ವಿ ಅತಿಯಾಗಿ ನೋಡದೇ ಅನಾವಶ್ಯಕವಾಗಿ ಕಾಲಹರಣ ಮಾಡದೇ ತಮ್ಮ ಗುರಿಯತ್ತ ಸದಾ ಗಮನ ಇರಬೇಕು.
ಸಾಧನೆ ಹಾದಿಯಲ್ಲಿ ಅನೇಕರು ನಮ್ಮಗಳ ಪ್ರಯತ್ನ ಕುಗ್ಗಿಸುವ ಹೀನ ಮನಸ್ಥಿತಿ ಹೊಂದಿರುತ್ತಾರೆ. ಅವರು ತಾವು ಸಾಧನೆ ಮಾಡುವುದಿಲ್ಲ. ಸಾಧಕರನ್ನು ಸಾಧನೆ ಮಾಡುವವರನ್ನು ಕಂಡು ಅಸೂಯೆ ಪಡುವರು. ನಮ್ಮ ಸಮಾಜದಲ್ಲಿ ಶೇ.೧೦ ಜನರು. ಯಾವಾಗಲೂ ಸದಾ ಇನ್ನೊಬ್ಬರನ್ನು ತೆಗಳುವುದು ಹೀಯಾಳಿಸುವುದು. ಅವರ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಇನ್ನೊಬ್ಬರ ಬಗ್ಗೆ ಮಾತಾಡುವುದು ವಿಕೃತ ಸಂತೋಷ ಪಡುವುದು ವಿಕೃತ ಮನಸ್ಥಿತಿ ಹೊಂದಿರುತ್ತಾರೆ. ಇಂತವರಿಂದ ಮಾನಸಿಕವಾಗಿ ದೈಹಿಕವಾಗಿ ಅಂತರ ಕಾಯ್ದುಕೊಳ್ಳಬೇಕು. ಕೋತಿ ತಾನು ಕೆಡುವುದಲ್ಲದೇ ಇತರ ಕೋತಿಗಳನ್ನು ಕೆಡಿಸುತ್ತದೆ ಎಂಬ ಮಾತಿನಂತೆ ಇಂತಹ ವಿಕೃತಿ ಮನದವರು ಸದಾ ಇನ್ನೊಬ್ಬರ ಸಂತೋಷ ಹಾಳು ಮಾಡುವ ಕೆಲಸದಲ್ಲಿ ತೊಡಗುವರು. ನಮ್ಮ ಸುತ್ತ ಇಂತಹ ಅನೇಕರು ಇರುತ್ತಾರೆ. ಇವರನ್ನು ಕಾಲು ಕಸದಂತೆ ಕಂಡು ನಾವು ಸದಾ ನಮ್ಮ ಸಾಧನೆಯ ಕಡೆ ಮುಖ ಮಾಡಬೇಕು.
ಸಾಽಸುವಾಗ ಗೆಲುವು ಹಲವು ಬಾರಿ ಸಿಗದಿರಬಹುದು. ಆಗ ನಾವು ಬೇಸರ ಮಾಡಿಕೊಳ್ಳಬಾರದು. ಯಾರೋ ಆಡುವ ಮಾತಿಗೆ ನಮ್ಮ ಮನೋಬಲ ಕುಗ್ಗಿಸಿಕೊಳ್ಳಬಾರದು. ನಮ್ಮ ತೆಗಳುವವರು ನಮ್ಮ ಸಾಧನೆ ಕಂಡು ನಮ್ಮ ಹತ್ತಿರನೂ ಸುಳಿಯಬಾರದು. ಅಂತಹ ಬದುಕು ಅಂತಹ ಹೋರಾಟ ನಮ್ಮದಾಗಬೇಕು. ಸಜ್ಜನರ ಚಿಂತನಗಳನ್ನು ಆಲಿಸಬೇಕು. ಸನ್ಯಾಸಿಗಳ ಅರ್ಥಪೂರ್ಣ ಮಾತುಗಳನ್ನು ಕೇಳಬೇಕು. ಸಾಧಕರ ಗಾಥೆಗಳನ್ನು ಓದಬೇಕು. ಮಕ್ಕಳು ಓದುವ ಸಮಯದಲ್ಲಿ ಚೆನ್ನಾಗಿ ಓದಬೇಕು. ಮೊದಲು ಇಪ್ಪತ್ತೈದು ವರ್ಷ ಚೆನ್ನಾಗಿ ಓದದರೆ ನಂತರದ ಎಪ್ಪತ್ತು ವರ್ಷ ಸುಖವಾಗಿ ಬಾಳಬಹುದು ಎಂದು ಬಲ್ಲವರು ಹೇಳುತ್ತಾರೆ.
ಮೊದಲು ಸಮಾಜಮುಖಿ ಸಮಾಜಕ್ಕೆ ಉಪಯುಕ್ತವಾದ ಸಾಧನಾ ಕ್ಷೇತ್ರಗಳನ್ನು ಗುರುತಿಸಿಕೊಂಡು ಅದರಲ್ಲಿ ನಮಗೆ ಇಷ್ಟವಾದ ಕ್ಷೇತ್ರಗಳಲ್ಲಿ ನಾವು ತೊಡಗಿಸಕೊಂಡು ಸಾಧನೆ ಹಾದಿ ತುಳಿಯಬೇಕು. ಸಾಽಸುವಾಗ ನೂರೆಂಟು ಸೋಲು ಬರಲಿ ಆದರೆ ಮುಂದೊಂದು ದಿನ ಗೆz ಗೆಲ್ಲುವೆ ಎಂಬ ಆತ್ಮವಿಶ್ವಾಸ ಮಾತ್ರ ಕಳೆದುಕೊಳ್ಳಬಾರದು.
ಶಿವಾಜಿ ಮಹಾರಾಜರು ಒಂದು ಹಂತದಲ್ಲಿ ನಿರಂತರವಾಗಿ ಹಲವು ಯುದ್ದಗಳಲ್ಲಿ ಸೋತು ಮಾನಸಿಕವಾಗಿ ತುಂಬಾ ನೊಂದು ಬೇಸರವಾಗಿ ಕುಳಿತಿದ್ದರು. ಆಗ ಒಂದು ಇರುವೆ ಗೋಡೆ ಏರುತ್ತಾ ಇತ್ತು ಅದು ಹತ್ತಾರು ಬಾರಿ ಗೋಡೆ ಏರುತ್ತಾ ಬೀಳುತ್ತಿತ್ತು ಆದರೂ ಅದು ಪ್ರಯತ್ನ ಬಿಡದೇ ಹಲವು ಪ್ರಯತ್ನಗಳ ನಂತರ ಒಂದು ಸಾರಿ ಗೋಡೆ ಏರಿಬಿಟ್ಟಿತು. ಇದರಿಂದ ಶಿವಾಜಿ ಮಹಾರಾಜರು ಮತ್ತೇ ಯುದ್ದಗಳಲ್ಲಿ ತೊಡಗಿ ಗೆಲವು ಸಾಽಸಿದರು. ಇದರಿಂದ ನಮಗೆ ತಿಳಿಯುವ ಸತ್ಯ. ಹಲವಾರು ಬಾರಿ ಸೋತರೂ ನಾವು ಗೆಲುವಿನ ಹಾದಿಗೆ ಮರಳಲು ಪ್ರಯತ್ನ ಬಿಡಬಾರದು. ಹೀಗೆ ಸಾಧಕರ ಹಾದಿ ತಿಳಿದು. ನಾವು ಕೂಡಾ ಮನೋಬಲ ಹೊಂದಿ ಸಾಧನೆ ಕಡೆ ಮುಖ ಮಾಡಬೇಕು.
ಲೇಖನ: ರಂಗನಾಥ ಎನ್ ವಾಲ್ಮೀಕಿ
ಶಿಕ್ಷಕರು -ಲೇಖಕರು ಧಾರವಾಡ
ಮೊಬೈಲ್ -೯೯೪೫೦೫೪೫೭೯