ಜಿಲ್ಲಾ ಸುದ್ದಿತಾಜಾ ಸುದ್ದಿ

ಮಾ.೨೧: ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ…

Share Below Link

ಶಿವಮೊಗ್ಗ : ಕರ್ನಾಟಕ ಜನಪದ ಪರಿಷತ್ ಜಿ ಸಮಿತಿಯಿಂದ ಮಾ.೨೧ ರಂದು ಸವಳಂಗ ರಸ್ತೆಯಲ್ಲಿರುವ ಕೊಮ್ಮನಾಳು ಸಮೀಪದ ಸೋಮಿನಕೊಪ್ಪ ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಶಿವಮೊಗ್ಗ ಜಿ ಮಟ್ಟದ ೭ನೇ ಜನಪದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಜನಪದ ಪರಿಷತ್‌ನ ಜಿಧ್ಯಕ್ಷ ಡಿ.ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ೫ ಗಂಟೆಗೆ ಸೋಮಿನಕೊಪ್ಪ ಗ್ರಾಮದ ಹೆಬ್ಬಾಗಿಲಿನಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಊರಿನ ಗಣ್ಯರು, ಸಂಘ, ಸಂಸ್ಥೆಗಳು, ಕನ್ನಡ ಮನಸ್ಸುಗಳೊಂದಿಗೆ ವಿವಿಧ ಜನಪದ ಕಲಾತಂಡಗಳ ಜನಪದ ನಡಿಗೆ ಕಾರ್ಯಕ್ರಮ ನಡೆಯ ಲಿದ್ದು, ಈ ಕಾರ್ಯಕ್ರಮಕ್ಕೆ ಶಾಸಕಿ ಶ್ರೀಮತಿ ಶಾರದಾಪೂರ್‍ಯಾನಾಯ್ಕ್ ಚಾಲನೆ ನೀಡಲಿದ್ದು, ಶ್ರೀ ರಾಮಾಂಜನೇಯ ಸೇವಾ ಸಮಿತಿ ಅಧ್ಯಕ್ಷ ಕಾಂತರಾಜ್ ಸೋಮಿನ ಕೊಪ್ಪ ಉಪಸ್ಥಿತರಿರುವರು ಎಂದರು.


ಸಂಜೆ ೬ ಗಂಟೆಗೆ ಸಮ್ಮೇಳನ ವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದು, ಕರ್ನಾಟಕ ಜನಪದ ಪರಿಷತ್ ಅಧ್ಯಕ್ಷ ಹಾಗೂ ಖ್ಯಾತ ಜನಪದ ವಿದ್ವಾಂಸ ಡಾ. ಹಿ.ಜಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದು, ಡಿ.ಮಂಜುನಾಥ್ ಆಶಯ ನುಡಿಗಳನ್ನಾಡಲಿzರೆ ಎಂದರು.
ಬೆಂಗಳೂರಿನ ಗೀತಾಭಟ್ ಇವರು ಸಂಯೋಜಿಸಿದ ದೀವರ ಸಂಸ್ಕೃತಿ ಅನಾವರಣದ ಹಸೆ ಚಿತ್ತಾರ ಪುಸ್ತಕವನ್ನು ಶಾರದಾಪೂರ್‍ಯನಾಯ್ಕ್ ಹಾಗೂ ಬೆಂಗಳೂರಿನ ಖ್ಯಾತ ಜನಪದ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು, ಸಮ್ಮೇಳನಾಧ್ಯಕ್ಷ ಶಿವಮೊಗ್ಗದ ಖ್ಯಾತ ಜನಪದ ಗಾಯಕ ಕೆ.ಯುವರಾಜ್, ಕರ್ನಾಟಕ ಜನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಕಣ್ಣೂರು ಟಾಕಪ್ಪ ಬಿಡುಗಡೆ ಮಾಡುವರು. ಮುಖ್ಯ ಅತಿಥಿ ಯಾಗಿ ಕಾಂತರಾಜ್ ಸೋಮಿನಕೊಪ್ಪ ಆಗಮಿಸಲಿದ್ದು, ಕರ್ನಾಟಕ ಜನಪದ ಪರಿಷತ್ ಜಿ ಸಮಿತಿ ಪ್ರಧಾನ ಕಾರ್ಯ ದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ ಸಮ್ಮೇಳನ ಅಧ್ಯಕ್ಷರ ಪರಿಚಯ ಮಾಡಲಿzರೆ ಎಂದರು.
ಪರಿಷತ್‌ನ ಜಿ ಕೋಶಾಧ್ಯಕ್ಷ ಯು.ಮಧುಸೂದನ್ ಐತಾಳ್, ಉಪಾಧ್ಯಕ್ಷ ಡಾ.ಕೆ.ಜಿ.ವೆಂಕಟೇಶ್ ಸೋಮಿನಕೊಪ್ಪದ ಮುಖಂಡರು ಭಾಗವಹಿಸಲಿzರೆ. ಅಂದು ಸಂಜೆಯಿಂದ ಮಧ್ಯರಾತ್ರಿವರೆಗೆ ನಡೆಯಲಿರುವ ಸಮ್ಮೇಳನದಲ್ಲಿ ಸುಮಾರು ೨೨ ಜನಪದ ಕಲಾತಂಡಗಳು ಭಾಗವಹಿಸುತ್ತಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಮೂರ್ತಿ ಹಿಳ್ಳೋಡಿ, ಡಿ. ಗಣೇಶ್, ಬಾಲರಾಜ್ ಚುರ್ಚು ಗುಂಡಿ, ಪರಶುರಾಮ್ ಮಟ್ಟೇರ, ಡಾ.ಭಾಗ್ಯಲಕ್ಷ್ಮಿ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *