ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಕೆಎಫ್‌ಡಿ ಆತಂಕ: ಜ್ವರ ಕಂಡರೆ ತಕ್ಷಣ ಚಿಕಿತ್ಸೆ : ಡಿಸಿ ಕಟ್ಟುನಿಟ್ಟಿನ ಸೂಚನೆ

Share Below Link

ಶಿವಮೊಗ್ಗ : ಕೆಎಫ್‌ಡಿ ನಿಯಂತ್ರಣಕ್ಕಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಗೆ ಯಾವುದೇ ಜ್ವರ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ಚಿಕಿತ್ಸೆ ನೀಡಬೇಕು ಎಂದು ಜಿಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧಿಕಾರಿ ಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನವೆಂಬರ್ ನಿಂದ ಮೇ ತಿಂಗಳವರೆಗೆ ಉಣ್ಣೆಗಳು ಸಕ್ರಿಯವಾಗಿರುವುದರಿಂದ ಹಾಗೂ ಜನವರಿಯಿಂದ ಮಾರ್ಚ್ ಅವಧಿ ಅಪಾಯಕಾರಿಯಾಗಿರುವ ಹಿನ್ನೆಲೆ ಯಲ್ಲಿ ಸಾಗರ, ಸೊರಬ, ಹೊಸನಗರ ಮತ್ತು ತೀರ್ಥಹಳ್ಳಿ ಭಾಗದ ಜನರು ಎಚ್ಚರಿಕೆ ವಹಿಸ ಬೇಕು ಎಂದರಲ್ಲದೇ, ಕಾಡು ಮತ್ತು ತೋಟಗಳಿಗೆ ತೆರಳುವವರು ಡೇಪಾ ಎಣ್ಣೆ ಬಳಸುವಂತೆ ಸಲಹೆ ನೀಡಿದರು.
ಮಂಗ ಸಾವು ಸಂಭವಿಸಿದ ಪ್ರದೇಶಗಳನ್ನು ಹಾಟ್‌ಸ್ಪಾಟ್ ಎಂದು ಗುರುತಿಸಿ ಕಡ್ಡಾಯ ನಿಗಾ ವಹಿಸಬೇಕು. ಜ್ವರ ಪ್ರಕರಣಗಳನ್ನು ತಕ್ಷಣ ಪತ್ತೆಹಚ್ಚಿ ಚಿಕಿತ್ಸೆ ನೀಡಬೇಕು. ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಕನಿಷ್ಠ ೧೦ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡಲು ಸೂಚನೆ ನೀಡಿದರು.
ಡಿಎಸ್‌ಒ ಡಾ. ನಾಗರಾಜ ನಾಯ್ಕ್ ಮಾಹಿತಿ ನೀಡಿದ್ದು, ಜಿಯಲ್ಲಿ ಇದುವರೆಗೆ ೫೨೦೨ ಪರೀಕ್ಷೆಗಳಲ್ಲಿ ೫೯ ಕೆಎಫ್‌ಡಿ ಪ್ರಕರಣಗಳು ಪತ್ತೆಯಾಗಿದ್ದು, ೧ ಮರಣ ಸಂಭವಿಸಿದೆ. ೧೧೪ ಮಂಗ ಸಾವುಗಳಲ್ಲಿ ೩೧ ಪಾಸಿಟಿವ್ ದೃಢಪಟ್ಟಿವೆ ಎಂದರು.


ನಾಯಿ -ಹಾವು ಕಡಿತಕ್ಕೂ ಎಚ್ಚರಿಕೆ:
ನಾಯಿ ಕಡಿತದಿಂದ ರೇಬಿಸ್ ಮಾರಣಾಂತಿಕವಾಗಿರುವುದರಿಂದ ತಕ್ಷಣ ಚಿಕಿತ್ಸೆ ಪಡೆಯಬೇಕು. ಗಾಯವನ್ನು ೧೫ ನಿಮಿಷ ನೀರಿನಲ್ಲಿ ತೊಳೆಯಿಸಿ, ಆಂಟಿ ರೇಬಿಸ್ ಚುಚ್ಚುಮದ್ದು ಪಡೆಯಬೇಕು ಎಂದು ಸೂಚನೆ ನೀಡಿದರು.
ಹಾವು ಕಡಿತದ ಸಂದರ್ಭ ದಲ್ಲೂ ತಕ್ಷಣ ಆಸ್ಪತ್ರೆಗೆ ಸಾಗಿಸುವುದು ಅತ್ಯವಶ್ಯಕ ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಒತ್ತು:
ಟೈಫಾಯ್ಡ್, ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಡೆಗೆ ಶುದ್ಧ ಕುಡಿಯುವ ನೀರು, ಸ್ವಚ್ಛತೆ ಹಾಗೂ ಕ್ಲೋರಿನೇಷನ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಏಡ್ಸ್ ನಿಯಂತ್ರಣ ಗುರಿ:
೨೦೨೬ ಡಿಸೆಂಬರ್ ವೇಳೆಗೆ ೯೫-೯೫-೯೯ ಗುರಿ ಸಾಧಿಸಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯಕ್ರಮ ಜರಿಗೆ ತರಬೇಕು ಎಂದು ಜಿಧಿಕಾರಿ ಸೂಚಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *