ಧರ್ಮ ರಾಜಕೀಯದಿಂದ ದೂರವಿರಲಿ…
ಶಂಕರಘಟ್ಟ: ಸರ್ಕಾರಗಳು ಧರ್ಮಗಳನ್ನು ಬದಿಗೊತ್ತಿ ಆಡಳಿತ ನಡೆಸಬೇಕು ಎಂದು ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿವಿಯ ಪ್ರಾಧ್ಯಾಪಕ ಸಿ.ಜಿ. ಲಕ್ಷ್ಮಿಪತಿ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯ ಮತ್ತು ಶ್ರೀಮದ್ ರಂಭಾಪುರಿ ಕಾಲೇಜು ಸಂಯುಕ್ತವಾಗಿ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮತಗಳಿಗಾಗಿ ಧರ್ಮ ಗಳನ್ನು ಬಳಸುವುದು ಅಪಾಯಕಾರಿ ಎಂದು ಎಚ್ಚರಿಸಿದರು.
ಸಂವಿಧಾನಕ್ಕೆ ಅನುಗುಣವಾಗಿ ಮಾನವ ಪ್ರೇಮ ಹಾಗೂ ಸಾರ್ವ ಭೌಮತೆಯನ್ನು ಕಾಪಾಡುವವರೇ ನಿಜವಾದ ದೇಶಪ್ರೇಮಿಗಳು ಎಂದರಲ್ಲದೇ, ಸಾಮಾಜಿಕ ನ್ಯಾಯ ಮತ್ತು ಸುಸ್ಥಿರ ಅಭಿವೃದ್ಧಿಗೆ ಬಹುಶಿಸ್ತೀಯ ದೃಷ್ಟಿಕೋನ ಅಗತ್ಯವಿದ್ದು, ಹಸಿವು ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಕುಲಸಚಿವ ಎ.ಎಲ್. ಮಂಜುನಾಥ್, ಸಂವಿಧಾನ ಓದು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದರು.
ಪ್ರೊ. ಎಸ್.ಎಂ. ಮುತ್ತಯ್ಯ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಪ್ರೊ. ಎನ್. ಗುರುಲಿಂಗಯ್ಯ, ವಿಶ್ರಾಂತ ಪ್ರಾಧ್ಯಾಪಕಿ ಡಾ. ಸಬಿತಾ ಬನ್ನಾಡಿ, ಪ್ರೊ. ಚಂದ್ರಶೇಖರ್ ಮುಂತಾದ ವರು ವಿವಿಧ ವಿಷಯಗಳ ಕುರಿತಂತೆ ವಿಚಾರ ಗೋಷ್ಠಿಗಳಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೂರು ಪುಸ್ತಕಗಳ ಬಿಡುಗಡೆ ನಡೆಯಿತು.
ವೇದಿಕೆಯಲ್ಲಿ ಪ್ರೊ.ಎಚ್.ಎಂ. ಧರ್ಮೇಗೌಡ, ಪ್ರೊ. ಸಿ. ಚನ್ನಪ್ಪ, ಪ್ರೊ. ವಿಶ್ವೇಶ್ವರಯ್ಯ, ಪ್ರೊ.ಜಿ ಸುರೇಶ್, ಪ್ರೊ. ವಸಂತಕುಮಾರ್ ಇನ್ನಿತರರಿದ್ದರು.
ಡಾ. ಮೀನಾಕ್ಷಿ, ಸ್ಪೂರ್ತಿ ಪಟೇಲ್ ಪ್ರಾರ್ಥಿಸಿದರು. ಡಾ. ಸಂದೀಪ್ ಆರ್. ಸ್ವಾಗತಿಸಿದರು. ಡಾ. ಹಸೀನಾ ನಿರೂಪಿಸಿದರು.
