ಜಿಲ್ಲಾ ಸುದ್ದಿತಾಜಾ ಸುದ್ದಿ

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ…

Share Below Link

ಶಿವಮೊಗ್ಗ: ಪರಿಶಿಷ್ಟ ಜತಿಗಳಲ್ಲಿ ಒಳ ಮೀಸಲಾತಿ ಜರಿಗೆ ಆಗ್ರಹಿಸಿ ಶಿವಮೊಗ್ಗ ಜಿ ಮಾದಾರ ಮಹಾಸಭಾ (ರಿ.) ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಇಂದು ಮಹಾನಗರ ಪಾಲಿಕೆ ಆವರಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಡಿಸಿ ಕಚೇರಿವರೆಗೆ ಬೃಹತ್ ಮೆರವಣಿಗೆಯಲ್ಲಿ ಬಂದು ಜಿಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಜಿಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಮಿತಿ ಜಿ ಪ್ರಧಾನ ಕಾರ್ಯದರ್ಶಿ ತೇಜಸ್ ಆರ್. ಹಾಗೂ ಮುಖಂಡರು, ಪರಿಶಿಷ್ಟ ಜತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ೦೧-೦೮-೨೦೨೪ ರಂದು ಐತಿಹಾಸಿಕ ತೀರ್ಪು ನೀಡಿದರೂ ಇದುವರೆಗೂ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಒಳ ಮೀಸಲಾತಿ ಜರಿಗೊಳಿಸದೇ ೫೬,೩೪೨ ಸರ್ಕಾರಿ ಹುzಗಳನ್ನು ಭರ್ತಿ ಮಾಡಲು ಮುಂದಾಗಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ. ಹೈಕೋರ್ಟ್‌ನಲ್ಲಿ ಶೇ.೧೭ ರಷ್ಟು ಮೀಸಲಾತಿ ವಿಚಾರ ಬಾಕಿ ಇದ್ದರೂ, ಹಾಲಿ ಇರುವ ಶೇ.೧೫ ರಷ್ಟು ಪರಿಶಿಷ ಜತಿ ಮೀಸಲಾತಿಯ ಒಳ ಮೀಸಲಾತಿ ಜರಿಗೊಳಿಸಲು ಯಾವುದೇ ಕಾನೂನು ಅಡೆತಡೆ ಗಳಿಲ್ಲ ಎಂದು ರಾಜ್ಯದ ಅಡ್ವಕೇಟ್ ಜನರಲ್ ಕೂಡ ಸ್ಪಷ್ಟಪಡಿಸಿzರೆ ಎಂದು ಮನವಿಯಲ್ಲಿ ಉಖಿಸಲಾಗಿದೆ.
ಮಾ.೨೭ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತು ಸ್ಪಷ ನಿರ್ಧಾರ ಕೈಗೊಂಡು ೫೬,೩೪೨ ಹುzಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಜರಿಗೆ ತರಬೇಕು ಎಂದು ಒತ್ತಾಯಿಸಲಾಗಿದೆ. ಇಲ್ಲದಿದ್ದರೆ ರಾಜದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡಬೇಕು ಎಂಬುದು ಕಳೆದ ಹಲವು ದಶಕಗಳಿಂದ ನಡೆಯುತ್ತಿರುವ ಹೋರಾಟವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮಾದಾರ ಮಹಾಸಭಾ ಜಿ ಅಧ್ಯಕ್ಷ ಶಿವಾಜಿ, ಪ್ರಮುಖರಾದ ರಮೇಶ್, ಟೆಲೆಕ್ಸ್ ರವಿಕುಮಾರ್, ಎನ್. ಗೋವಿಂದ, ತಿಮ್ಲಾಪುರ ಲೋಕೇಶ್, ಆರ್. ಶಿವಣ್ಣ, ಸೂಲಯ್ಯ, ಪ್ರಕಾಶ್, ರಂಗಪ್ಪ, ಪ್ರಭು, ಅಣ್ಣಪ್ಪ, ಮಂಜುನಾಥ್ ಎಸ್., ಚಿನ್ನಯ್ಯ. ಹೆಚ್.ಎನ್. ಪ್ರಭು. ಮಂಜಪ್ಪ ಬೀರನಕೆರೆ, ಅಣ್ಣಪ್ಪ, ಹಾಲೇಶಪ್ಪ, ಎ.ಕೆ. ಅಣ್ಣಪ್ಪ, ನಿಖಿಲ್ ಮೂರ್ತಿ, ಕೆಂಪಮ್ಮ, ರುದ್ರಮ್ಮ, ಗಿಡ್ಡಪ್ಪ, ನಾಗರಾಜ್, ಮೈಲಾರಪ್ಪ, ಮುಗುಳಗೆರೆ ಬಸವರಾಜ್, ನೀಲಪ್ಪ, ಅಣ್ಣಪ್ಪ ಎ.ಕೆ., ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *