ಸರ್ಜಿ ಫೌಂಡೇಶನ್ನಿಂದ ಉಚಿತ ಆರೋಗ್ಯ ತಪಾಸಣೆ …
ಶಿವಮೊಗ್ಗ : ಡಾ. ಪುನೀತ್ ರಾಜ್ ಕುಮಾರ್ ಜನ್ಮ ದಿನದ ಅಂಗವಾಗಿ ಜಯ ಕರ್ನಾಟಕ ಜಿ ಸಮಿತಿ, ಸರ್ಜಿ ಆಸ್ಪತ್ರೆಗಳ ಸಮೂಹ, ಸರ್ಜಿ ಫೌಂಡೇಶನ್ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಜುವೆಲ್ ರಾಕ್ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಶುಕ್ರವಾರ ನಡೆಯಿತು.
ಸರ್ಜಿ ಫೌಂಡೇಶನ್ನಿನ ಮ್ಯಾನೇ ಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಶಿಬಿರಕ್ಕೆ ಚಾಲನೆ ನೀಡಿದರು. ಬಿಜೆಪಿ ಯುವ ಮುಖಂಡರಾದ ಕೆ.ಇ.ಕಾಂತೇಶ್, ಜಿ ಸಮಿತಿ ಅಧ್ಯಕ್ಷರಾದ ಬಿ.ಎ.ಸುರೇಶ್ ಶೆಟ್ಟಿ ಮತ್ತಿತರರು ಹಾಜರಿದ್ದರು. ಬೆಳಗ್ಗೆ ೮ ಗಂಟೆಯಿಂದಲೇ ಸರ್ಜಿ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ೧೦೦ ಕ್ಕೂ ಹೆಚ್ಚು ಮಂದಿಗೆ ಮದುಮೇಹ ಹಾಗೂ ರಕ್ತ ಪರೀಕ್ಷೆ ನಡೆಸ ಲಾಯಿತು.
ಶಿಬಿರದಲ್ಲಿ ಜನರಲ್ ಪಿಜಿಷಿ ಯನ್ ಡಾ.ಆನಂದ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ರಕ್ಷಿತಾ, ಮೂಳೆ ರೋಗ ತಜ್ಞರಾದ ಡಾ. ಸಿದ್ದರಾಮೇಶ್, ಮಕ್ಕಳ ತಜ್ಞರಾದ ಡಾ. ರಶ್ಮಿ, ದಂತ ವೈದ್ಯರಾದ ಡಾ. ಅರುಣ್ ಕುಮಾರ್ ಅವರು ರೋಗಿಗಳಿಗೆ ತಪಾಸಣೆ ನಡೆಸಿ, ಸಲಹೆ ಸೂಚನೆ ನೀಡಿದರು.
ಈ ಸಂದರ್ಭ ಆಸ್ಪತ್ರೆಯ ದಾದಿಯರು ಹಾಗೂ ಸಿಬ್ಬಂದಿ ಹಾಜರಿದ್ದರು.