ಮೆಗ್ಗಾನ್ ಆಸ್ಪತ್ರೆಯಲ್ಲಿ ೨೫ ಕೋಕ್ಲಿಯರ್ ಇಂಪ್ಲಾಂಟ್ ಸಂಕೀರ್ಣ ಶಸ್ತ್ರಚಕಿತ್ಸೆ ಯಶಸ್ವಿ : ಡಾ.ಶ್ರೀಧರ್
ಶಿವಮೊಗ್ಗ : ರಾಜ್ಯ ಸರ್ಕಾರದ ಈ ಮಹತ್ವದ ಯೋಜನೆಯ ಮೂಲಕ ಗಂಭೀರ ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ೨೫ ಯಶಸ್ವಿ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಇಎನ್ಟಿ ವಿಭಾಗದ ಸಹ ಪ್ರಾಧ್ಯಾಪಕರು ಡಾ. ಶ್ರೀಧರ್ ತಿಳಿಸಿದರು.
ಸುದ್ದಿಗಷ್ಟಿಯಲ್ಲಿ ಮಾತqನಾಡಿದ ಅವರು, ಹುಟ್ಟು ಕಿವುಡು ಇರುವ ಮಕ್ಕಳಿಗೆ ನಡೆಸುವ ಉನ್ನತ ಮಟ್ಟದ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆ ಇದಾಗಿದ್ದು ಈ ಯೋಜನೆ ಯಡಿ ಆಸ್ಪತ್ರೆಯಲ್ಲಿ ೦೧-೦೩-೨೦೨೩ರಂದು ಮೊದಲ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಪ್ರಾರಂಭಿಸಲಾಯಿತು. ಇಂದಿಗೆ ಆಸ್ಪತ್ರೆಯಲ್ಲಿ ೨೫ನೇ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿ ಯಾಗಿ ನೆರವೇರಿಸಲಾಗಿದ್ದು, ಇದು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಮಹತ್ವದ ಹೆಜ್ಜೆಯಾಗಿದೆ ಎಂದರು.

ಈ ಸೌಲಭ್ಯವು ಬಿಪಿಎಲ್ ಹಾಗೂ ಎಪಿಎಲ್ ಎಂಬ ಭೇದ ವಿಲ್ಲದೆ ಎ ಅರ್ಹ ರೋಗಿಗಳಿಗೆ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಶಸ್ತ್ರಚಿಕಿತ್ಸೆಯ ಒಟ್ಟು ವೆಚ್ಚವು ಸಾಮಾನ್ಯವಾಗಿ ಸುಮಾರು ರೂ. ೧೨ ರಿಂದ ೧೫ ಲಕ್ಷದವರೆಗೆ ಆಗು ತ್ತದೆ. ಈ ಯೋಜನೆಯಡಿ ಇಂಪ್ಲಾಂಟ್ ಸಾಧನದ ವೆಚ್ಚಕ್ಕಾಗಿ ಸುಮಾರು ರೂ. ೬ ಲಕ್ಷ ಹಾಗೂ ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ (ರಿಹ್ಯಾಬಿಲಿಟೇಶನ್) ಗಾಗಿ ಒಟ್ಟು ಸುಮಾರು ರೂ. ೧,೭೫,೦೦೦ ಅನುದಾನ ಸರ್ಕಾರ ದಿಂದ ನೀಡಲಾಗುತ್ತದೆ. ಹೀಗಾಗಿ ಒಟ್ಟು ಸುಮಾರು ರೂ. ೭,೭೫,೦೦೦ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಶಸ್ತ್ರಚಿಕಿತ್ಸೆ ನಂತರ ಎ ೨೫ ಮಕ್ಕಳನ್ನು ಮೈಸೂರಿನ ಎಐಐಎಸ್ ಹೆಚ್ ಸಂಸ್ಥೆಗೆ ಆಡಟರಿ ವರ್ಬಲ್ ಥೆರಪಿಗಾಗಿ ರೆಫರ್ ಮಾಡಲಾಗಿದೆ. ಚಿಕಿತ್ಸೆ ನಂತರ ಹೆಚ್ಚಿನ ಮಕ್ಕಳಲ್ಲಿ ಕೇಳುವ ಸಾಮರ್ಥ್ಯ ಮತ್ತು ಮಾತಿನ ಕೌಶಲ್ಯಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.
ಈ ಶಸ್ತ್ರಚಿಕಿತ್ಸೆಯನ್ನು ಇಎನ್ಟಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಎಸ್. ಅವರು ನೆರವೇರಿ ಸಿದ್ದು, ಮೆಂಟರ್ ಸರ್ಜನ್ ಆಗಿ ಡಾ. ಶಂಕರ್ ಮೆಡಕೇರಿ ಅವರು ಮಾರ್ಗದರ್ಶನ ನೀಡಿzರೆ. ಇಎನ್ ಟಿ ವಿಭಾಗದ ವೈದ್ಯರು, ಸಿಬ್ಬಂದಿ ಹಾಗೂ ಆಸ್ಪತ್ರೆಯ ಆಡಳಿತ ವರ್ಗದ ಸಹಕಾರ ದೊಂದಿಗೆ, ವೈದ್ಯಕೀಯ ಅಧೀಕ್ಷಕರು, ಜಿ ಶಸ್ತ್ರಚಿಕಿತ್ಸಕರು ಮತ್ತು ನಿರ್ದೇಶಕರ ಸಹಾಯ, ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಡಾ.ಶಂಕರ್ ಮೆಡಿಕೇರಿ ಮಾತನಾಡಿ, ಮೊದಲಿಗೆ ೧ ರಿಂದ ೬ ವರ್ಷದ ಒಳಗಿನ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಈಗ ೨ ವರ್ಷದೊಳಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಈ ಶಸ್ತ್ರಚಿಕಿತ್ಸೆ ಅತ್ಯುತ್ತಮವಾಗಿದೆ ಎಂದ ಅವರು ಹೇಗೆ ಕೋಕ್ಲಿಯರ್ ಇಂಪ್ಲಾಂಟ್ ಅಳವಡಿಸಲಾಗುವುದು ಎಂದು ವಿವರಿಸಿದರಲ್ಲದೇ, ಈ ಶಸ್ತ್ರಚಿಕಿತ್ಸೆ ಪಡೆದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಯಶಸ್ವಿ ಜೀವನ ಮಾಡುತ್ತಿರುವ ಕುರಿತು ತಿಳಿಸಿದರು.
೧೦೨೦ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿರುವ ಡಾ.ಶಂಕರ್ ಮೆಡಿಕೇರಿ ಇವರನ್ನು ಸನ್ಮಾನಿಸಲಾಯಿತು. ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಐಶಾನಿ ಎಸ್ ಭಟ್ ರವರ ತಾಯಿ ತಮ್ಮ ಮಗಳ ಕಿವುಡು, ಪತ್ತೆ ಹಚ್ಚಿದ ಬಗೆ ಹಾಗೂ ಕೋಕ್ಲಿಯರ್ ಶಸ್ತ್ರಚಿಕಿತ್ಸೆ, ನಂತರದ ಅನುಭವಗಳನ್ನು ಹಂಚಿಕೊಂಡರು.
ಪತ್ರಿಕಾಗೋಷ್ಟಿಯಲ್ಲಿ ಮೆಗ್ಗಾನ್ ಜಿ ಆಸ್ಪತ್ರೆಯ ಜಿ ಸರ್ಜನ್ ಡಾ.ಗೀತಾ ಸುಶೀಲ್ ಕುಮಾರ್, ಇಎನ್ಟಿ ವಿಭಾಗದ ಡಾ.ಚಂಪಾ, ಶುಶ್ರೂಷಕಾಧೀಕ್ಷಕರಾದ ಶೇಷಮ್ಮ ಹಾಜರಿದ್ದರು.
