ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ ಮರಳು ಮಾಫಿಯಾ…

Share Below Link

ಶಿವಮೊಗ್ಗ : ಮತ್ತೆ ಮತ್ತೆ ಜಿಯಲ್ಲಿ ಮತ್ತೆ ಅಕ್ರಮ ಮರಳು ಗಣಿಗಾರಿಕೆಯ ಸದ್ದು ಭರ್ಜರಿಯಾಗಿ ಕೇಳಿಬರುತ್ತಿದೆ. ಅಂತೆಯೇ ತುಂಗಭದ್ರ ನದಿ ದಂಡೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ವಿರುದ್ಧ ಗಣಿ ಮತ್ತು ಭೂ ವಿeನ ಇಲಾಖೆ ಅಧಿಕಾರಿಗಳು ಕೊನೆಗೂ ಕಾರ್ಯಾಚರಣೆ ನಡೆಸಿದ್ದು, ನೂರಾರು ಮೆಟ್ರಿಕ್ ಟನ್ ಮರಳು, ಟ್ರ್ಯಾಕ್ಟರ್ ಮತ್ತು ಮೊಟಾರ್ ವಶಪಡಿಸಿಕೊಂಡಿzರೆ.
ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತುಕೊಂಡ ಅಧಿಕಾರಿಗಳು ಶಿವಮೊಗ್ಗ ತಾಲ್ಲೂಕಿನ ಹಾಡೋಣಹಳ್ಳಿ, ಪುರಲೆ ಮತ್ತು ಪಿಳ್ಳಂಗೆರೆ ವ್ಯಾಪ್ತಿಯ ತುಂಗಭದ್ರ ನದಿ ತೀರಗಳಲ್ಲಿ ಗಣಿ ಮತ್ತು ಭೂ ವಿeನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಶಿವಮೊಗ್ಗ ಗ್ರಾಮಾಂತರ ಪೊಲೀಸರ ಸಹಕಾರದೊಂದಿಗೆ ಗಣಿ ಮತ್ತು ಭೂ ವಿeನ ಇಲಾಖೆಯ ಅಧಿಕಾರಿ ಪ್ರಿಯ ದೊಡ್ಡಗೌಡರ್ ನೇತೃತ್ವದ ತಂಡ ಎರಡು ದಿನಗಳ ಕಾಲ ನಿರಂತರವಾಗಿ ಕಾರ್ಯಾಚರಣೆ ನಡೆಸಿತು.


ದಾಳಿಯ ವೇಳೆ ನದಿ ದಂಡೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಒಟ್ಟು ಸುಮಾರು ೯೦ ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿzರೆ. ಜೊತೆಗೆ ಹಾಡೋಣಹಳ್ಳಿ ಪ್ರದೇಶದಲ್ಲಿ ಮರಳು ಸಾಗಾಣಿಕೆಗೆ ಬಳಸಲಾಗುತ್ತಿದ್ದ ಒಂದು ಟ್ರ್ಯಾಕ್ಟರ್ ಹಾಗೂ ನದಿಯಲ್ಲಿ ಅಳವಡಿಸಲಾಗಿದ್ದ ಮೋಟರ್ ಅನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಪ್ರಕರಣ ದಾಖಲಿಸಲಾಗಿದೆ.
ಇದೇ ವೇಳೆ ಪಿಳ್ಳಂಗೆರೆ ಪ್ರದೇಶದಲ್ಲಿ ಅಕ್ರಮ ಮರಳು ತೆಗೆಯಲು ಬಳಸಲಾಗುತ್ತಿದ್ದ ಎರಡು ಮೋಟರ್‌ಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಪುರಲೆ ಗ್ರಾಮ ವ್ಯಾಪ್ತಿಯಲ್ಲಿ ನಡೆದ ದಾಳಿಯ ವೇಳೆ ಸುಮಾರು ೩೪೫ ಮೆಟ್ರಿಕ್ ಟನ್ ಮರಳು ಸಂಗ್ರಹಿಸಿರುವುದು ಪತ್ತೆಯಾಗಿದ್ದು, ಅದನ್ನೂ ಅಧಿಕಾರಿಗಳು ವಶಪಡಿಸಿಕೊಂಡಿzರೆ.
ದೇವಸ್ಥಾನದ ಜೀರ್ಣೋದ್ಧಾರ ನೆಪದಲ್ಲಿ ಅಕ್ರಮ:
ತುಂಗಭದ್ರ ನದಿ ಪಾತ್ರದ ಹಲವೆಡೆ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವ ದಂಧೆಕೋರರು ದೇವಸ್ಥಾನಗಳ ಜೀರ್ಣೋದ್ಧಾರ ಅಥವಾ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಮರಳು ತೆಗೆಯುತ್ತಿರುವುದು ಬೆಳಕಿಗೆ ಬಂದಿದೆ. ಕೆಲ ಗ್ರಾಮಗಳಲ್ಲಿ ದೇವಸ್ಥಾನ ಅಭಿವೃದ್ಧಿಗೆ ದೇಣಿಗೆ ನೀಡಲಾಗುತ್ತದೆ ಎಂಬ ನೆಪದಲ್ಲಿ ಗ್ರಾಮಸ್ಥರ ಬೆಂಬಲವನ್ನು ಕೂಡ ಪಡೆಯಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಮೂಲಗಳ ಪ್ರಕಾರ, ದೇಣಿಗೆಯ ಹೆಸರಿನಲ್ಲಿ ದೇವಸ್ಥಾನ ಸಮಿತಿಯ ಕೆಲ ಸದಸ್ಯರೂ ತಮ್ಮ ಪಾಲು ಪಡೆಯುತ್ತಿದ್ದು, ಇದರಿಂದ ಅಕ್ರಮ ಮರಳು ಗಣಿಗಾರಿಕೆಗೆ ಸ್ಥಳೀಯ ಮಟ್ಟದಲ್ಲಿ ಪ್ರತಿರೋಧ ಕಡಿಮೆಯಾಗುತ್ತಿದೆ. ಇದೇ ಕಾರಣ ದಿಂದಾಗಿ ಈ ದಂಧೆಗೆ ಸಂಪೂರ್ಣ ವಾಗಿ ಕಡಿವಾಣ ಹಾಕುವುದು ಇಲಾಖೆಗೆ ಸವಾಲಾಗುತ್ತಿದೆ ಎಂದು ಹೇಳಲಾಗಿದೆ.
ಅಧಿಕಾರಿಗಳ ಪ್ರಕಾರ, ಮುಂದಿನ ದಿನಗಳಲ್ಲಿಯೂ ತುಂಗಭದ್ರ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮರಳು ತೆಗೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಇಂತಹ ದಂಧೆಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ವಿಶೇಷ ತಂಡಗಳ ಮೂಲಕ ನಿರಂತರ ಪರಿಶೀಲನೆ ನಡೆಸಲಾಗು ತ್ತದೆ ಎಂದು ಅಧಿಕಾರಿಗಳು ತಿಳಿಸಿzರೆ.

Leave a Reply

Your email address will not be published. Required fields are marked *