ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಪರಿಶಿಷ್ಟರ ಒಳಮೀಸಲಾತಿ ಜಾರಿಗೊಳಿಸದೆ ಹುದ್ದೆ ಭರ್ತಿ ಬೇಡ: ಶಿವಾಜಿ

Share Below Link

ಶಿವಮೊಗ್ಗ : ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ಜಾರಿಗೊಳಿಸದೆ ಸರ್ಕಾರವ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುzಗಳನ್ನು ಭರ್ತಿಮಾಡಬಾರದು ಎಂದು ಕರ್ನಾಟಕ ಮಾದರ ಮಹಾ ಸಭಾದ ಜಿಧ್ಯಕ್ಷ ಹೆಚ್.ಶಿವಾಜಿ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
ರಾಜ್ಯದಲ್ಲಿ ೫೬,೩೪೨ ಖಾಲಿ ಹುzಗಳ ಭರ್ತಿಯಲ್ಲಿ ಶೇ.೧೫ರ ಒಳಮೀಸಲಾತಿಯನ್ನು ಗ್ರೂಪ್ ಎಬಿಸಿ ವರ್ಗೀಕರಣದಂತೆ ಜರಿ ಗೊಳಿಸಲು ಸಂಬಂಧಿತ ಆದೇಶ ಗಳಿಗೆ ತಿದ್ದುಪಡಿ ತಂದು ಶೇ.೫೬ರ ಮೀಸಲಾತಿಯನ್ನು ಸಂವಿಧಾನದ ೯ನೇ ಅನುಸೂಚಿಯಲ್ಲಿ ಸೇರಿಸಬೇಕು ಎಂದರು.


ಪರಿಶಿಷ್ಟ ಜತಿಗಳ ಒಳಮೀಸ ಲಾತಿ ಕುರಿತಂತೆ ಸುಪ್ರಿಂಕೋರ್ಟ್ ನೀಡಿರುವ ನಿರ್ದೇಶನಗಳ ಹಿನ್ನಲೆ ಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ, ರಾಜ್ಯಪಾಲರಿಂದ ಅಂಕಿತ ಪಡೆದಿರುವುದು ನಮ್ಮ ಹೋರಾಟದ ಜಯವಾಗಿದೆ. ಈಗ ರಾಜ್ಯ ಸರ್ಕಾರ ೫೬,೩೪೨ ಖಾಲಿ ಹುzಗಳನ್ನು ಒಳಮಿಸಲಾತಿಯ ಶೇ.೧೫ರ ಹಂಚಿಕೆಯನ್ನು ಸ್ಪಷ್ಟವಾಗಿ ಅನ್ವಯಿಸಿ ಮಾತ್ರ ಕೈಗೊಳ್ಳಬೇಕು. ಉಪ ಗುಂಪುಗಳ ವಾರು ಹಂಚಿಕೆ ಹಾಗೂ ಪರಿಷ್ಕತ ರೋಸ್ಟರ್ ಜರಿಗೊಳಿಸಿ, ಕಾನೂನು ಸಮರ್ಥನೆಗಳೊಂದಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದರು.
ಮಾದರ ಮಹಾಸಭಾದ ಪ್ರಮುಖ ಭಾನುಪ್ರಸಾದ್ ಮಾತನಾಡಿ, ಸರ್ಕಾರದ ಫೆ.೨೭ರ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ನಾಗ್‌ಮೋಹನ್‌ದಾಸ್ ವರದಿಯ ಆಧಾರದ ಮೇಲೆ ಪರಿಶಿಷ್ಟ ಜತಿಗಳನ್ನು ಗ್ರೂಪ್ ಎಬಿಸಿ ವರ್ಗೀಕರಣದಂತೆ ಒಳಮೀಸಲಾತಿ ಉಪವರ್ಗೀಕರಣವನ್ನು ಜರಿಗೊಳಿಸಬೇಕು. ನಮ್ಮೆ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಮಾದಿಗ ಸಮುದಾಯವು ರಾಜದ್ಯಂತ ಹೋರಾಟವನ್ನು ಕೈಗೊಳ್ಳುತ್ತದೆ. ಶಿಕಾರಿಪುರದಲ್ಲಿ ಮಾ.೭ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಮುಖರಾದ ತಿಮ್ಲಾಪುರ ಲೋಕೇಶ್, ಸಿ.ಮೂರ್ತಿ, ಮಂಜುನಾಥ್ ಎಸ್., ಹೆಚ್.ಎನ್. ಪ್ರಭು, ಗಿರೀಶ್, ಅಣ್ಣಪ್ಪ, ಮಂಜು, ಪುಟ್ಟರಾಜು, ರಮೇಶ್, ಗಾಜನೂರು ನಾಗರಾಜ್ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *