ರಾಜ್ಯ ವೇತನ ಸಂಹಿತೆ: ಸಿಐಟಿಯು ಪ್ರತಿಭಟನೆ
ಶಿವಮೊಗ್ಗ : ಕರ್ನಾಟಕ ರಾಜ್ಯ ವೇತನ ಸಂಹಿತೆ, ಕರಡು ನಿಯಮಗಳು ೨೦೨೬ರ ಕುರಿತು ಕಾರ್ಮಿಕ ಸಂಘಗಳ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಕೇಳಿದ ರಾಜ್ಯ ಸಕಾರ ಜ.೨೩ರ ೨೦೨೬ರಂದು ಈ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಅದನ್ನು ಯಥಾವತ್ತು ಜರಿಗೊಳಿಸಬೇಕೆಂದು ಆಗ್ರಹಿಸಿ ಸಿಐಟಿಯು ಜಿ ಸಮಿತಿ ಇಂದು ಜಿ ಕಾರ್ಮಿಕ ಅಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ, ಕಾರ್ಮಿಕ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದ ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠವೇತನದ ಪ್ರಕಟಣೆಗೆ ಒತ್ತಾಯಿಸಿ, ಮನವಿ ಸಲ್ಲಿಸಿದ ಸಿಐಟಿಯು ಕನಿಷ್ಠವೇತನ ಸಲಹಾ ಮಂಡಳಿಯು ತಮ್ಮ ಅಭಿಪ್ರಾಯವನ್ನು ೨೦೨೫ ಆಗಷ್ಟ್ ನಲ್ಲಿ ಸರ್ಕಾರಕ್ಕೆ ಸಲ್ಲಿಸಿ, ಹಲವು ತಿಂಗಳು ಕಳೆದರೂ ವೈeನಿಕವಾದ ಹಾಗೂ ಕಾನೂನುಬದ್ಧವಾದ ಕನಿಷ್ಠ ವೇತನದ ಅಂತಿಮ ಪ್ರಕಟಣೆ ಇನ್ನೂ ಆಗಿಲ್ಲ. ಇದು ಸರ್ಕಾರಕ್ಕೆ ನ್ಯಾಯಸಮ್ಮತವಲ್ಲ, ಕನಿಷ್ಠ ವೇತನ ಪರಿಷ್ಕರಣೆಯಾಗಿ ಏಳುವರ್ಷ ಕಳೆದಿರುವ ಹಿನ್ನಲೆಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಾಗೂ ಲಕ್ಷಾಂತರ ದುರ್ಬಲ ಕಾರ್ಮಿಕ ವರ್ಗಕ್ಕೆ ಆರ್ಥಿಕ ಸ್ವಾವಲಂಬನೆ ಯನ್ನು ಖಾತರಿಪಡಿಸುವ ಕನಿಷ್ಠ ವೇತನದ ಪ್ರಕಟಣೆಯನ್ನು ಕೂಡಲೇ ರಾಜ್ಯ ಸರ್ಕಾರ ಮಾಡಬೇಕೆಂದು ಸಿಐಟಿಯು ಆಗ್ರಹಿಸಿದೆ.
ಪ್ರಮುಖರಾದ ಎಂ. ನಾರಾಯಣ್, ಷಣ್ಮುಖಪ್ಪ, ತುಳಸಿಪ್ರಭ, ರಾಕೇಶ್, ಹನುಮಮ್ಮ, ಕೆ.ಎಲ್.ರಾವ್, ಮುನಿರಾಜು, ಸುಂದರ್, ನಾಗರತ್ನ, ಬಂಗಾರಪ್ಪ ಸೇರಿದಂತೆ ಹಲವರು ಇದ್ದರು.

