ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬಿಇಒ ನಾಗೇಂದ್ರ – ಜರ್ನಲಿಸ್ಟ್ ಮಂಜುನಾಥ್‌ರನ್ನು ರೆಡ್‌ಹ್ಯಾಂಡ್ ಆಗಿ ಬಲೆಗೆ ಕೆಡವಿದ ಲೋಕಾಯುಕ್ತ…

Share Below Link

ಭದ್ರಾವತಿ: ಹಳೇ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ೧ ಲಕ್ಷ ರೂ. ಲಂಚದ ಹಣ ಪಡೆಯುವಾಗ ಲೋಕಾಯು ಕ್ತರು ನಡೆಸಿದ ದಾಳಿಗೆ ಬಿಇಓ ಎ.ಕೆ ನಾಗೇಂದ್ರಪ್ಪ ಹಾಗೂ ಪತ್ರಕರ್ತ ಎಂದು ಹೇಳಿಕೊಂಡು ಓಡಾಡುತ್ತಿದ್ದ ಮಂಜುನಾಥ್ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಲಿಂಗರಾಜು ಅವರಿಗೆ ೨೦೧೧ನೇ ಸಾಲಿನಿಂದ ೨೦೨೩ನೇ ಸಾಲಿನ ಅವಧಿಯಲ್ಲಿ ಇಲಾಖೆ ಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿಗಳು ಮತ್ತು ಇತರೆ ಭತ್ಯೆಗಳು ಸೇರಿ ಎ ಆರ್ಥಿಕ ಸೌಲಭ್ಯಗಳನ್ನು ನೀಡಲು ೪ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಈ ಪೈಕಿ ೧ ಲಕ್ಷ ರು. ಹಣ ಪಡೆಯುವಾಗ ಈ ದಾಳಿ ನಡೆಸಲಾಗಿದೆ.
ಲಿಂಗರಾಜು ಅವರು ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗು ಜಿ ಉಪನಿರ್ದೇಶಕರಿಗೆ ಮತ್ತು ಮೇಲಾಧಿಕರಿಗಳಿಗೆ ಮನವಿ ಸಲ್ಲಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಅವರು ಪತ್ರಕರ್ತ ಮಂಜುನಾಥ್ ನೆರವಿನೊಂದಿಗೆ ಒಟ್ಟು ೪ ಲಕ್ಷ ರು. ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿತ್ತು. ಈ ಹಿನ್ನಲೆಯಲ್ಲಿ ಸಂಜೆ ೭ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಕೊಠಡಿಯಲ್ಲಿ ಎ.ಕೆ ನಾಗೇಂದ್ರದಪ್ಪ ಮತ್ತು ಮಂಜುನಾಥ್‌ರವರು ೧ ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದಾರೆ. ಎ.ಕೆ ನಾಗೇಂದ್ರಪ್ಪ ಮತ್ತು ಮಂಜುನಾಥ್ ರವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿzರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಮ್.ಎಸ್. ಕೌಲಾಪೂರೆ ಮಾರ್ಗದರ್ಶನ ದಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ವೀರಬಸಪ್ಪ. ಎಲ್ ಕುಸಲಾಪುರ, ಗುರುರಾಜ್.ಎನ್ ಮೈಲಾರ, ಸಿಬ್ಬಂದಿಗಳಾದ ಜಿ.ಸಿ ಯೋಗೇಶ್, ಎಂ. .ಮಂಜುನಾಥ್, ಟೀಕಪ್ಪ, ಎಚ್.ಜಿ ಸುರೇಂದ್ರ, ಎಚ್. ಪ್ರಶಾಂತ್ ಕುಮಾರ್, ಚನ್ನೇಶ, ಅರುಣ್ ಕುಮಾರ್, ವಿ. ದೇವರಾಜ್, ಪ್ರಕಾಶ್ ಬಾರಿಮರದ, ಆದರ್ಶ್, ಎಸ್. ಚಂದ್ರಿಬಾಯಿ, ಪ್ರದೀಪ, ಚೇತನ್, ತರುಣ್ ಕುಮಾರ್, ಡಿ.ಎಚ್ ಆಂಜನೇಯ, ಆನಂದ ಮತ್ತು ಗೋಪಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *