ಜಿಲ್ಲಾ ಸುದ್ದಿತಾಜಾ ಸುದ್ದಿಸಿನಿಮಾ

ಮಾ.೨: ನಿಜ ಮಹಾತ್ಮ ಬಾಬಾ ಸಾಹೇಬ ನಾಕಟ…

Share Below Link

ಶಿವಮೊಗ್ಗ, ಫೆ.೨೬: ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಮಾ.೨ರಂದು ಸಂಜೆ ೬ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ರಂಗಭೂಮಿ ಕೊಡಗು ಹಾಗೂ ಶಿವಮೊಗ್ಗ ತಂಡದ ವತಿಯಿಂದ ನಿಜ ಮಹಾತ್ಮ ಬಾಬಾ ಸಾಹೇಬ ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಖಜಾಂಚಿ ಕೆ.ಇ. ಕಾಂತೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ರತ್ನ ಬಿ.ಆರ್. ಅಂಬೇಡ್ಕರ್ ಅವರ ನೈಜ ಘಟನೆಗಳನ್ನು ಆಧಾರವಾಗಿಟ್ಟು ಕೊಂಡು ಈ ನಾಟಕ ಸಿದ್ಧಪಡಿಸ ಲಾಗಿದೆ. ಅವರ ಹೋರಾಟ, ಸಿದ್ಧಾಂತ ಮತ್ತು ರಾಷ್ಟ್ರಪ್ರೇಮದ ವಿವಿಧ ಮಜಲುಗಳನ್ನು ನಾಟಕ ಅನಾವರಣಗೊಳಿಸುತ್ತದೆ. ಖ್ಯಾತ ರಂಗಕರ್ಮಿ ಅಡ್ಡಾಂಡ ಕಾರ್ಯಪ್ಪ ಈ ನಾಟಕದ ನಿರ್ದೇಶನದ ಹೊಣೆ ಹೊತ್ತಿzರೆ. ಕೊಡಗಿನ ಪ್ರತಿಭಾನ್ವಿತ ಕಲಾವಿದರು ಅಭಿನಯಿಸುವರು. ಅಂಬೇಡ್ಕರ್ ಅವರ ಹೊಸ ಆಯಾಮಗಳನ್ನು ಪ್ರೇಕ್ಷಕರಿಗೆ ತಲುಪಿಸುವುದು ಇದರ ಉzಶವಾಗಿದೆ ಎಂದರು.
ಈ ನಾಟಕ ಪ್ರದರ್ಶನದ ಉದ್ಘಾಟನೆಯನ್ನು ಚಿತ್ರದುರ್ಗ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೆರವೇರಿಸು ವರು. ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಲಿzರೆ. ಈ ನಾಟಕಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ. ಆದರೆ, ಗೌರವ ಪ್ರವೇಶ ಪತ್ರವನ್ನು ನೀಡಲಾಗುವುದು. ಆದ್ದರಿಂದ ರಂಗ ಪ್ರೇಮಿಗಳು ಗೌರವ ಪ್ರವೇಶ ಪಡೆದು ಪ್ರದರ್ಶನಕ್ಕೆ ೧೦ ನಿಮಿಷ ಮುಂಚೆಯೇ ಆಗಮಿಸಬೇಕು ಎಂದು ಮನವಿ ಮಾಡಿದರು.
ಹೆಚ್ಚಿನ ವಿವರಗಳಿಗೆ ಮೊ. ೯೮೮೬೧ ೭೭೩೧೧, ೯೯೮೦೩ ೧೭೩೮೨ರಲ್ಲಿ ಸಂಪರ್ಕಿಸಲು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಪ್ರಮುಖರಾದ ಎಂ. ಶಂಕರ್, ಶ್ರೀ ಕೃಷ್ಣಾನಂದ, ಶ್ರೀಕಾಂತ್, ಶಿವಾಜಿ, ಚೇತನ್, ವಿನಯ್ ಇದ್ದರು.

Leave a Reply

Your email address will not be published. Required fields are marked *