ರಾಜ್ಯದಲ್ಲಿ ಹಿಂದೂಗಳ ಕೊಲೆ – ಗಾಂಜಾ ಹಾವಳಿ: ಈಶ್ವರಪ್ಪ ಆಕ್ರೋಶ
ಶಿವಮೊಗ್ಗ, ಫೆ.೨೬: ರಾಜ್ಯದಲ್ಲಿ ರುವ ಕಾಂಗ್ರೆಸ್ ಸರ್ಕಾರ ಅಧಿಕಾರದ ದಾಹದಲ್ಲಿ ಅಭಿವೃದ್ಧಿಯನ್ನೇ ಮರೆತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕಚ್ಚಾಟ ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಜೀವಂತವಾಗಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ ಅವರು, ಈಗಾಗಲೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಮತ್ತು ಸಚಿವ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಸೇರಿದಂತೆ ಗೃಹಸಚಿವ ಡಾ.ಜಿ. ಪರಮೇಶ್ವರ್, ಹಾಗೂ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರೂ ಕೂಡ ರೇಸ್‌ನಲ್ಲಿzರೆ. ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಒಳಜಗಳ ನಡೆಯುತ್ತಲೇ ಇದೆ. ಅವರವರ ಬೆಂಬಲಿಗರು ಹಾರಾಡುತ್ತಲೇ ಇzರೆ. ಇಷ್ಟೆ ರಾಮಾಯಣಗಳು ಇದ್ದರೂ ಕೂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹೈಕಮಾಂಡ್ ನಿಯಂತ್ರಿಸದೇ ಸತ್ತು ಹೋಗಿದೆ ಎಂದರು.

ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಲವರ ಪೈಪೋಟಿ ಇದ್ದರೂ ಕೂಡ ಡಿ.ಕೆ. ಶಿವಕುಮಾರ್ ಮತ್ತು ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪರಸ್ಪರ ಹೇಳಿಕೆಗಳನ್ನು ನೀಡುತ್ತಿzರೆ. ಅದೇ ಹಳೆಯ ಸ್ಲೋಗನ್ ಅನ್ನು ಇಬ್ಬರೂ ಹೇಳುತ್ತಿ zರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು. ಆದರೆ, ಹೈಕಮಾಂಡ್ ಸುಮ್ಮನಿದೆ. ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೂ ಕಿಮ್ಮತ್ ಇಲ್ಲವಾಗಿದೆ. ಎಷ್ಟು ದಿನ ಎಂದು ಈ ಇಬ್ಬರೂ ಶೀತಲ ಜಗಳ ಮಾಡುತ್ತಾರೆ. ಇದನ್ನು ಬಿಟ್ಟು ರಾಜ್ಯದ ಜನರ ಒಳಿತಿಗಾಗಿ ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಇಬ್ಬರೂ ಧರಣಿ ಕುಳಿತುಕೊಳ್ಳಲಿ. ಹೈಕಮಾಂಡ್‌ನಿಂದ ಸ್ಪಷ್ಟತೆಗೆ ಆಗ್ರಹಿಸಲಿ. ಆಗಲಾದರೂ ಹೈಕಮಾಂಡ್ ಇತ್ತ ಕಡೆ ದೃಷ್ಟಿ ಬೀರಬಹುದೆನೋ ಎಂದು ವ್ಯಂಗ್ಯವಾಡಿದರು.
ಹಿಂದೂಗಳ ಕೊಲೆಗಳ ತಾಂಡವ : ಗಾಂಜ ಹಾವಳಿ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲಿನ ದಾಳಿ ಹೆಚ್ಚಾಗುತ್ತಿದೆ. ನೆಲಮಂಗಲ, ಬಾಗಲಕೋಟೆ, ಶಿವಮೊಗ್ಗ ಹೀಗೆ ಎ ಕಡೆ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ರಾಜ್ಯ ಸರ್ಕಾರ ಮುಸ್ಲಿಮರನ್ನು ರಕ್ಷಣೆ ಮಾಡುತ್ತಿದೆ ಎಂಬ ಕಾರಣಕ್ಕಾಗಿ ಈ ಅವಾಂತರಗಳೆ ನಡೆಯುತ್ತಿವೆ. ಜೊತೆಗೆ ರಾಷ್ಟ್ರದ್ರೋಹಿ ಚಟುವಟಿಕೆ ಗಳು ಹೆಚ್ಚುತ್ತಿವೆ. ಕೊಲೆ, ಸುಲಿಗೆಗಳು ಮಿತಿಮೀರಿವೆ. ಗಾಂಜಾ ಹಾವಳಿ ಯಂತೂ ಇಡೀ ರಾಜ್ಯವನ್ನೇ ಆವರಿಸಿಕೊಂಡಿದೆ. ಇಡೀ ರಾಜ್ಯ ಒಂದು ರೀತಿ ಡ್ರಗ್ಸ್ ಫ್ಯಾಕ್ಟರಿ ಯಂತಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಆರೋಪಿಸಿದರು.

ಶಿವಮೊಗ್ಗದ ಸೂಳೆಬೈಲ್ ಘಟನೆಯನ್ನು ನೆನೆಸಿಕೊಂಡರೆ ಕಣ್ಣೀರು ಬರುತ್ತದೆ. ಅಪ್ರಾಪ್ತ ಹಿಂದೂ ಬಾಲಕನನ್ನು ಕೆಲವು ಮುಸ್ಲಿಂ ಅಪ್ರಾಪ್ತ ಬಾಲಕರು ಕೊಂದು ಹಾಕಿzರೆ. ಮಗನನ್ನು ಕಳೆದುಕೊಂಡ ಆ ತಾಯಿಯ ದುಃಖವನ್ನು ನಮ್ಮಿಂದ ನೋಡಲಾಗುವುದಿಲ್ಲ. ನಾನು ಎರಡು ದಿನ ನಿz ಮಾಡಿಲ್ಲ. ಇಂತಹ ಘಟನೆಗಳಿಗೆಲ್ಲ ಈ ರಾಜ್ಯ ಸರ್ಕಾರದ ಅವಾಂತರಗಳೇ ಕಾರಣ. ಮುಸ್ಲಿಂ ಗೂಂಡಾಗಳು ಹೆಚ್ಚಾಗುತ್ತಲೇ ಇzರೆ. ಈ ಹೊಸ ಟ್ರೆಂಡ್ ಹೇಡಿಗಳು ಮಕ್ಕಳನ್ನು ಬಿಟ್ಟು ಕೊಲೆ ಮಾಡಿಸುವತ್ತ ಯೋಚಿಸುತ್ತಿzರೆ. ಈ ಸರ್ಕಾರಕ್ಕೆ ಬುದ್ಧಿ ಬೇಡವೇ? ಯಾರ ಬಳಿ ಹೇಳುವುದು? ಸತ್ತ ಸರ್ಕಾರವನ್ನು ಎಚ್ಚರಿಸುವುದಾದರೂ ಹೇಗೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ಕೆ.ಇ. ಕಾಂತೇಶ್, ಎಂ. ಶಂಕರ್, ಶ್ರೀ ಕೃಷ್ಣಾನಂದ, ಶ್ರೀಕಾಂತ್, ಶಿವಾಜಿ, ಚೇತನ್ ಇದ್ದರು.

